ವೀಲ್ಹಿಂಗ್: ಕ್ರಮಕ್ಕೆ ಮುಂದಾಗದ ಪೊಲೀಸರು; ಪ್ರತಿಕ್ರಿಯೆ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶ

ಈ ಸಮಸ್ಯೆ ವಿರುದ್ಧ ಸರ್ಕಾರ ಏನು ಮಾಡುತ್ತಿದೆ ಎಂದು ನ್ಯಾಯಾಲಯ ಪ್ರಶ್ನಿಸಿತು. ಬೆಂಗಳೂರಿನಲ್ಲಿರುವ ಎಲ್ಲರಿಗೂ ಅದರ ಬಗ್ಗೆ ತಿಳಿದಿದೆ. ಇದು ಬೆಂಗಳೂರಿನಲ್ಲಿ ಭಾರೀ ಅನಾಹುತ ಉಂಟು ಮಾಡುತ್ತಿದೆ. ಅಪಘಾತ ಮತ್ತು ಸಾವುಗಳು ವರದಿಯಾಗಿವೆ.
Bike wheeling Casual Images
ವೀಲ್ಹಿಂಗ್ ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ನಗರದಲ್ಲಿ ಇಪ್ಪತ್ತರ ಆಸುಪಾಸಿನ ಹದಿಹರೆಯದ ಯುವಕರು, ಹಿಂಬದಿಯಲ್ಲಿ ಇಬ್ಬರನ್ನು ಕೂರಿಸಿಕೊಂಡು ತ್ರಿಬಲ್ ಬೈಕ್ ರೈಡಿಂಗ್ ಮಾಡುವುದು, ಕೆಲವರು ಪೊಲೀಸರ ಭಯವಿಲ್ಲದೆ ವೀಲ್ಹಿಂಗ್ ಮಾಡುವುದರಿಂದ ಭಾರೀ ಅನಾಹುತ ಉಂಟಾಗುತ್ತಿದೆ. ಅಲ್ಲದೇ ಅಪಘಾತಗಳು ಮತ್ತು ಸಾವುಗಳು ಸಂಭವಿಸುತ್ತಿವೆ ಎಂದು ಹೈಕೋರ್ಟ್ ಬುಧವಾರ ಹೇಳಿದ್ದು, ಈ ಕುರಿತು ಪ್ರತಿಕ್ರಿಯೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.

ಈ ಸಂಬಂಧ ಶಿವಮೊಗ್ಗದ ಕಟೀಲು ಅಶೋಕ್ ಪೈ ಮೆಮೋರಿಯಲ್ ಕಾಲೇಜಿನ ಸೈಕಾಲಜಿ ವಿಭಾಗದ ಸಹ ಪ್ರಾಧ್ಯಾಪಕಿ ಹಾಗೂ ಮುಖ್ಯಸ್ಥೆ ಡಾ.ಅರ್ಚನಾ ಭಟ್ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಎನ್‌ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಎಂಐ ಅರುಣ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.

ಬೈಕ್ ನಲ್ಲಿ ಹಿಂಬದಿ ಸವಾರಿ ಮಾಡುವ ಒಂಬತ್ತು ತಿಂಗಳಿನಿಂದ ನಾಲ್ಕು ವರ್ಷದವರೆಗಿನ ಮಕ್ಕಳ ಸುರಕ್ಷತೆಗೆ ಹೆಲ್ಮೆಟ್‌ಗಳನ್ನು ಧರಿಸುವುದರ ಕುರಿತು ಕಾನೂನು ಜಾರಿಗೊಳಿಸುವ ಬಗ್ಗೆ ಡಾ. ಅರ್ಚನಾ ಭಟ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಮಕ್ಕಳ ಹೆಲ್ಮೆಟ್‌ ಕುರಿತು ಈಗಿರುವ ನಿಯಮಗಳನ್ನು ಜಾರಿಗೊಳಿಸುವ ಕುರಿತು ನ್ಯಾಯಾಲಯ ಸರ್ಕಾರಿ ವಕೀಲರಿಗೆ ಮೌಖಿಕವಾಗಿ ಸೂಚಿಸಿತು. ಬೆಂಗಳೂರಿನಲ್ಲಿ ಯುವಕರು ಮತ್ತು ಹದಿಹರೆಯದವರು ತ್ರಿಬಲ್ ರೈಡಿಂಗ್ ಮಾಡುವುದು, ಕೆಲವು ಪ್ರದೇಶಗಳಲ್ಲಿ ವೀಲ್ದಿಂಗ್ ಮಾಡುವುದು ಕಂಡುಬಂದಿದೆ, ಆದರೆ ಪೊಲೀಸರು ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಮೌಖಿಕವಾಗಿ ಹೇಳಿತು.

ಈ ಸಮಸ್ಯೆ ವಿರುದ್ಧ ಸರ್ಕಾರ ಏನು ಮಾಡುತ್ತಿದೆ ಎಂದು ನ್ಯಾಯಾಲಯ ಪ್ರಶ್ನಿಸಿತು. ಬೆಂಗಳೂರಿನಲ್ಲಿರುವ ಎಲ್ಲರಿಗೂ ಅದರ ಬಗ್ಗೆ ತಿಳಿದಿದೆ. ಇದು ಬೆಂಗಳೂರಿನಲ್ಲಿ ಭಾರೀ ಅನಾಹುತ ಉಂಟು ಮಾಡುತ್ತಿದೆ. ಅಪಘಾತ ಮತ್ತು ಸಾವುಗಳು ವರದಿಯಾಗಿವೆ. ಹೀಗಾಗಿ ಈಗ ಅನುಷ್ಟಾನಗೊಳಿಸಿರುವ ಕಾನೂನುಗಳ ಬಗ್ಗೆ ಸರ್ಕಾರ ಮಾರ್ಚ್ 17ರೊಳಗೆ ತನ್ನ ಪ್ರತಿಕ್ರಿಯೆ ಸಲ್ಲಿಸಬೇಕು ಎಂದು ಹೇಳಿ ನ್ಯಾಯಾಲಯ ವಿಚಾರಣೆಯನ್ನು ಮುಂದೂಡಿತು.

Bike wheeling Casual Images
ಬೆಂಗಳೂರು: ಬೈಕ್ ವೀಲ್ಹಿಂಗ್ ಮಾಡುತ್ತಿದ್ದ 17 ಯುವಕರ ಬಂಧನ

ಮಕ್ಕಳ ಹೆಲ್ಮೆಟ್ ತಯಾರಕರೊಂದಿಗೆ ಸಾರಿಗೆ ಇಲಾಖೆ ಸಭೆ ನಡೆಸಿದ್ದು, ಅವುಗಳು ಮಕ್ಕಳ ಹೆಲ್ಮೆಟ್‌ ತಯಾರಿಸಲು ಐದರಿಂದ ಆರು ತಿಂಗಳ ಸಮಯದ ಅಗತ್ಯವಿದೆ.ಆದ್ದರಿಂದ ಪ್ರತಿಕ್ರಿಯೆ ಸಲ್ಲಿಸಲು ಸಮಯ ಬೇಕಾಗುತ್ತದೆ ಎಂದು ಸರ್ಕಾರಿ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com