
ಬೆಳಗಾವಿ: ಗಡಿ ವಿವಾದ ಸಂಬಂಧ ಮಹಾರಾಷ್ಟ್ರ ಸಂಸದ ಅರವಿಂದ್ ಸಾವಂತ್ ಉದ್ಧಟತನ ಮೆರೆದಿದ್ದು, ಬೆಳಗಾವಿ ಮತ್ತು ಕರ್ನಾಟಕದ ಇತರ ಗಡಿ ಪ್ರದೇಶಗಳನ್ನು ಮಹಾರಾಷ್ಟ್ರದೊಂದಿಗೆ ವಿಲೀನಗೊಳಿಸುವವರೆಗೂ ಮರಾಠಿಗರ ಹೋರಾಟ ನಿಲ್ಲುವುದಿಲ್ಲ ಎಂದು ಹೇಳಿದ್ದಾರೆ.
ಗಡಿ ವಿವಾದ ಮುಗಿದು ಹೋದ ಅಧ್ಯಾಯ ಎಂದು ಹೇಳಿಕೆ ನೀಡಿದ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿಕೆ ನೀಡಿದ್ದರು.
ಈ ಹೇಳಿಗೆ ಪ್ರತಿಕ್ರಿಯೆ ನೀಡಿರುವ ಅರವಿಂದ್ ಸಾವಂತ್, ಕೊನೆಯುಸಿರಿರುವ ತನಕ ಮರಾಠಿ ಭಾಷಿಕರು ಗಡಿ ಹೋರಾಟವನ್ನು ನಡೆಸಲಿದ್ದಾರೆ. ಇದು ಮುಗಿದು ಹೋದ ಅಧ್ಯಾಯವಲ್ಲ. ಅಷ್ಟಿದ್ದರೇ, ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ತಮ್ಮ ಈ ಹೇಳಿಕೆಯನ್ನು ನ್ಯಾಯಾಲಯದಲ್ಲಿ ಹೋಗಿ ಹೇಳಲಿ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಕೈ ಕೈ ಹಿಸಿಕುಕೊಳ್ಳುವ ಕೆಲಸವನ್ನು ಮಾಡುತ್ತಿದ್ದಾರೆ. ಕೊನೆಯುಸಿರಿರುವವರೆಗೂ ಮರಾಠಿ ಭಾಷಿಕರು ತಮ್ಮ ನ್ಯಾಯ ಮತ್ತು ಹಕ್ಕಿಗಾಗಿ ನಿರಂತರ ಹೋರಾಟ ನಡೆಸಲಿದ್ದಾರೆ. ತಮ್ಮ ಈ ವಿಚಾರಗಳನ್ನು ಈರಣ್ಣಾ ಕಡಾಡಿ ನ್ಯಾಯಾಲಯದಲ್ಲಿ ಹೋಗಿ ಹೇಳಲಿ ಎಂದು ಹೇಳಿದ್ದಾರೆ.
ಬೆಳಗಾವಿ, ಕಾರವಾರ, ನಿಪ್ಪಾಣಿ ಮತ್ತು ಭಾಲ್ಕಿ ಮರಾಠಿ ಪ್ರಾಂತ್ಯಗಳಾಗಿದ್ದು, ಮಹಾರಾಷ್ಟ್ರಕ್ಕೆ ಸೇರಲು ಕಳೆದ 60 ವರ್ಷಗಳಿಂದ ಸಾಮಾಜಿಕ, ರಾಜಕೀಯ ಮತ್ತು ನ್ಯಾಯಯುತವಾಗಿ ಹೋರಾಟವನ್ನು ನಡೆಸಿವೆ. ಈ ಗಡಿ ಹೋರಾಟಗಾರರ ಬೆಂಬಲಕ್ಕೆ ಮಹಾರಾಷ್ಟ್ರ ಸರ್ಕಾರ ನಿಂತಿದೆ. ಗಡಿವಿವಾದ ಈ ರೀತಿಯ ಹೇಳಿಕೆಯಿಂದ ಇತ್ಯರ್ಥ್ಯಗೊಳ್ಳುವುದಿಲ್ಲ. ಶಿವಸೇನಾ ಉದ್ಧವ್ ಬಾಳಾಸಾಹೇಬ್ ಠಾಕ್ರೆ ಪಕ್ಷ ತಮ್ಮ ಬೆನ್ನಿಗಿದೆ ಎಂದು ತಿಳಿಸಿದ್ದಾರೆ.
ಗಡಿ ಪ್ರದೇಶಗಳಲ್ಲಿ ಮರಾಠಿ ಮಾತನಾಡುವ ಜನಸಂಖ್ಯೆಯ ಆಕಾಂಕ್ಷೆಗಳನ್ನು ಕಡಾಡಿ ನಿರ್ಲಕ್ಷಿಸುತ್ತಿದ್ದಾರೆ. ಮರಾಠಿ ಮಾತನಾಡುವ ಮತದಾರರು ಒಗ್ಗೂಡಿ ತಮ್ಮ ಹಿತಾಸಕ್ತಿಗಳನ್ನು ಪ್ರತಿನಿಧಿಸುವ ಅಭ್ಯರ್ಥಿಗಳನ್ನು ಬೆಂಬಲಿಸಬೇಕು. ಕಡಾಡಿಯಂತಹ ಜನರನ್ನು ಗೆಲ್ಲಲು ಬಿಡಬಾರದು ಎಂದಿದ್ದಾರೆ. ಈ ನಡುವೆ ಎಂಇಎಸ್ ನಾಯಕರು ಕೂಡ ಕಡಾಡಿ ಅವರ ಹೇಳಿಕೆಯನ್ನು ಖಂಡಿಸಿದ್ದಾರೆ.
Advertisement