ಚಿಕ್ಕಮಗಳೂರು: 'ಕನ್ನಡ ಬರದಿದ್ದರೆ ಯಾಕೆ ಇಲ್ಲಿದ್ದಾಳೆ'; ನನಗೆ English ಅರ್ಥ ಆಗಲ್ಲ; Canara Bank ಮಲಯಾಳಿ ಉದ್ಯೋಗಿ ವಿರುದ್ಧ ಗ್ರಾಹಕಿ ಆಕ್ರೋಶ; Video!

ಸಾರ್ವಜನಿಕ ಸೇವೆಗಳಲ್ಲಿ ಸ್ಥಳೀಯ ಭಾಷೆಗಳ ಬಳಕೆಯ ಕುರಿತು ನಡೆಯುತ್ತಿರುವ ಚರ್ಚೆಯ ನಡುವೆ, ಕರ್ನಾಟಕದ ಚಿಕ್ಕಮಗಳೂರಿನ ಕೆನರಾ ಬ್ಯಾಂಕ್ ಉದ್ಯೋಗಿಯೊಬ್ಬರು ಗ್ರಾಹಕರೊಂದಿಗೆ ಕನ್ನಡದಲ್ಲಿ ಮಾತನಾಡಲು ತಡಬಡಾಯಿಸಿದ ವೀಡಿಯೊವೊಂದು ವೈರಲ್ ಆಗಿದೆ.
Bank employee
ಬ್ಯಾಂಕ್ ಉದ್ಯೋಗಿ
Updated on

ಚಿಕ್ಕಮಗಳೂರು: ಸಾರ್ವಜನಿಕ ಸೇವೆಗಳಲ್ಲಿ ಸ್ಥಳೀಯ ಭಾಷೆಗಳ ಬಳಕೆಯ ಕುರಿತು ನಡೆಯುತ್ತಿರುವ ಚರ್ಚೆಯ ನಡುವೆ, ಕರ್ನಾಟಕದ ಚಿಕ್ಕಮಗಳೂರಿನ ಕೆನರಾ ಬ್ಯಾಂಕ್ ಉದ್ಯೋಗಿಯೊಬ್ಬರು ಗ್ರಾಹಕರೊಂದಿಗೆ ಕನ್ನಡದಲ್ಲಿ ಮಾತನಾಡಲು ತಡಬಡಾಯಿಸಿದ ವೀಡಿಯೊವೊಂದು ವೈರಲ್ ಆಗಿದೆ. ವೀಡಿಯೊದಲ್ಲಿ, ಸ್ಥಳೀಯ ಭಾಷೆಯಲ್ಲಿ ತನಗೆ ಸಹಾಯ ಮಾಡಲು ಸಾಧ್ಯವಾಗದ ಕಾರಣ ಕನ್ನಡ ಮಾತನಾಡುವ ಮಹಿಳೆ ಮತ್ತು ಬ್ಯಾಂಕ್ ಅಧಿಕಾರಿಯ ನಡುವೆ ಸಂಘರ್ಷವಾಗಿದ್ದನ್ನು ಕಾಣಬಹುದು.

ವೈರಲ್ ವೀಡಿಯೊದಲ್ಲಿ ಏನಿದೆ?

ವೀಡಿಯೊದಲ್ಲಿರುವ ಮಹಿಳೆ ತನಗೆ ಇಂಗ್ಲಿಷ್ ಬರಲ್ಲ ಎಂದು ಹೇಳಿದಾಗ ಬ್ಯಾಂಕಿನ ಉದ್ಯೋಗಿ ಮತ್ತೊಬ್ಬ ಉದ್ಯೋಗಿ ಜೊತೆ ನನಗೆ ಕನ್ನಡ ಬರಲ್ಲ ಎಂದು ಮಲಯಾಳಂನಲ್ಲಿ ಮಾತನಾಡಿದ್ದಾರೆ. ಈ ವೇಳೆ ಮಹಿಳೆ ಕನ್ನಡ ಅರ್ಥವಾಗದಿದ್ದರೆ ಅವಳು ಇಲ್ಲಿ ಏಕೆ ಇದ್ದಾಳೆ?" ಎಂದು ಹೇಳುತ್ತಿರುವುದು ಕೇಳಿಬಂದಿದೆ.

ಗ್ರಾಹಕಿ ನನಗೆ ಯಾವುದೇ ಮುನ್ಸೂಚನೆ ಕೊಡದೆ ತನ್ನ ಖಾತೆಯಿಂದ ಹಣ ಹಿಂಪಡೆಯಲಾದ ಬಗ್ಗೆ ವಿವರಣೆಯನ್ನು ಕೇಳುತ್ತಿರುವಾಗ ವ್ಯವಸ್ಥಾಪಕಿ ಇನ್ನೊಬ್ಬ ಅಧಿಕಾರಿಯೊಂದಿಗೆ ಮಲಯಾಳಂನಲ್ಲಿ ಮಾತನಾಡುತ್ತಿರುವುದು ಕಂಡುಬಂದಿದೆ. ಅಲ್ಲದೆ ಗ್ರಾಹಕಿ ಉದ್ಯೋಗಿ ನನ್ನೊಂದಿಗೆ ಚೆನ್ನಾಗಿ ವರ್ತಿಸಲಿಲ್ಲ. ನಾನು ಅವರನ್ನು ಕೇಳಲು ಪ್ರಯತ್ನಿಸಿದಾಗ ಅವರು ವ್ಯಂಗ್ಯಭರಿತ ಮುಖ ಮಾಡಿದರು ಎಂದು ಗ್ರಾಹಕಿ ಪ್ರಶ್ನಿಸಿದ್ದಾರೆ. ನಂತರ ಬ್ಯಾಂಕ್ ಅಧಿಕಾರಿ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಲು ಪ್ರಯತ್ನಿಸಿದರು.

Bank employee
ಕನ್ನಡ ಮಾತಾಡಲ್ಲ ಎಂದು ದರ್ಪ ತೋರಿದ SBI ಮ್ಯಾನೇಜರ್ ವರ್ಗಾವಣೆ, ಕೊನೆಗೂ ಕ್ಷಮೆಯಾಚನೆ; ಸ್ಥಳೀಯ ಭಾಷೆ ತರಬೇತಿ ನೀಡಿ ಎಂದ ಸಿಎಂ ಸಿದ್ದರಾಮಯ್ಯ

ವೈರಲ್ ವೀಡಿಯೊಗೆ ನೆಟ್ಟಿಗರ ಪ್ರತಿಕ್ರಿಯೆ

ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆ, ಬಳಕೆದಾರರು ವಿಭಿನ್ನ ಅಭಿಪ್ರಾಯಗಳನ್ನು ಹಂಚಿಕೊಂಡರು. ಕೆಲವರು ಗ್ರಾಹಕರ ಪರವಾಗಿ ನಿಂತು ಅವರ ಬೇಡಿಕೆಯನ್ನು ಬೆಂಬಲಿಸಿದರೆ, ಕೆಲವರು ಅವರು ಆನ್‌ಲೈನ್‌ನಲ್ಲಿ ಗಮನ ಸೆಳೆಯಲು ಇದನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com