
ಬೆಂಗಳೂರು: ಇನ್ನು ಮುಂದೆ ರಾಜ್ಯದ ಜನರು ಮಳೆ ಯಾವಾಗ ಬರುತ್ತದೆ. ಜೋರು ಮಳೆಯೇ ಅಥವಾ ತುಂತುರು ಮಳೆಯೇ ಮತ್ತಿತರ ಹವಾಮಾನ ಕುರಿತ ಮುನ್ನೆಚ್ಚರಿಕೆ ಹಾಗೂ ಮಾಹಿತಿಯನ್ನು ಸ್ಮಾರ್ಟ್ ಫೋನ್ ಗಳಲ್ಲಿ ಪಡೆಯಬಹುದಾಗಿದೆ.
ಹೌದು. Samsung, Realme, Mi, ಮತ್ತು Vivo ನಂತಹ ಗ್ಲಾನ್ಸ್ ಸ್ಮಾರ್ಟ್ ಪೋನ್ ಲಾಕ್ ಸ್ಕ್ರೀನ್ ನಲ್ಲಿ ರಾಷ್ಟ್ರೀಯ ಹವಾಮಾನ ಕುರಿತು ಮುನ್ನೆಚ್ಚರಿಕೆ, ಮಾಹಿತಿ ನೀಡಲು ಬೆಂಗಳೂರು ಮೂಲದ ಜಾಗತಿಕ ಆ್ಯಪ್ InMobi's 1Weather ನೊಂದಿಗೆ ಭಾರತೀಯ ಹವಾಮಾನ ಇಲಾಖೆ ಒಪ್ಪಂದ ಮಾಡಿಕೊಂಡಿದೆ.
ಇದರಿಂದ ದೇಶದ 235 ಮಿಲಿಯನ್ ಭಾರತೀಯ ಸ್ಮಾರ್ಟ್ ಫೋನ್ ಬಳಕೆದಾರರು ತಮ್ಮ ಫೋನ್ ಅನ್ ಲಾಕ್ ಮಾಡದೆಯೇ ಕೆಟ್ಟ ಹವಾಮಾನ ಪರಿಸ್ಥಿತಿಗಳ ಬಗ್ಗೆ ನಿರಂತರವಾಗಿ ಮಾಹಿತಿ ಪಡೆಯಬಹುದಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ.
ಸ್ಮಾರ್ಟ್ AI ಬಳಕೆ, InMobi ಮತ್ತು 1Weather ನಂತಹ ಕಾರ್ಯತಂತ್ರ ಪಾಲುದಾರಿಕೆಯೊಂದಿಗೆ ವೇಗವಾಗಿ ಜೀವ ಉಳಿಸುವ ಹವಾಮಾನ ಕುರಿತು ಮಾಹಿತಿ ನೀಡುತ್ತೇವೆ ಎಂದು IMD ಮಹಾನಿರ್ದೇಶಕ ಮೃತ್ಯುಂಜಯ ಮೋಹಾಪಾತ್ರ ತಿಳಿಸಿದ್ದಾರೆ.
ಚಂಡಮಾರುತ, ಅತಿವೃಷ್ಟಿ ಮತ್ತು ಅನಾವೃಷ್ಟಿಯನ್ನು ಮೂರರಿಂದ 5 ದಿನಗಳ ಮುಂಚಿತವಾಗಿಯೇ ಊಹಿಸಬಹುದಾಗಿದೆ. ಹೆಚ್ಚಿನ ಜೀವ ಮತ್ತು ಆಸ್ತಿ ಪಾಸ್ತಿ ನಷ್ಟ ಸಂಭವಿಸದಂತೆ ಜನರು ಸಿದ್ಧತೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗುತ್ತಿದೆ. ಸ್ಥಳೀಯವಾಗಿ ಭಾರೀ ಮಳೆ, ಗುಡುಗು, ಆಲಿಕಲ್ಲು, ಅಥವಾ ಧೂಳಿನ ಗಾಳಿಯಂತಹ ಅಲ್ಪಾವಧಿಯ ಘಟನೆಗಳಿಗೆ ಸಮಯೋಚಿತ ಮುನ್ನೆಚ್ಚರಿಕೆಯನ್ನು 1 ವೆದರ್ ಆ್ಯಪ್ ಮೂಲಕ ನೀಡಲಾಗುತ್ತಿದೆ.
ಗ್ಲಾನ್ಸ್ AI ಚಾಲಿತ ವೇದಿಕೆ ಆಗಿದ್ದು, ಇದು ಸಂಬಂಧಿತ ಮಾಹಿತಿಯನ್ನು ನೇರವಾಗಿ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಲಾಕ್ ಸ್ಕ್ರೀನ್‌ಗಳಿಗೆ ತಲುಪಿಸುತ್ತದೆ. ಇದರಿಂದ ಬಳಕೆದಾರರು ತಮ್ಮ ಫೋನ್‌ಗಳನ್ನು ಅನ್‌ಲಾಕ್ ಮಾಡದೆಯೇ ಮಾಹಿತಿ ಪಡೆಯಬಹುದಾಗಿದೆ ಎಂದು 1 1Weatherನ ಉಪಾಧ್ಯಕ್ಷ ಮತ್ತು ಜನರಲ್ ಮ್ಯಾನೇಜರ್ ಶ್ರೀಕಾಂತ್ ಸುಬ್ರಮಣಿಯನ್ ಹೇಳಿದ್ದಾರೆ.
"1Weather ಮತ್ತು IMD ನಡುವಿನ ಈ ರೀತಿಯ ಸಹಯೋಗದಿಂದ ಆಂಡ್ರಾಯ್ಡ್ ಲಾಕ್ ಸ್ಕ್ರೀನ್‌ಗಳಲ್ಲಿಯೇ ಕೆಟ್ಟ ಹವಾಮಾನದ ಬಗ್ಗೆ ಬಳಕೆದಾರರನ್ನು ಎಚ್ಚರಿಸುತ್ತದೆ. ಅಲ್ಲದೇ ಸಿದ್ಧತಾ ಕಾರ್ಯಕ್ಕೆ ನೆರವಾಗಲಿದೆ. ಅನೇಕ ಜನರ ಪ್ರಾಣ ಉಳಿಸಲಿದೆ ಎಂದು ಸುಬ್ರಮಣಿಯನ್ ತಿಳಿಸಿದರು. ದೇಶದಲ್ಲಿ ಎಲ್ಲಾ ಪ್ರಮುಖ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬ್ರ್ಯಾಂಡ್‌ಗಳಲ್ಲಿನ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಈ ಆ್ಯಪ್ ಲಭ್ಯವಿದೆ.
Advertisement