
ಬೆಂಗಳೂರು: ಉದ್ಯೋಗ ಅರಸಿ ಬೆಂಗಳೂರಿಗೆ ಬರುವವರು ಕೈತುಂಬ ಸಂಬಳ ಪಡೆಯುತ್ತಾ ಐಷಾರಾಮಿ ಜೀವನ ನಡೆಸಲು ಮುಂದಾಗುತ್ತಾರೆ. ಹೆಚ್ಚು ಹೆಚ್ಚು ಆಧುನೀಕರಣಗೊಳ್ಳುತ್ತಿದ್ದಂತೆ ಅವರಿಗೆ ಬೆಂಗಳೂರು ಯಕಶ್ಚಿತವಾಗಿ ಕಾಣಲು ಶುರುವಾಗುತ್ತದೆ. ಆಗ ಅವರ ಕೊಳಕು ಮನಸ್ಥಿತಿಯನ್ನು ಅನ್ನ ಕೊಟ್ಟ ಪ್ರದೇಶವನ್ನೇ ಬೈಯ್ಯಲು ಶುರು ಮಾಡುತ್ತಾರೆ. ಅದೇ ರೀತಿಯ ಮನಸ್ಥಿತಿಯನ್ನು ವ್ಯಕ್ತಿಯೋರ್ವ ಹೊರ ಹಾಕಿದ್ದಾನೆ. ತನ್ನ ಎಕ್ಸ್ ಖಾತೆಯಲ್ಲಿ ಬೆಂಗಳೂರು ನಗರ ಸಂಪೂರ್ಣ ಕೊಳಕು ಪ್ರದೇಶ ಎಂದು ರಿಷಬ್ ಎಂಬಾತ ಬರೆದುಕೊಂಡಿದ್ದಾನೆ.
ಜುಲೈ 6ರಂದು @rishabhvansal97@ ಹೆಸರಿನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು ಬೆಂಗಳೂರು ಚೆನ್ನಾಗಿಲ್ಲ, ಇದು ಕೊಳಕು ನಗರ, ಇಲ್ಲಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಬಗ್ಗೆ ಟೀಕಿಸಿದ್ದಾನೆ. ಈ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಕನ್ನಡಿಗರು ಕೆರಳುವಂತೆ ಮಾಡಿದೆ.
ನಾನು 30 ನಿಮಿಷಗಳಿಂದ ಕ್ಯಾಬ್ ಅಥವಾ ಆಟೋ ಬುಕ್ ಮಾಡಲು ಪ್ರಯತ್ನಿಸುತ್ತಿದ್ದೇನೆ. ಆದರೆ ಸಾಧ್ಯವಾಗುತ್ತಿಲ್ಲ. ಇಲ್ಲಿನ ರಾಜ್ಯ ಸರ್ಕಾರ ಮೊದಲು ಬೈಕ್ ಟ್ಯಾಕ್ಸಿಗಳನ್ನು ನಿಷೇಧಿಸಿದ್ದು ಇದೀಗ ಉಬರ್ ಮತ್ತು ಓಲಾವನ್ನು ಸಹ ನಿಷೇಧಿಸಲು ಮುಂದಾಗಿದೆ. ಇದು ಯಾವ ರೀತಿಯ ಮಾಫಿಯಾ ಅಸಂಬದ್ಧ ವರ್ತನೆ. ಮೂಲಸೌಕರ್ಯವಿಲ್ಲ. ಸರಿಯಾದ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇಲ್ಲ. ಭಾಷೆ ಕುರಿತ ಗಲಾಟೆ. ರಾಜ್ಯ ಸರ್ಕಾರ ಮೊದಲು ಇಲ್ಲಿನ ಕಚೇರಿಗಳನ್ನು ಮುಚ್ಚುವಂತೆ ಹೇಳಬೇಕು ಎಂದು ಪೋಸ್ಟ್‌ನಲ್ಲಿ ಬರೆಯಲಾಗಿದೆ.
Advertisement