ಪ್ಯಾರಾಲಿಂಪಿಕ್‌ ಪಟು ವಿಶ್ವಾಸ್ ಗೆ ಬಹುಮಾನ ನೀಡದ ಸರ್ಕಾರ: 2 ಲಕ್ಷ ರೂ ದಂಡ ವಿಧಿಸಿದ ಹೈಕೋರ್ಟ್

ಚಾಂಪಿಯನ್‌ ವಿಶ್ವಾಸ್ ಅವರ ಹಕ್ಕುಗಳನ್ನು ನಿರಾಕರಿಸಿದ್ದಕ್ಕಾಗಿ ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆಗೆ 2 ಲಕ್ಷ ರೂಪಾಯಿ ದಂಡವನ್ನು ಸಹ ಹೈಕೋರ್ಟ್ ಹಾಕಿದೆ.
High court
ಹೈಕೋರ್ಟ್
Updated on

ಬೆಂಗಳೂರು: ಕೈಗಳಿಲ್ಲದೆ ಅಂತಾರಾಷ್ಟ್ರೀಯ ಪ್ಯಾರಾ-ಈಜು ಸ್ಪರ್ಧೆಯಲ್ಲಿ ಯಶಸ್ಸು ಸಾಧಿಸಿದ ವಿಶ್ವಾಸ್ ಕೆ ಎಸ್ ಅವರ ಮನೋಭಾವವನ್ನು ರಾಜ್ಯ ಸರ್ಕಾರ ಅಡ್ಡಿಪಡಿಸದೆ ಗೌರವಿಸಬೇಕಿತ್ತು ಎಂದು ಹೈಕೋರ್ಟ್ ಹೇಳಿದೆ.

ಚಾಂಪಿಯನ್‌ ವಿಶ್ವಾಸ್ ಅವರ ಹಕ್ಕುಗಳನ್ನು ನಿರಾಕರಿಸಿದ್ದಕ್ಕಾಗಿ ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆಗೆ 2 ಲಕ್ಷ ರೂಪಾಯಿ ದಂಡವನ್ನು ಸಹ ಹೈಕೋರ್ಟ್ ಹಾಕಿದೆ.

ಕೈಗಳಿಲ್ಲದೆ ಒಬ್ಬ ವ್ಯಕ್ತಿ ಈಜುಕೊಳಗಳಿಗೆ ಧುಮುಕಿ ವಿಜಯಶಾಲಿಯಾಗಿ ಹೊರಹೊಮ್ಮುವುದು ಮಾತ್ರವಲ್ಲದೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ವಿಜಯಶಾಲಿಯಾಗಿ ಹೊರಹೊಮ್ಮಿದಾಗ, ರಾಜ್ಯ ಸರ್ಕಾರವು ಅವರನ್ನು ಗೌರವಿಸಬೇಕು. ಅದು ಬಿಟ್ಟು ಅವರ ಹಕ್ಕುಗಳನ್ನು ಹತ್ತಿಕ್ಕಬಾರದು ಎಂದು ಹೈಕೋರ್ಟ್ ಹೇಳಿದೆ.

2017 ಮತ್ತು 2023 ರಲ್ಲಿ ಪ್ರಾತಿನಿಧ್ಯಗಳನ್ನು ಸಲ್ಲಿಸಿದರೂ, ಅವರಿಗೆ ಯಾವುದೇ ಪರಿಹಾರ ನೀಡಲಾಗಿಲ್ಲ. ವಿಶ್ವಾಸ್ ಅವರು 2023 ರಲ್ಲಿ ಹೈಕೋರ್ಟ್ ನ್ನು ಸಂಪರ್ಕಿಸಿ ನೋಟಿಸ್ ನೀಡಿದ ನಂತರ 4.74 ಲಕ್ಷ ರೂಪಾಯಿ ಪಾವತಿಸಲಾಯಿತು.

High court
'Greater Bengaluru' ಕಾಯ್ದೆ ಪ್ರಶ್ನಿಸಿ PIL: ರಾಜ್ಯ ಸರ್ಕಾರ, BBMPಗೆ ಹೈಕೋರ್ಟ್ ನೋಟಿಸ್‌

ಪದಕಗಳನ್ನು ಗೆದ್ದಿದ್ದಕ್ಕೆ ನೀಡಲಾದ 6 ಲಕ್ಷ ರೂಪಾಯಿಗಳಲ್ಲಿ 1.26 ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡದಿದ್ದಕ್ಕಾಗಿ ನ್ಯಾಯಾಲಯದ ಮೊರೆ ಹೋದ ವಿಶ್ವಾಸ್‌ಗೆ ಮೊಕದ್ದಮೆ ವೆಚ್ಚವಾಗಿ 2 ಲಕ್ಷ ರೂಪಾಯಿಗಳನ್ನು ಪಾವತಿಸಬೇಕೆಂದು ಹೇಳಿದ ನ್ಯಾಯಾಲಯ, ರಾಜ್ಯ ಸರ್ಕಾರವು ಅವರಿಗೆ 1.26 ಲಕ್ಷ ರೂಪಾಯಿ ಪಾವತಿ ಮಾಡುವಂತೆ ನಿರ್ದೇಶಿಸಿತು. ಎರಡು ವಾರಗಳಲ್ಲಿ ಹಣ ಪಾವತಿಸದಿದ್ದರೆ, ಅರ್ಜಿದಾರರು ವಿಳಂಬವಾದ ಪ್ರತಿ ದಿನದ ವೆಚ್ಚವನ್ನು ಅವರಿಗೆ ತಲುಪುವವರೆಗೆ 1,000 ರೂಪಾಯಿಗಳ ಭತ್ಯೆ ನೀಡಬೇಕೆಂದು ಆದೇಶ ಮಾಡಿದೆ.

ಸರ್ಕಾರದ ಕರ್ತವ್ಯ ಕೇವಲ ಆಡಳಿತಾತ್ಮಕವಲ್ಲ; ಅದು ನೈತಿಕ, ಸಾಂವಿಧಾನಿಕ ಮತ್ತು ಮಾನವೀಯವಾಗಿರಬೇಕು ಎಂದು ಆದೇಶ ಹೊರಡಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com