
ಬೆಂಗಳೂರು: ಎರಡು ದಶಕಗಳ ಕಾಯುವಿಕೆಯ ನಂತರ, ಬಾಬುಸಬ್‌ಪಾಳ್ಯದ ಮಲ್ಲಪ್ಪ ಲೇಔಟ್‌ನ ನಿವಾಸಿಗಳು ಕಳೆದ ಮಾರ್ಚ್ 2025 ರಲ್ಲಿ ಕಾವೇರಿ ನೀರಿನ ಸಂಪರ್ಕ ಪಡೆದಿದ್ದಾರೆ. ಆದರೆ ಮನೆಗಳಿಗೆ ಕಾವೇರಿ ನೀರಿನ ಸರಬರಾಜು ಪ್ರಾರಂಭವಾದಾಗಿನಿಂದ 43 ಪೈಪ್‌ಲೈನ್ ಸೋರಿಕೆಗಳು ವರದಿಯಾಗಿದ್ದು, ಕಾವೇರಿ ಸಂಪರ್ಕ ಪಡೆದರೂ ನಮಗೆ ಸರಿಯಾಗಿ ನೀರು ಬರುತ್ತಿಲ್ಲ ಎಂದು ನಿವಾಸಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಮಲ್ಲಪ್ಪ ಲೇಔಟ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ(RWA) ಫೆಬ್ರವರಿ 2022 ರಲ್ಲಿ ರಸ್ತೆ ಕೆಲಸ ಪ್ರಾರಂಭವಾಗುವ ಸ್ವಲ್ಪ ಮೊದಲು ಟೆಲಿಕಾಂ ಕಂಪನಿಗಳು ವಿಂಚಿಂಗ್ ಯಂತ್ರಗಳನ್ನು ಬಳಸಿ ಆಪ್ಟಿಕಲ್ ಫೈಬರ್ ಕೇಬಲ್‌ಗಳನ್ನು ಅಳವಡಿಸಿದಾಗ ನೀರಿನ ಪೈಪ್‌ಲೈನ್‌ಗಳು ಹಾನಿಗೊಳಗಾದವು. ನೀರು ಮತ್ತು ರಸ್ತೆ ಮೂಲಸೌಕರ್ಯಕ್ಕಾಗಿ ಪದೇ ಪದೇ ಮನವಿ ಮಾಡಿದರೂ ಯಾವುದೇ ಪ್ರಯೋಜನೆ ಆಗಿಲ್ಲ. ನಮಗೆ ಸರಿಯಾಗಿ ಕಾವೇರಿ ನೀರಿ ಬರುತ್ತಿಲ್ಲ ಮತ್ತು ಬಂದರೂ ಅದು ಒಳಚರಂಡಿ ನೀರಿನೊಂದಿಗೆ ಮಿಶ್ರಣವಾಗಿ ಬರುತ್ತಿದೆ ಎಂದು ನಿವಾಸಿಗಳು ಹೇಳುತ್ತಾರೆ.
ನಿವಾಸಿಗಳ ಪ್ರಕಾರ, BWSSB ದೂರುಗಳಿಗೆ ಸ್ಪಂದಿಸಿ ಸೋರಿಕೆಗಳನ್ನು ಸರಿಪಡಿಸಿದರೂ ದುರಸ್ತಿ ಮಾಡಿದ ಸ್ಥಳಗಳನ್ನು ಸರಿಯಾಗಿ ಮುಚ್ಚಲಾಗಿಲ್ಲ. ಇದರಿಂದ ಮತ್ತೆ ಮತ್ತೆ ಪೈಪ್‌ಲೈನ್ ಹಾನಿಯಾಗುತ್ತಿದೆ. "ವಿವಿಧ ಸ್ಥಳಗಳಲ್ಲಿ ಪೈಪ್‌ಲೈನ್ ಹಾನಿಯಿಂದಾಗಿ BWSSB ಪೂರ್ಣ ನೀರು ಪೂರೈಸುತ್ತಿಲ್ಲ" ಎಂದು RWA ಕಾರ್ಯದರ್ಶಿ ಶ್ರೀಕಾಂತ್ ಅವರು TNIE ಗೆ ತಿಳಿಸಿದ್ದಾರೆ.
2018 ಮತ್ತು 2021 ರ ನಡುವೆ ಹಾಕಲಾದ ಪೈಪ್‌ಲೈನ್ ಜಾಲದ ನಕ್ಷೆಗಳು BWSSB ಬಳಿ ಇಲ್ಲ. ಆದ್ದರಿಂದ ಎಲ್ಲಾ ಸೋರಿಕೆಗಳನ್ನು ಪತ್ತೆಹಚ್ಚಲು ಮತ್ತು ಸರಿಪಡಿಸಲು ಕಷ್ಟವಾಗುತ್ತದೆ ಎಂದು RWA ಆರೋಪಿಸಿದೆ.
ಪ್ರಸ್ತುತ ವಾರಕ್ಕೆ ಎರಡು ಬಾರಿ ಮಾತ್ರ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ ನಿವಾಸಿಗಳು ನೀರಿನ ಪ್ರೆಶೆರ್ ತುಂಬಾ ಕಡಿಮೆಯಾಗಿದೆ. ಇದರಿಂದ ಲೇಔಟ್‌ನಲ್ಲಿರುವ ಎಂಟು ಬೀದಿಗಳಲ್ಲಿರುವ 222 ಮನೆಗಳಲ್ಲಿ, ಹಲವರಿಗೆ ನೀರು ಸಿಗುವುದೇ ಇಲ್ಲ. ಸರಿಯಾದ ಮೀಟರ್ ರೀಡರ್ ಗಳಿಲ್ಲದೆ ನೀರಿನ ಬಿಲ್ ಮಾಡಲಾಗುತ್ತಿದೆ ಎಂದು ನಿವಾಸಿಗಳು ಆರೋಪಿಸಿದ್ದಾರೆ.
"ನಾವು ನೀರಿಗಾಗಿ ಮಾತ್ರವಲ್ಲದೆ, ನೀರು ಬರುವ ಮೊದಲು ಪೈಪ್‌ಗಳ ಮೂಲಕ ಬರುವ ಗಾಳಿಗೂ ಸಹ ಹಣ ಪಾವತಿಸುತ್ತೇವೆ. ಕಳೆದ ಮಂಗಳವಾರ, ನಮಗೆ 30-45 ನಿಮಿಷ ಬರೀ ಗಾಳಿ ಬಂತು, ನಂತರ ಕಡಿಮೆ ಪ್ರೆಶೆರ್ ನ ನೀರು ಸಂಪ್‌ನ ಕಾಲು ಭಾಗವನ್ನು ಮಾತ್ರ ತುಂಬಿತು" ಎಂದು ನಿವಾಸಿ ಬಿಜು ಹೇಳಿದ್ದಾರೆ.
Advertisement