ಬೆಂಗಳೂರು: ದರ್ಶನ್ ಫ್ಯಾನ್ಸ್ ವಿರುದ್ಧ ಪೊಲೀಸ್ ಆಯುಕ್ತರಿಗೆ ನಟಿ ರಮ್ಯಾ ದೂರು; ಅತ್ಯಾಚಾರ, ಜೀವ ಬೆದರಿಕೆ ಟ್ರೋಲ್ ವಿರುದ್ಧ ಕಿಡಿ

ದೂರು ದಾಖಲಿಸಿದ್ದೇನೆ. ಇಲ್ಲೇ ಸೈಬರ್​ ಆಫೀಸ್​ ಇದೆ. ಅಲ್ಲಿಗೆ ಫಾರ್ವರ್ಡ್ ಮಾಡುವುದಾಗಿ ಅವರು ಅವರು ಹೇಳಿದ್ದಾರೆ. 43 ಕಮೆಂಟ್​ಗಳನ್ನು ಮೆನ್ಷನ್ ಮಾಡಲಾಗಿದೆ. ತುಂಬಾ ಬೆದರಿಕೆ ಹಾಗೂ ಅಶ್ಲೀಲವಾಗಿ ಕಮೆಂಟ್ ಮಾಡಿದ್ದಾರೆ.
Film Actress Ramya arrived at Bengaluru City Police  Commissioner office to registr complaint in connction with Renukaswmay social media comments in Bengaluru on Monday.
ಸಾಮಾಜಿಕ ಮಾಧ್ಯಮ ಕಾಮೆಂಟ್‌ಗಳಿಗೆ ಸಂಬಂಧಿಸಿದಂತೆ ಚಲನಚಿತ್ರ ನಟಿ ರಮ್ಯಾ ಸೋಮವಾರ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಗೆ ಆಗಮಿಸಿ ದೂರು ದಾಖಲಿಸಿದರು.Express photo Nagaraja Gadekal
Updated on

ಬೆಂಗಳೂರು: ಸಾಮಾಜಿಕ ಮಾಧ್ಯಮಗಳಲ್ಲಿ ಅವಹೇಳನಕಾರಿ ಸಂದೇಶ ಹಿನ್ನೆಲೆಯಲ್ಲಿ ದರ್ಶನ್ ಫ್ಯಾನ್ಸ್ ವಿರುದ್ಧ ಕಿಡಿಕಾರಿರುವ ನಟಿ ರಮ್ಯಾ, ಇದೀಗ ಬೆಂಗಳೂರು ಕಮಿಷನರ್ ಗೆ ದೂರು ಕೊಟ್ಟಿದ್ದಾರೆ.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಮ್ಯಾ, ನಾನೊಂದು ಸುಪ್ರೀಂಕೋರ್ಟ್ ಆದೇಶವನ್ನು ಶೇರ್ ಮಾಡಿದ್ದೆ. ಅದಕ್ಕೆ ಪ್ರತಿಯಾಗಿ ತುಂಬಾ ಕೆಟ್ಟದಾಗಿ ಮೆಸೇಜ್ ಹಾಕಿ, ಕರೆ ಮಾಡಿ ಬೆದರಿಕೆ ಹಾಕುತ್ತಿದ್ದಾರೆ. ರೇಣುಕಾಸ್ವಾಮಿ ಬದಲು ನಿಮ್ಮನ್ನು ಕೊಲೆ ಮಾಡ್ಬೇಕಿತ್ತು. ನಿಮ್ಮನ್ನು ಅತ್ಯಾಚಾರ ಮಾಡ್ತೀವಿ ಎಂದೆಲ್ಲಾ ಸಂದೇಶ ಕಳುಹಿಸಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ದೂರು ದಾಖಲಿಸಿದ್ದೇನೆ. ಇಲ್ಲೇ ಸೈಬರ್​ ಆಫೀಸ್​ ಇದೆ. ಅಲ್ಲಿಗೆ ಫಾರ್ವರ್ಡ್ ಮಾಡುವುದಾಗಿ ಅವರು ಅವರು ಹೇಳಿದ್ದಾರೆ. 43 ಕಮೆಂಟ್​ಗಳನ್ನು ಮೆನ್ಷನ್ ಮಾಡಲಾಗಿದೆ. ತುಂಬಾ ಬೆದರಿಕೆ ಹಾಗೂ ಅಶ್ಲೀಲವಾಗಿ ಕಮೆಂಟ್ ಮಾಡಿದ್ದಾರೆ. ಅವರ ಹೆಸರುಗಳಿವೆ. ಪವಿತ್ರಾ ಗೌಡ ಬಗ್ಗೆ ಮಾತನಾಡಿದರೆ ನಿಮಗೆ ಕೋಪ ಬರುತ್ತೆ. ಆದರೆ ನಮಗೆ ಅಶ್ಲೀಲ ಸಂದೇಶ​ ಕಳಿಸಿದರೆ ಕೋಪ ಬರಲ್ವಾ? ನಾವು ಮಹಿಳೆಯರು ಅಲ್ವಾ ಎಂದು ದರ್ಶನ್ ಅಭಿಮಾನಿಗಳನ್ನ ವಿರುದ್ಧ ಕಿಡಿಕಾರಿದರು.

