ಮುಡಾ ಪ್ರಕರಣ: ತನಿಖೆಯಲ್ಲಿ ಸಿಎಂ ಸಿದ್ದರಾಮಯ್ಯ, ಪತ್ನಿ ಪಾರ್ವತಿ, ಅಧಿಕಾರಗಳ ಹೆಸರು ಸೇರ್ಪಡೆ

2002 ರ ಹಣ ವರ್ಗಾವಣೆ ತಡೆ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಜಾರಿ ಪ್ರಕರಣ ಮಾಹಿತಿ ವರದಿ ಆಧರಿಸಿ ಲೋಕಾಯುಕ್ತ ಪೊಲೀಸರ ಎಫ್‌ಐಆರ್ ಆಧರಿಸಿ, ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಜಾರಿ ನಿರ್ದೇಶನಾಲಯ ಸಿದ್ದರಾಮಯ್ಯ, ಪಾರ್ವತಿ ಮತ್ತು ಇತರರ ವಿರುದ್ಧ ಕೇಸು ದಾಖಲಿಸಿತ್ತು.
ಮುಡಾ ಪ್ರಕರಣ: ತನಿಖೆಯಲ್ಲಿ ಸಿಎಂ ಸಿದ್ದರಾಮಯ್ಯ, ಪತ್ನಿ ಪಾರ್ವತಿ, ಅಧಿಕಾರಗಳ ಹೆಸರು ಸೇರ್ಪಡೆ
Updated on

ಬೆಂಗಳೂರು: 56 ಕೋಟಿ ರೂಪಾಯಿಗಳ ಭೂ ಮಂಜೂರಾತಿ ಹಗರಣ ತನಿಖೆಯಲ್ಲಿ ಸಿಎಂ ಸಿದ್ದರಾಮಯ್ಯ, ಅವರ ಪತ್ನಿ ಬಿ.ಎಂ. ಪಾರ್ವತಿ, ಬಾಮೈದ ಮಲ್ಲಿಕಾರ್ಜುನ ಸ್ವಾಮಿ, ಭೂಮಾಲೀಕ ದೇವರಾಜು ಮತ್ತು ಮುಡಾದ ಕೆಲವು ಉನ್ನತ ಅಧಿಕಾರಿಗಳ ಹೆಸರುಗಳನ್ನು ಸೇರಿಸಲಾಗಿದೆ.

ಜನವರಿ 17 ರಂದು ಜಾರಿ ನಿರ್ದೇಶನಾಲಯ 142 ನಿವೇಶನಗಳಿಗೆ ಹೊರಡಿಸಿದ ತಾತ್ಕಾಲಿಕ ಜಪ್ತಿ ಆದೇಶವು (PAO)ದಲ್ಲಿ ಹೆಚ್ಚಿನವು ರಿಯಲ್ ಎಸ್ಟೇಟ್ ಏಜೆಂಟ್‌ಗಳಿಗೆ ಸೇರಿವೆ. ಈ ತಾತ್ಕಾಲಿಕ ಜಪ್ತಿ ಆದೇಶವು ಸಿಎಂ ಮತ್ತು ಇತರರನ್ನು ಸಾರ್ವಜನಿಕ ಸೇವಕರು ಮತ್ತು ಖಾಸಗಿ ವ್ಯಕ್ತಿಗಳು, ಸುಳ್ಳು ಸಂಗತಿಗಳು, ನಕಲಿ ದಾಖಲೆಗಳು, ವಂಚನೆ ಮತ್ತು ಅನಗತ್ಯ ಪ್ರಭಾವವನ್ನು ಬಳಸಿಕೊಂಡು ಭೂ ಸ್ವಾಧೀನಕ್ಕೆ ಪರಿಹಾರದ ನೆಪದಲ್ಲಿ ಮುಡಾದಿಂದ ಅಕ್ರಮವಾಗಿ ನಿವೇಶನಗಳನ್ನು ಪಡೆಯಲು ಅಪ್ರಾಮಾಣಿಕವಾಗಿ ಮತ್ತು ಪಿತೂರಿಯಿಂದ ಸಹಕರಿಸಿದ್ದಾರೆ ಎಂದು ಆರೋಪಿಸಿದೆ.

2002 ರ ಹಣ ವರ್ಗಾವಣೆ ತಡೆ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಜಾರಿ ಪ್ರಕರಣ ಮಾಹಿತಿ ವರದಿ ಆಧರಿಸಿ ಲೋಕಾಯುಕ್ತ ಪೊಲೀಸರ ಎಫ್‌ಐಆರ್ ಆಧರಿಸಿ, ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಜಾರಿ ನಿರ್ದೇಶನಾಲಯ ಸಿದ್ದರಾಮಯ್ಯ, ಪಾರ್ವತಿ ಮತ್ತು ಇತರರ ವಿರುದ್ಧ ಕೇಸು ದಾಖಲಿಸಿತ್ತು.

