ಬಾಗಲಕೋಟೆ: ಚಿಕ್ಕಪ್ಪನಿಂದಲೇ 3 ವರ್ಷದ ಮಗುವಿನ ಕತ್ತು ಸೀಳಿ ಬರ್ಬರ ಹತ್ಯೆ..!

ಮಗು ಅಂಗನವಾಡಿಗೆ ತೆರಳಿತ್ತು. ಈ ವೇಳೆ, ಮಾರುತಿಯ ಸಹೋದರ ಭೀಮಪ್ಪ ವಾಲಿಕಾರ ಅಲ್ಲಿಗೆ ತೆರಳಿ, ಅಂಗನವಾಡಿಯ ಹಿಂಭಾಗದಲ್ಲಿ ಮಗುವಿನ ಕತ್ತು ಕೊಯ್ದು ಹತ್ಯೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
representative image
ಮಗು (ಸಾಂಕೇತಿಕ ಚಿತ್ರ)
Updated on

ಬಾಗಲಕೋಟೆ: ಚಿಕ್ಕಪ್ಪನೇ 3 ವರ್ಷದ ಮಗುವಿನ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಬೆನಕನವಾರಿ ಗ್ರಾಮದಲ್ಲಿ ನಡೆದಿದೆ.

ಮಾರುತಿ ವಾಲಿಕರ್ ಎಂಬುವವರ ಮಗುವನ್ನು ಹತ್ಯೆ ಮಾಡಲಾಗಿದೆ. ಮಾರುತಿ ಸಹೋದರ ಭೀಮಪ್ಪ ವಾಲೀಕಾರನಿಂದಲೇ ಈ ಒಂದು ಕೃತ್ಯ ನಡೆದಿದೆ.

ಮಗು ಅಂಗನವಾಡಿಗೆ ತೆರಳಿತ್ತು. ಈ ವೇಳೆ, ಮಾರುತಿಯ ಸಹೋದರ ಭೀಮಪ್ಪ ವಾಲಿಕಾರ ಅಲ್ಲಿಗೆ ತೆರಳಿ, ಅಂಗನವಾಡಿಯ ಹಿಂಭಾಗದಲ್ಲಿ ಮಗುವಿನ ಕತ್ತು ಕೊಯ್ದು ಹತ್ಯೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

ಅಮೀನಗಡ ಠಾಣೆಯ ಪೊಲೀಸರು ಭೀಮಪ್ಪನನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ. ಈ ಭೀಕರ ಕೊಲೆಗೆ ಕಾರಣವೇನೆಂದು ಅಧಿಕೃತ ಮಾಹಿತಿ ಲಭ್ಯವಿಲ್ಲದಿದ್ದರೂ, ಆರೋಪಿಯು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಎಂದು ಮೂಲಗಳು ತಿಳಿಸಿವೆ. ಈ ಸಂಬಂಧ ಅಮೀನಗಢ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

representative image
ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದ ಪ್ರೇಯಸಿ ಕೊಲೆ; ಆಕೆ ಕೆಲಸ ಮಾಡುತ್ತಿದ್ದ ಪೊಲೀಸ್ ಠಾಣೆಗೆ ಶರಣಾದ ಯೋಧ!

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com