
ಮೈಸೂರು: ಪ್ರೀತ್ಸೆ, ಪ್ರೀತ್ಸೆ ಅಂತ ಹಿಂದೆ ಬಿದ್ದದ್ದ ಪಾಗಲ್ ಪ್ರೇಮಿಯೊಬ್ಬ ಶಿಕ್ಷಕಿಗೆ ಚಾಕು ಇರಿದು ಹತ್ಯೆ ಮಾಡಿರುವ ದಾರುಣ ಘಟನೆ ಮೈಸೂರಿನ ಅಶೋಕಪುರಂನಲ್ಲಿ ನಡೆದಿದೆ. ಮೃತರನ್ನು ಪಾಂಡವಪುರದ ಎಲೆಕೆಡೆ ಹ್ಯಾಂಡ್ ಪೋಸ್ಟ್ ಮೂಲದ 36 ವರ್ಷದ ಪೂರ್ಣಿಮ ಎಂದು ಗುರುತಿಸಲಾಗಿದೆ. ಕ್ಯಾತನಹಳ್ಳಿ ಗ್ರಾಮದ ಅಭಿಷೇಕ್ ಶಿಕ್ಷಕಿಯನ್ನು ಕೊಲೆ ಮಾಡಿ ಜೈಲು ಸೇರಿದ್ದಾನೆ. ಪ್ರೀತಿ ವಿಚಾರಕ್ಕೆ ಅಭಿಷೇಕ್ ನಿನ್ನೆ ಪೂರ್ಣಿಮ ಜೊತೆ ಜಗಳವಾಡಿದ್ದನು. ನಂತರ ಜಗಳ ತಾರಕಕ್ಕೇರಿದ್ದು, ಶಿಕ್ಷಕಿಗೆ ಚಾಕು ಇರಿದು ಪರಾರಿಯಾಗಿದ್ದನು. ಚೂರಿ ಇರಿತದಿಂದ ಗಂಭೀರವಾಗಿ ಗಾಯಗೊಂಡಿದ್ದ ಶಿಕ್ಷಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಪೂರ್ಣಿಮ ಮೃತಪಟ್ಟಿದ್ದಾರೆ.
Advertisement