ಜಾರಿ ನಿರ್ದೇಶನಾಲಯ, ಇಸಿಐಆರ್ ನಲ್ಲಿ ಕೈಗೊಂಡ ತನಿಖೆಯು ಇಲ್ಲಿಯವರೆಗೆ ಪಾರ್ವತಿ ಅವರ ಸಹೋದರ ಮಲ್ಲಿಕಾರ್ಜುನ ಸ್ವಾಮಿ ಅವರು ಉಡುಗೊರೆಯಾಗಿ ನೀಡಿದ 14 ನಿವೇಶನಗಳನ್ನು "ಮುಡಾದ ಅಧಿಕಾರಿಗಳೊಂದಿಗೆ ಶಾಮೀಲಾಗಿ ಪ್ರಭಾವ ಬೀರಿ ಅಕ್ರಮವಾಗಿ ಹಂಚಿಕೆ ಮಾಡಲಾಗಿದೆ ಎಂದು ಬಹಿರಂಗಪಡಿಸಿದೆ. PMLA, 2002 ರ ಅಡಿಯಲ್ಲಿ ತನಿಖೆಯನ್ನು ಪ್ರಾರಂಭಿಸಿದ ನಂತರ ಈ 14 ನಿವೇಶನಗಳನ್ನು ಅವರು ಹಿಂತಿರುಗಿಸಿದ್ದಾರೆ. ನಿವೇಶನಗಳ ಅಕ್ರಮ ಹಂಚಿಕೆ ಒಂದೇ ಒಂದು ಘಟನೆಯಲ್ಲ.

ಮುಡಾ ಅಧಿಕಾರಿಗಳು ಮತ್ತು ರಿಯಲ್ ಎಸ್ಟೇಟ್ ಉದ್ಯಮಿಗಳು/ಪ್ರಭಾವಿ ವ್ಯಕ್ತಿಗಳ ನಡುವೆ ಆಳವಾಗಿ ಬೇರೂರಿರುವ ಸಂಬಂಧವಿದೆ. ನಗದು, ಸ್ಥಿರ ಆಸ್ತಿಗಳು, ವಾಹನಗಳು ಇತ್ಯಾದಿಗಳ ವಿರುದ್ಧ ಮುಡಾ ಅಧಿಕಾರಿಗಳು ಹೆಚ್ಚಿನ ಸಂಖ್ಯೆಯ ಅಕ್ರಮ ಹಂಚಿಕೆಗಳನ್ನು ಮಾಡಿದ್ದಾರೆ.

ಮುಡಾ ಪ್ರಕರಣ: ತನಿಖೆಯಲ್ಲಿ ಸಿಎಂ ಸಿದ್ದರಾಮಯ್ಯ, ಪತ್ನಿ ಪಾರ್ವತಿ, ಅಧಿಕಾರಗಳ ಹೆಸರು ಸೇರ್ಪಡೆ
ಮುಡಾ ಮಾಜಿ ಆಯುಕ್ತರ ವಿರುದ್ಧ ಕ್ರಮ ಕಾನೂನುಬಾಹಿರ, ಕಾನೂನು ದುರುಪಯೋಗ: ಇಡಿಗೆ ಹೈಕೋರ್ಟ್ ತಪರಾಕಿ

ಪಾರ್ವತಿ ಅವರ ಪ್ರಕರಣದಲ್ಲಿ ಅಕ್ರಮ ಹಂಚಿಕೆ ಕುರಿತು, ಕೆಸಾರೆ ಗ್ರಾಮದ ಸರ್ವೆ ಸಂಖ್ಯೆ 464 ರಲ್ಲಿ 3 ಎಕರೆ 16 ಗುಂಟೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಪ್ರಾಥಮಿಕ ಅಧಿಸೂಚನೆಯನ್ನು 18.9.1992 ರ ಅಧಿಸೂಚನೆಯ ಮೂಲಕ ಹೊರಡಿಸಲಾಗಿದೆ. ಅಂತಿಮ ಅಧಿಸೂಚನೆಯನ್ನು 20.8.1997 ರಂದು ಹೊರಡಿಸಲಾಗಿದೆ ಎಂದು ಇಡಿ ಹೇಳಿದೆ.

