
ರಾಮನಗರ: ರಾಮನಗರ ಜಿಲ್ಲೆಯ ಬಿಡದಿಯಲ್ಲಿ 20 ವರ್ಷದ ಯುವತಿ ಮೇಲೆ ಅಸ್ಸಾಂ ಮೂಲದ ಯುವಕ ಅತ್ಯಾಚಾರ ಎಸಗಿರುವ ಘಟನೆ ಬುಧವಾರ ನಡೆದಿದೆ.
ಬಿಡದಿ ಬಡಾವಣೆಯಲ್ಲಿ ಯುವತಿಯ ಪಕ್ಕದ ಮನೆಯಲ್ಲಿ ವಾಸವಿದ್ದ ಆರೋಪಿ ಮಂಜೂರ್ ಆಲಂ ಈ ಪೈಶಾಚಿಕ ಕೃತ್ಯ ಎಸಗಿದ್ದಾನೆ.
ಸ್ನಾನ ಮಾಡಲು ಬಾತ್ ರೂಮ್ ಗೆ ತೆರಳುತ್ತಿದ್ದ ಯುವತಿಯನ್ನು ಮಂಜೂರ್ ಆಲಂ ತನ್ನ ರೂಮ್ ಗೆ ಹೊತ್ತೊಯ್ದು ಅತ್ಯಾಚಾರ ಎಸಗಿದ್ದಾನೆ.
ಈ ವೇಳೆ ಯುವತಿಯ ಚೀರಾಟ ಕೇಳಿದ ಸ್ಥಳೀಯರು ಘಟನೆ ನಂತರ ತಪ್ಪಿಸಿಕೊಳ್ಳುತ್ತಿದ್ದ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಸದ್ಯ ಅಸ್ಸಾಂ ಮೂಲದ ಮಂಜೂರ್ ಆಲಂ ಎಂಬಾತನನ್ನು ಬಿಡದಿ ಪೊಲೀಸ್ ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
Advertisement