ಆಟೋ ಪ್ರಯಾಣ ದರ ಏರಿಕೆ ಅವೈಜ್ಞಾನಿಕ: ಹಿಂಪಡೆಯುವಂತೆ ಬೆಂಗಳೂರು ಆಟೋ ಯೂನಿಯನ್ ಆಗ್ರಹ

ಸೋಮವಾರ ಹೊರಡಿಸಲಾದ ದರ ಪರಿಷ್ಕರಣಾ ಆದೇಶವನ್ನು ಒಕ್ಕೂಟವು "ಅವೈಜ್ಞಾನಿಕ" ಎಂದು ಟೀಕಿಸಿದೆ. 2023 ರಿಂದ ದರ ಪರಿಷ್ಕರಣೆಗೆ ಒತ್ತಾಯಿಸಲಾಗುತ್ತಿದೆ ಎಂದು ARDU ಹೇಳಿದೆ.
Representational image
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ. ಜಗದೀಶ ಅವರು ಪಾಲುದಾರರೊಂದಿಗೆ ಸಮಾಲೋಚನೆ ನಡೆಸದೆ ಆಟೋರಿಕ್ಷಾ ಮೀಟರ್ ದರಗಳನ್ನು ಪರಿಷ್ಕರಿಸುವ ಏಕಪಕ್ಷೀಯ ನಿರ್ಧಾರವನ್ನು ಆಟೋ ರಿಕ್ಷಾ ಚಾಲಕರ ಒಕ್ಕೂಟ (ARDU) ವಿರೋಧಿಸಿದೆ.

ಸೋಮವಾರ ಹೊರಡಿಸಲಾದ ದರ ಪರಿಷ್ಕರಣಾ ಆದೇಶವನ್ನು ಒಕ್ಕೂಟವು "ಅವೈಜ್ಞಾನಿಕ" ಎಂದು ಟೀಕಿಸಿದೆ. 2023 ರಿಂದ ದರ ಪರಿಷ್ಕರಣೆಗೆ ಒತ್ತಾಯಿಸಲಾಗುತ್ತಿದೆ ಎಂದು ARDU ಹೇಳಿದೆ. ಹಿಂದಿನ ಜಿಲ್ಲಾಧಿಕಾರಿಗಳು ಆಟೋರಿಕ್ಷಾ ಸಂಸ್ಥೆಗಳೊಂದಿಗೆ ಸಭೆಗಳನ್ನು ನಡೆಸಿದ್ದರು, ಆದರೆ ಈಗ ಯಾವುದೇ ಮಾತುಕತೆ ಚರ್ಚೆ ನಡೆಸದೆ ದರ ಏರಿಕೆ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಕರ್ನಾಟಕ ಮೋಟಾರು ವಾಹನ ನಿಯಮಗಳು 53 ಅನ್ನು ಉಲ್ಲೇಖಿಸಿರುವ ಒಕ್ಕೂಟ, "ಡಿಸಿಗಳು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರಲ್ಲ, ಆದ್ದರಿಂದ ಅವರು ದರ ಏರಿಕೆ ಬಗ್ಗೆ ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಅದು ಒತ್ತಿ ಹೇಳಿದೆ. ಬೆಂಗಳೂರಿನೊಳಗೆ ಆಟೋ ಪರ್ಮಿಟ್‌ಗಳನ್ನು ನೀಡುವ ಅಥವಾ ರದ್ದುಗೊಳಿಸುವ ಅಧಿಕಾರ ಡಿಸಿಗಳಿಗೆ ಇಲ್ಲ ಎಂದು ತಿಳಿಸಿದೆ.

ವಾರ್ಷಿಕ ಪರಿಷ್ಕರಣೆಗೆ ಅವಕಾಶವಿಲ್ಲದೆ ಐದು ವರ್ಷಗಳವರೆಗೆ ದರವನ್ನು ನಿಗದಿಪಡಿಸುವುದನ್ನು ARDU ಸಹ ಆಕ್ಷೇಪಿಸಿದೆ. ಹೆಚ್ಚುತ್ತಿರುವ ಇಂಧನ ಮತ್ತು ನಿರ್ವಹಣಾ ವೆಚ್ಚಗಳನ್ನು ಪರಿಗಣಿಸದ ಈ ಕ್ರಮವು ವಾಸ್ತವತೆಯಿಂದ ದೂರವಿದೆ. ಈ ಆದೇಶವನ್ನು ತಕ್ಷಣವೇ ಹಿಂಪಡೆಯಬೇಕೆಂದು ಒಕ್ಕೂಟವು ಒತ್ತಾಯಿಸಿದೆ ಮತ್ತು ಮೊದಲ 2 ಕಿ.ಮೀ.ಗೆ ಕನಿಷ್ಠ ದರವನ್ನು 40 ರೂ.ಗೆ ಹೆಚ್ಚಿಸುವಂತೆ ಸರ್ಕಾರವನ್ನು ಆಗ್ರಹಿಸಿದೆ.

ಅವರು ಮೀಟರ್ ದರವನ್ನು 40 ರೂ.ಗೆ ಹೆಚ್ಚಿಸಿದರೆ, ಆ್ಯಪ್‌ಗಳ ಮೂಲಕ ಸವಾರಿ ಮಾಡುವ ಆಟೋ ಚಾಲಕರು ಕಡಿಮೆಯಾಗುತ್ತಾರೆ ಮತ್ತು ಅವರು ಮೀಟರ್ ಚಾಲನೆಯೊಂದಿಗೆ ಸವಾರಿ ಮಾಡಲು ಪ್ರಾರಂಭಿಸುತ್ತಾರೆ ಮತ್ತು ಹೆಚ್ಚಿನ ದರವನ್ನು ಕೇಳುವುದನ್ನು ನಿಲ್ಲಿಸುತ್ತಾರೆ ಎಂಬ ವಿಶ್ವಾಸ ನಮಗಿದೆ" ಎಂದು ARDU ಪ್ರಧಾನ ಕಾರ್ಯದರ್ಶಿ ರುದ್ರಮೂರ್ತಿ ಹೇಳಿದರು.

Representational image
Auto Fare Hike: ನಗರ ಜನತೆಗೆ ಮತ್ತೊಂದು ಶಾಕ್; ಆಟೋ ಕನಿಷ್ಟ ದರ 36 ರೂ ಗೆ ಏರಿಕೆ, ಆಗಸ್ಟ್ 1 ರಿಂದ ಅನ್ವಯ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com