ಎರಡೂ ಅಧಿಸೂಚನೆಗಳ ಪ್ರಕಾರ ಭೂಮಾಲೀಕ ನಿಂಗಾ ಅಲಿಯಾಸ್ ಜವ್ರಾ, ಅವರು ನಿಧನರಾಗಿದ್ದು, ಡಿನೋಟಿಫಿಕೇಶನ್ ಪ್ರಕ್ರಿಯೆಯು ಯಾವುದೇ ತಾರ್ಕಿಕ, ಚರ್ಚೆ ಅಥವಾ ದಾಖಲೆಗಳ ವಿಶ್ಲೇಷಣೆಯನ್ನು ಆಧರಿಸಿರಲಿಲ್ಲ. ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದ ಶಾಸಕರಾಗಿದ್ದ ಸಂದರ್ಭದಲ್ಲಿ ಡಿನೋಟಿಫಿಕೇಶನ್ ಬಗ್ಗೆ ಚರ್ಚಿಸುವ ಸಭೆಗೆ ಹಾಜರಾಗಲಿಲ್ಲ. ಡಿನೋಟಿಫಿಕೇಶನ್ ಕೈಗೊಂಡ ಅವಧಿಯಲ್ಲಿ ಅವರು ಡಿಸಿಎಂ ಕೂಡ ಆಗಿದ್ದರು

ಸುಮಾರು 1,095 ಮುಡಾ ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡಲಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ ಎಂದು ಇಡಿ ತಿಳಿಸಿದೆ.

ಮುಡಾ ಪ್ರಕರಣ: ತನಿಖೆಯಲ್ಲಿ ಸಿಎಂ ಸಿದ್ದರಾಮಯ್ಯ, ಪತ್ನಿ ಪಾರ್ವತಿ, ಅಧಿಕಾರಗಳ ಹೆಸರು ಸೇರ್ಪಡೆ
MUDA case: ಸಿದ್ದರಾಮಯ್ಯ ಪತ್ನಿ, ಬೈರತಿ ಸುರೇಶ್ ED ಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ- ಬಿವೈ ವಿಜಯೇಂದ್ರ

ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯ್ದೆ, 1987, ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳು (ಸ್ವಾಧೀನಪಡಿಸಿಕೊಂಡ ಭೂಮಿಗೆ ಪರಿಹಾರದ ಬದಲಾಗಿ ನಿವೇಶನಗಳ ಹಂಚಿಕೆ) ನಿಯಮಗಳು, 2009 (ಕಾಲಕಾಲಕ್ಕೆ ತಿದ್ದುಪಡಿ ಮಾಡಿದಂತೆ) ಮತ್ತು ಕರ್ನಾಟಕ ಅಭಿವೃದ್ಧಿ ಪ್ರಾಧಿಕಾರಗಳ ಕಾಯ್ದೆ (ಸ್ವಯಂಪ್ರೇರಿತ ಭೂಮಿ ಶರಣಾಗತಿಗೆ ಪ್ರೋತ್ಸಾಹ ಯೋಜನೆ) ನಿಯಮಗಳು, 1991 ರಲ್ಲಿ ನಿಗದಿಪಡಿಸಲಾದ ಶಾಸನಬದ್ಧ ನಿಬಂಧನೆಗಳನ್ನು ಉಲ್ಲಂಘಿಸಿ, ನಿಜವಾದ ಭೂ ಮಾಲೀಕರಲ್ಲದ ವ್ಯಕ್ತಿಗಳ ಹೆಸರಿನಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಇಡಿ ಹೇಳಿಕೊಂಡಿದೆ.

ಮುಡಾದಿಂದ ಭೂ ಸ್ವಾಧೀನಕ್ಕೆ ಪರಿಹಾರವಾಗಿ ಅಕ್ರಮ ಹಂಚಿಕೆ ಮತ್ತು ಸ್ವಯಂಪ್ರೇರಿತ ಭೂಮಿ ಶರಣಾಗತಿಗೆ ಪ್ರೋತ್ಸಾಹಕವಾಗಿಯೂ ಸಹ ರಚಿಸಲಾಗಿದೆ ಎಂದು ಸಂಸ್ಥೆ ಹೇಳಿದೆ. ಅಕ್ರಮವಾಗಿ ಹಂಚಿಕೆಯಾದ ನಿವೇಶನಗಳನ್ನು (ಅಪರಾಧದ ಆದಾಯ) ಮತ್ತಷ್ಟು ಕಳಂಕರಹಿತ ಆಸ್ತಿಗಳಾಗಿ ಬಿಂಬಿಸಲಾಗಿದೆ, ಇವುಗಳನ್ನು ಮುಡಾದಿಂದ ಪರಿಹಾರ ಮತ್ತು ಪ್ರೋತ್ಸಾಹಕವಾಗಿ ಪಡೆಯಲಾಗುತ್ತಿದೆ. ಅಪರಾಧದ ಅಂತಹ ಆದಾಯವನ್ನು ಜನರಲ್ ಪವರ್ ಆಫ್ ಅಟಾರ್ನಿ, ಇತ್ಯರ್ಥ ಪತ್ರಗಳು, ಪರಿಗಣನೆ ಪಾವತಿ ಇಲ್ಲದೆ ಮಾರಾಟ ಪತ್ರಗಳು ಇತ್ಯಾದಿಗಳ ಮೂಲಕ ವರ್ಗಾಯಿಸಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com