
ಬೆಂಗಳೂರು: ನಗರದಲ್ಲಿ ನಡೆದ ಮತ್ತೊಂದು ಹಿಂಸಾಚಾರ ಪ್ರಕರಣದಲ್ಲಿ, ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯ ಹಿರಿಯ ಶಸ್ತ್ರಚಿಕಿತ್ಸಕರ 19 ವರ್ಷದ ಪುತ್ರ ಎಂಜಿನಿಯರಿಂಗ್ ವಿದ್ಯಾರ್ಥಿಯನ್ನು ಮೊನ್ನೆ ಬುಧವಾರ ರಾತ್ರಿ ಗುಂಪೊಂದು ಅಪಹರಿಸಿ ಹಲ್ಲೆ ನಡೆಸಿದೆ.
ಒಂದೂವರೆ ಗಂಟೆಗೂ ಹೆಚ್ಚು ಕಾಲ ಚಿತ್ರಹಿಂಸೆ ನೀಡಿದ ನಂತರ ಆಸ್ಪತ್ರೆಗೆ ಕರೆತಂದು ವಿದ್ಯಾರ್ಥಿಯ ತಲೆಗೆ ಶಸ್ತ್ರಚಿಕಿತ್ಸೆ ಮಾಡಬೇಕಾಯಿತು. ಆಘಾತಕಾರಿ ಸಂಗತಿಯೆಂದರೆ, ಪ್ರಮುಖ ಆರೋಪಿಗಳಲ್ಲಿ ಒಬ್ಬ 16 ವರ್ಷದ ಬಾಲಕನಾಗಿದ್ದಾನೆ. ಹಲ್ಲೆಯಲ್ಲಿ ಭಾಗಿಯಾಗಿದ್ದ ಆತನ ತಂದೆ ಮತ್ತು ಇನ್ನೊಬ್ಬ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಬಾಲ ಆರೋಪಿಗೆ ನೋಟಿಸ್ ನೀಡಲಾಗಿದೆ.
ಬಸವೇಶ್ವರನಗರ ಪೊಲೀಸ್ ಠಾಣೆ ವ್ಯಾಪ್ತಿಯ ಫ್ಲಾರೆನ್ಸ್ ಶಾಲಾ ಮೈದಾನದ ಬಳಿ ರಾತ್ರಿ 8.30 ರಿಂದ 10 ಗಂಟೆಯ ನಡುವೆ ಈ ಘಟನೆ ನಡೆದಿದೆ. ಹಲ್ಲೆಗೊಳಗಾದ ವಿದ್ಯಾರ್ಥಿ ಶಾಲಾ ಮೈದಾನದ ಬಳಿ ತನ್ನ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ, ಬಾಲ ಆರೋಪಿ ಇದ್ದಕ್ಕಿದ್ದಂತೆ ಎದುರಿಗೆ ಬಂದ. ಅವರ ನಡುವೆ ಮಾತಿನ ಚಕಮಕಿ ನಡೆಸಿತು.
ನಂತರ ಬಾಲ ಆರೋಪಿ ತನ್ನ ತಂದೆಗೆ ಕರೆ ಮಾಡಿದಾಗ ಬಾಲಕ ತನ್ನ ಸ್ನೇಹಿತರ ಗುಂಪಿನೊಂದಿಗೆ ಸ್ಥಳಕ್ಕೆ ಧಾವಿಸಿದನು. ವಿವಿಧ ವಾಹನಗಳಲ್ಲಿ ಬಂದ ತಂಡವು ವಿದ್ಯಾರ್ಥಿಯನ್ನು ಆಟೋರಿಕ್ಷಾದಲ್ಲಿ ಅಪಹರಿಸಿತು.
ಅಖಿಲೇಶ್ (ಹೆಸರು ಬದಲಾಯಿಸಲಾಗಿದೆ) ಎಂದು ಗುರುತಿಸಲಾದ ಹಲ್ಲೆಗೀಡಾದ ವಿದ್ಯಾರ್ಥಿ ಬಸವೇಶ್ವರನಗರ 3 ನೇ ಹಂತದ ನಿವಾಸಿ. ಹಲ್ಲೆ ನಡೆಸಿ ಆಟೋದಿಂದ ಹೊರಗೆ ಎಸೆಯಲ್ಪಟ್ಟ ನಂತರ, ಆತ ಸಹಾಯಕ್ಕಾಗಿ ತನ್ನ ಸ್ನೇಹಿತರಿಗೆ ಕರೆ ಮಾಡಿದ. ಅವರು ಬಂದು ಬಸವೇಶ್ವರನಗರ 3 ನೇ ಹಂತದ ಶಾನಭಾಗ್ ಆಸ್ಪತ್ರೆಗೆ ಕರೆದೊಯ್ದರು. ಆಸ್ಪತ್ರೆಗೆ ಭೇಟಿ ನೀಡಿದ ಪೊಲೀಸರು ವಿದ್ಯಾರ್ಥಿಯ ಹೇಳಿಕೆ ದಾಖಲಿಸಿಕೊಂಡು ಎಫ್‌ಐಆರ್ ದಾಖಲಿಸಿದ್ದಾರೆ.
ಆರೋಪಿಗಳು ಉಕ್ಕಿನ ಬಳೆ ಮತ್ತು ಇತರ ಆಯುಧಗಳಿಂದ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ವಿದ್ಯಾರ್ಥಿ ತನ್ನ ದೂರಿನಲ್ಲಿ ಹೇಳಿದ್ದಾನೆ. ಅವನ ಮುಖಕ್ಕೆ ಗುದ್ದಿದ ಆರೋಪಿಗಳು ಅವನನ್ನು ಪದೇ ಪದೇ ಒದ್ದಿದ್ದಾರೆ. ಅವನ ಮೊಬೈಲ್ ಫೋನ್ ಮತ್ತು ಚಿನ್ನದ ಸರವನ್ನು ಕಸಿದುಕೊಂಡ ನಂತರ, ಆಟೋದೊಳಗೆ ಕೂರಿಸಿ ಏಕಾಂತ ಸ್ಥಳಕ್ಕೆ ಕರೆದೊಯ್ದು ಮತ್ತೆ ಹೊಡೆದಿದ್ದಾರೆ. ಅವನ ಮೊಬೈಲ್ ಫೋನ್ ನ್ನು ಅನ್‌ಲಾಕ್ ಮಾಡಿಸಿ. ಸ್ವಲ್ಪ ಸಮಯದವರೆಗೆ ಮೊಬೈಲ್ ನ್ನು ಪರಿಶೀಲಿಸಿದ ನಂತರ, ಆರೋಪಿಗಳು ಆಟೋದಿಂದ ಹೊರಗೆ ತಳ್ಳಿ ಮೊಬೈಲ್ ಫೋನ್ ನ್ನು ರಸ್ತೆಗೆ ಎಸೆದಿದ್ದರು.
Advertisement