Representational image
ಸಾಂದರ್ಭಿಕ ಚಿತ್ರ

ನಾಯಿ ಕಡಿತದಿಂದ ಯುವ ಕಬಡ್ಡಿ ಆಟಗಾರ ಸಾವು: ಎಚ್ಚೆತ್ತ BBMP; ರೇಬೀಸ್ ವಿರುದ್ಧ ಅಭಿಯಾನ ತೀವ್ರ

ಪಾಲಿಕೆ ನಾಯಿ ಹಿಡಿಯುವ ತಂಡವು ಕಳೆದ ನಾಲ್ಕೂವರೆ ವರ್ಷಗಳಲ್ಲಿ 1,107 ಬೀದಿ ನಾಯಿಗಳಲ್ಲಿ ರೇಬಿಸ್ ಸೋಂಕಿತ 673 ನಾಯಿಗಳನ್ನು ಪ್ರತ್ಯೇಕಿಸಿದೆ ಎಂದು ತಿಳಿದು ಬಂದಿದೆ.
Published on

ಬೆಂಗಳೂರು: ಉತ್ತರ ಪ್ರದೇಶದಲ್ಲಿ 22 ವರ್ಷದ ಕಬಡ್ಡಿ ಆಟಗಾರನೊಬ್ಬ ರೇಬೀಸ್ ನಿಂದ ಸಾವನ್ನಪ್ಪಿದ ನಂತರ, ಬಿಬಿಎಂಪಿ ಈಗ ಲಸಿಕೆ ಮತ್ತು ಜಾಗೃತಿ ಶಿಬಿರಗಳ ಮೂಲಕ ತನ್ನ ವ್ಯಾಪ್ತಿಯಲ್ಲಿ ಶಂಕಿತ ರೇಬೀಸ್ ನಾಯಿಗಳನ್ನು ಬಂಧಿಸುವ ಅಭಿಯಾನ ಆರಂಭಿಸಿದೆ.

ಪಾಲಿಕೆ ನಾಯಿ ಹಿಡಿಯುವ ತಂಡವು ಕಳೆದ ನಾಲ್ಕೂವರೆ ವರ್ಷಗಳಲ್ಲಿ 1,107 ಬೀದಿ ನಾಯಿಗಳಲ್ಲಿ ರೇಬಿಸ್ ಸೋಂಕಿತ 673 ನಾಯಿಗಳನ್ನು ಪ್ರತ್ಯೇಕಿಸಿದೆ ಎಂದು ತಿಳಿದು ಬಂದಿದೆ. ನಾಯಿ ಕಚ್ಚಿದ ಬಗ್ಗೆ ದೂರುಗಳು ಬಂದಾಗಲೆಲ್ಲಾ ನಾಯಿಯನ್ನು ಹಿಡಿದು ಕೆಲವು ಪರೀಕ್ಷೆಗಳನ್ನು ನಡೆಸಲಾಗುತ್ತದೆ ಎಂದು ಬಿಬಿಎಂಪಿಯ ಪಶುಸಂಗೋಪನಾ ಇಲಾಖೆಯ ಹಿರಿಯ ಪಶುವೈದ್ಯರು ತಿಳಿಸಿದ್ದಾರೆ.

ಸಾಮಾನ್ಯವಾಗಿ ಹತ್ತು ದಿನಗಳಲ್ಲಿ, ರೇಬೀಸ್ ನಾಯಿ ಸಾಯುತ್ತದೆ ಮತ್ತು ಅದರ ಮೆದುಳಿನ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗುತ್ತದೆ, ಆದರೆ ದೇಹವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುತ್ತದೆ. ಪ್ರಯೋಗಾಲಯದ ವರದಿಯ ಆಧಾರದ ಮೇಲೆ, ರೇಬೀಸ್ ನಾಯಿ ಸತ್ತ ಪ್ರದೇಶದಲ್ಲಿ ಪಾಲಿಕೆ 'ರಿಂಗ್ ವ್ಯಾಕ್ಸಿನೇಷನ್' ಡ್ರೈವ್ ಪ್ರಾರಂಭಿಸುತ್ತದೆ ಮತ್ತು ಸೋಂಕು ಹರಡದಂತೆ ಅಲ್ಲಿನ ನಾಯಿಗಳಿಗೆ ಲಸಿಕೆ ಹಾಕಲಾಗುತ್ತದೆ ಎಂದು ಪಶುವೈದ್ಯರು ಹೇಳಿದ್ದಾರೆ.

