ರಾಯಚೂರು: ವಿಷಾಹಾರ ಸೇವನೆ ಶಂಕೆ; ಒಂದೇ ಕುಟುಂಬದ ಮೂವರು ಸಾವು, ಇಬ್ಬರು ಆಸ್ಪತ್ರೆಗೆ ದಾಖಲು

ಕುಟುಂಬ ಸದಸ್ಯರ ಪ್ರಕಾರ, ಆರು ಜನರು ಬದನೇಕಾಯಿ ಕರಿ, ರೊಟ್ಟಿ, ಅನ್ನ ಮತ್ತು ಸಾಂಬಾರ್‌ ಸೇವಿಸಿದ್ದರು. ಕರಿಯಲ್ಲಿ ಬಳಸಲಾದ ಬದನೆಕಾಯಿಯನ್ನು ಅವರ ಜಮೀನಿನಿಂದಲೇ ಕೊಯ್ಲು ಮಾಡಲಾಗಿತ್ತು.
Representative Image
ಪ್ರಾತಿನಿಧಿಕ ಚಿತ್ರ
Updated on

ರಾಯಚೂರು: ಜಿಲ್ಲೆಯಲ್ಲಿ ಶಂಕಿತ ವಿಷಾಹಾರ ಸೇವನೆಯಿಂದ ಒಂದೇ ಕುಟುಂಬದ ಮೂವರು ಸಾವಿಗೀಡಾಗಿದ್ದು, ಇನ್ನಿಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಮೃತರನ್ನು ರಮೇಶ್ (38) ಮತ್ತು ಅವರ ಪುತ್ರಿಯರಾದ ನಾಗಮ್ಮ (8) ಮತ್ತು ದೀಪಾ (6) ಎಂದು ಗುರುತಿಸಲಾಗಿದೆ.

ಅವರ ಪತ್ನಿ ಪದ್ಮಾ ಮತ್ತು ಇತರ ಇಬ್ಬರು ಮಕ್ಕಳನ್ನು ರಾಯಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆ (RIMS) ಗೆ ದಾಖಲಿಸಲಾಗಿದ್ದು, ಅವರು ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಿರ್ವಾರ್ ತಾಲ್ಲೂಕಿನ ಕೆ ತಿಮ್ಮಾಪುರ ಗ್ರಾಮದಲ್ಲಿ ಸೋಮವಾರ ರಾತ್ರಿ ಈ ಘಟನೆ ಸಂಭವಿಸಿದೆ.

ಕುಟುಂಬ ಸದಸ್ಯರ ಪ್ರಕಾರ, ಆರು ಜನರು ಬದನೇಕಾಯಿ ಕರಿ, ರೊಟ್ಟಿ, ಅನ್ನ ಮತ್ತು ಸಾಂಬಾರ್‌ ಸೇವಿಸಿದ್ದರು. ಕರಿಯಲ್ಲಿ ಬಳಸಲಾದ ಬದನೆಕಾಯಿಯನ್ನು ಅವರ ಜಮೀನಿನಿಂದಲೇ ಕೊಯ್ಲು ಮಾಡಲಾಗಿತ್ತು.

ಮೂರು ದಿನಗಳ ಹಿಂದೆಯಷ್ಟೇ ಬೆಳೆಗೆ ಕೀಟನಾಶಕ ಸಿಂಪಡಿಸಲಾಗಿತ್ತು ಮತ್ತು ಇದು ವಿಷಪ್ರಾಶನಕ್ಕೆ ಕಾರಣವಾಗಿರಬಹುದು ಎಂದು ಸಂಬಂಧಿಕರು ಶಂಕಿಸಿದ್ದಾರೆ.

Representative Image
ಬೆಳಗಾವಿ: ಪೊಲೀಸ್ ತರಬೇತಿ‌ ಶಾಲೆ‌ಯಲ್ಲಿ ವಿಷಾಹಾರ ಸೇವಿಸಿ 22 ಪ್ರಶಿಕ್ಷಾರ್ಥಿಗಳು ಅಸ್ವಸ್ಥ!

ಊಟವಾದ ಸ್ವಲ್ಪ ಸಮಯದ ನಂತರ, ಆರು ಜನರಿಗೂ ರೋಗಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭಿಸಿದವು ಮತ್ತು ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೈದ್ಯರ ಪ್ರಯತ್ನಗಳ ಹೊರತಾಗಿಯೂ, ಮೂವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಸದ್ಯ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com