ನಾನು ಯಾರಿಗೂ ಹೆದರುವುದಿಲ್ಲ. ಕನ್ನಡ ಚಿತ್ರರಂಗದಲ್ಲಿ ಯಾರೂ ಬಹಿರಂಗವಾಗಿ ಮಾತನಾಡುತ್ತಿಲ್ಲ. ನನಗೇನೇ ಕೆಟ್ಟ ರೀತಿಯ ಪೋಸ್ಟ್ ಹಾಕಿ ಟ್ರೋಲ್ ಮಾಡುತ್ತಾರೆ. ಇನ್ನೂ ಸಾಮಾನ್ಯ ಹೆಣ್ಣು ಮಕ್ಕಳ ಗತಿಯೇನು? ರೇಣುಕಾಸ್ವಾಮಿ ಮಾಡಿರುವ ಮೆಸೇಜ್ ಗೂ ಈಗ ಕೆಲವರು ಮಾಡುತ್ತಿರುವ ಟ್ರೋಲ್ ಗೂ ಯಾವುದೇ ವ್ಯತ್ಯಾಸ ಇಲ್ಲ. ಇಂತಹವರಿಗೆ ಕಾನೂನಿನ ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ದರ್ಶನ್ ಅವರು ಒಮ್ಮೆ ಅಭಿಮಾನಿಗಳಿಗೆ ಮನವರಿಕೆ ಮಾಡಬೇಕು. ಫ್ಯಾನ್ಸ್​​ಗೆ ಅವರು ಹೇಳಬೇಕು ಎಂದು ಹೇಳಿದ್ದಾರೆ.

Film Actress Ramya arrived at Bengaluru City Police  Commissioner office to registr complaint in connction with Renukaswmay social media comments in Bengaluru on Monday.
ರಮ್ಯಾ ವಿರುದ್ಧ ಅಶ್ಲೀಲ ಕಾಮೆಂಟ್ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಿ: ನಗರ ಪೊಲೀಸ್ ಆಯುಕ್ತರಿಗೆ ಮಹಿಳಾ ಆಯೋಗ ಪತ್ರ

ಮತ್ತೊಂದಡೆ ರಾಜ್ಯ ಮಹಿಳಾ ಆಯೋಗ ಅಶ್ಲೀಲವಾಗಿ ಸಂದೇಶ ಕಳಿಸಿದವರ ವಿರುದ್ಧ ತನಿಖೆ ಮಾಡಿ ಕ್ರಮ ಕೈಕೊಳ್ಳಬೇಕು ಎಂದು ಕೋರಿ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com