CM Siddaramaiah participated in the World Press Day celebration program.
ವಿಶ್ವ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಪಾಲ್ಗೊಂಡಿದ್ದರು.

ದ್ವೇಷ ಭಾಷಣ, ನಕಲಿ ಸುದ್ದಿಗಳ ವಿರುದ್ಧ FIR ದಾಖಲಿಸಿ: ಪೊಲೀಸರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

ನಮಗೆ ದ್ವೇಷವಿಲ್ಲದ ಸಮಾಜ ಬೇಕು, ಆದರೆ, ಕೆಲವರು ಅಶಾಂತಿಯುಕ್ತ ಸಮಾಜವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ.
Published on

ಬೆಂಗಳೂರು: ದ್ವೇಷ ಭಾಷಣ, ನಕಲಿ ಸುದ್ದಿಗಳ ದ್ವೇಷ ಭಾಷಣ, ನಕಲಿ ಸುದ್ದಿಗಳ ರಾಜ್ಯ ಸರ್ಕಾರ ಕಾನೂನು ಜಾರಿಗೆ ತರುತ್ತಿದ್ದು, ಪೊಲೀಸರು ಇಂತಹ ಬೆಳವಣಿಗೆ ವಿರುದ್ಧ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಹೇಳಿದ್ದಾರೆ.

ಕರ್ನಾಟಕ ಮಾಧ್ಯಮ ಅಕಾಡೆಮಿ ಮಂಗಳವಾರ ಆಯೋಜಿಸಿದ್ದ ವಿಶ್ವ ಪತ್ರಿಕಾ ದಿನಾಚರಣೆಯ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ದ್ವೇಷ ಭಾಷಣದ ವಿರುದ್ಧ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಬೇಕೆಂದು ಹೇಳಿದರು.

ನಮಗೆ ದ್ವೇಷವಿಲ್ಲದ ಸಮಾಜ ಬೇಕು, ಆದರೆ, ಕೆಲವರು ಅಶಾಂತಿಯುಕ್ತ ಸಮಾಜವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಮಾಧ್ಯಮಗಳು ಸಿಎಂ ಅಥವಾ ಪ್ರಧಾನಿಯನ್ನು ಮೆಚ್ಚಿಸುವಲ್ಲಿ ತೊಡಗಬಾರದು, ಸತ್ಯಗಳನ್ನಷ್ಟೇ ವರದಿ ಮಾಡಬೇಕು ಎಂದು ತಿಳಿಸಿದರು.

ದಲಿತರು, ಒಬಿಸಿಗಳು ಮತ್ತು ದೀನದಲಿತರಿಗೆ ಸಂಬಂಧಿಸಿದ ವಿಷಯಗಳನ್ನು ವರದಿ ಮಾಡಬೇಕು, ಜನರ ಹಿತಾಸಕ್ತಿಗಳನ್ನು ಕಾಪಾಡಬೇಕು. ಪ್ರಜಾಪ್ರಭುತ್ವದಲ್ಲಿ, ಸ್ವತಂತ್ರ ಮತ್ತು ಮುಕ್ತ ಮಾಧ್ಯಮವು ಬಹಳ ಮುಖ್ಯ ಎಂದು ಹೇಳಿದರು.

CM Siddaramaiah participated in the World Press Day celebration program.
ಚಾನಲ್ ಗಳು ನನ್ನ ಬಗ್ಗೆ ಎಷ್ಟೇ ಸುಳ್ಳು ಹೇಳಿದರೂ ನಾನು ಯಾರಿಗೂ ಫೋನ್ ಮಾಡಿ ಕೇಳಿಲ್ಲ; ಊಹಾ ಪತ್ರಿಕೋದ್ಯಮ ಅಪಾಯಕಾರಿ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Advertisement

X
Kannada Prabha
www.kannadaprabha.com