ರೇಬಿಸ್ ಒಂದು ಮಾರಕ ಪ್ರಾಣಿಜನ್ಯ ಕಾಯಿಲೆಯಾಗಿದ್ದು, ಇದನ್ನು ಲಸಿಕೆ ಹಾಕುವ ಮೂಲಕ ತಡೆಯಬಹುದು. ಸೋಂಕಿತ ಪ್ರಾಣಿಗಳು ಕಚ್ಚುವುದು, ಪರಚುವುದು ಮತ್ತು ಜೊಲ್ಲು ಸುರಿಸುವುದರ ಮೂಲಕ ಹರಡುತ್ತದೆ. ಜಾಗತಿಕವಾಗಿ, ರೇಬಿಸ್‌ನಿಂದ ವಾರ್ಷಿಕವಾಗಿ ಅಂದಾಜು 59,000 ಸಾವುಗಳು ವರದಿಯಾಗುತ್ತವೆ.

Representational image
ದುರ್ವಿಧಿ: ತಾನೇ ರಕ್ಷಿಸಿದ್ದ ನಾಯಿ ಕಚ್ಚಿ ಕಬಡ್ಡಿ ಆಟಗಾರ Brijesh Solanki ಸಾವು; ಕೊನೆಯ ದಿನಗಳಲ್ಲಿ ನರಳಿ ನರಳಿ ಯಾತನೆ, Video!

ರೇಬಿಸ್‌ನಿಂದ ಪ್ರತಿ ಒಂಬತ್ತು ನಿಮಿಷಕ್ಕೆ ಒಂದು ಸಾವು ಸಂಭವಿಸುತ್ತದೆ ಮತ್ತು ಬಲಿಯಾದವರಲ್ಲಿ ಸುಮಾರು 40% ರಷ್ಟು 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಾಗಿದ್ದಾರೆ. ಆದ್ದರಿಂದ, ನಾಯಿ ಕಚ್ಚಿದರೆ ಲಸಿಕೆ ಹಾಕುವುದು ಮುಖ್ಯ ಎಂದು ಬಿಬಿಎಂಪಿಯ ಆರೋಗ್ಯ ವಿಶೇಷ ಆಯುಕ್ತ ಸುರಲ್ಕರ್ ವಿಕಾಸ್ ಕಿಶೋರ್ ಹೇಳಿದ್ದಾರೆ.

ಬೆಂಗಳೂರು ಪಶುವೈದ್ಯಕೀಯ ಕಾಲೇಜು ಮೌಖಿಕ ರೇಬಿಸ್ ಲಸಿಕೆಯನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ಪಾಲಿಕೆ ತಿಳಿಸಿದೆ. ರೇಬಿಸ್ ನಿಯಂತ್ರಣ ಯೋಜನೆ ಭಾಗವಾಗಿ, ಪಾಲಿಕೆ ಸೋಮವಾರ ಅಭಿಯಾನವನ್ನು ಪ್ರಾರಂಭಿಸಿತು.

ಅಭಿಯಾನದ ಸಮಯದಲ್ಲಿ, ಆರೋಗ್ಯ ಸಿಬ್ಬಂದಿಯೊಂದಿಗೆ ವಿಶೇಷ ವಾಹನಗಳು ಎಲ್ಲಾ ವಾರ್ಡ್‌ಗಳಿಗೆ ಭೇಟಿ ನೀಡಿ ರೇಬಿಸ್ ತಡೆಗಟ್ಟುವಿಕೆಯ ಬಗ್ಗೆ ಜನರಿಗೆ ಅರಿವು ಮೂಡಿಸುತ್ತವೆ. ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಪಾಲಿಕೆ ಪ್ರಾಣಿಜನ್ಯ ರೋಗಗಳಿಗೆ ಸಂಬಂಧಿಸಿದ ತನ್ನ ಐಇಸಿ ಚಟುವಟಿಕೆಗಳನ್ನು ತೀವ್ರಗೊಳಿಸಿದೆ.

ಪಾಲಿಕೆ ಪ್ರಕಾರ, ಅದರ ಪ್ರಾಣಿ ಜನನ ನಿಯಂತ್ರಣ (ABC) ಕಾರ್ಯಕ್ರಮದಡಿಯಲ್ಲಿ 2,37,803 ನಾಯಿಗಳಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, 2020-2021 ರಿಂದ ವಾರ್ಷಿಕ ಸಾಮೂಹಿಕ ಲಸಿಕೆ ಅಭಿಯಾನದ ಸಮಯದಲ್ಲಿ, 4,43,238 ನಾಯಿಗಳಿಗೆ ಲಸಿಕೆ ಹಾಕಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com