ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ವಿಮಾನ ತರಬೇತಿ ಸಂಸ್ಥೆ ಸ್ಥಾಪನೆಗೆ ರಾಜ್ಯ ಸರ್ಕಾರ ಮುಂದು..!

ಶಿವಮೊಗ್ಗ ವಿಮಾನ ನಿಲ್ದಾಣವನ್ನು ರಾಜ್ಯ ಸರ್ಕಾರದ ಅಧೀನದ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ (ಕೆಎಸ್‌ಐಐಡಿಸಿ) ನಿರ್ವಹಣೆ ಮಾಡುತ್ತಿದೆ. ಇದೇ ಸಂಸ್ಥೆ ಈಗ ವೈಮಾನಿಕ ತರಬೇತಿ ಸಂಸ್ಥೆ ಆರಂಭಿಸಲು ಟೆಂಡರ್‌ ಆಹ್ವಾನಿಸಿದೆ.
ಶಿವಮೊಗ್ಗ ವಿಮಾನ ನಿಲ್ದಾಣ
ಶಿವಮೊಗ್ಗ ವಿಮಾನ ನಿಲ್ದಾಣ
Updated on

ಬೆಂಗಳೂರು: ರಾಜ್ಯದಲ್ಲಿ ವೈಮಾನಿಕ ಸೌಲಭ್ಯ ವಿಸ್ತರಿಸುವುದು ಗುರಿ ಹೊಂದಿರುವ ರಾಜ್ಯ ಸರ್ಕಾರವು, ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ವಿಮಾನ ತರಬೇತಿ ಸಂಸ್ಥೆ (FTO) ಸ್ಥಾಪಿಸಲು ಮುಂದಾಗಿದೆ.

ಶಿವಮೊಗ್ಗ ವಿಮಾನ ನಿಲ್ದಾಣವನ್ನು ರಾಜ್ಯ ಸರ್ಕಾರದ ಅಧೀನದ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ (ಕೆಎಸ್‌ಐಐಡಿಸಿ) ನಿರ್ವಹಣೆ ಮಾಡುತ್ತಿದೆ. ಇದೇ ಸಂಸ್ಥೆ ಈಗ ವೈಮಾನಿಕ ತರಬೇತಿ ಸಂಸ್ಥೆ ಆರಂಭಿಸಲು ಟೆಂಡರ್‌ ಆಹ್ವಾನಿಸಿದೆ.

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಎಫ್‌ಟಿಒ ಸ್ಥಾಪನೆಗಾಗಿ 3,500 ಚದರ ಮೀ. ವಿಸ್ತೀರ್ಣದ ಜಾಗ ನೀಡಲಾಗುತ್ತಿದ್ದು, ಅದರಲ್ಲಿ 1,500 ಚದರ ಮೀ. ಅನ್ನು ವಿಮಾನಗಳ ಹ್ಯಾಂಗರ್‌ಗಳಿಗೆ, 2 ಸಾವಿರ ಚದರ ಮೀ. ತರಗತಿ ಕೊಠಡಿ, ಕಚೇರಿಗಳಿಗೆ ಬಳಸಿಕೊಳ್ಳಲಾಗುತ್ತದೆ. 2000 ಚದರ ಮೀಟರ್‌ ಜಾಗವನ್ನು ಟರ್ಮಿನಲ್‌ನ ಹೊರ ಭಾಗದಲ್ಲಿ ನೀಡಲಾಗುತ್ತಿದೆ. ಇಲ್ಲಿ ಕ್ಲಾಸ್‌ರೂಂ, ಸಿಮುಲೇಟರ್‌ ವಿಭಾಗ, ಗ್ರಂಥಾಲಯ, ರೇಡಿಯೋ ಟೆಲಿಫೋನಿ ತರಬೇತಿ, ಟೆಸ್ಟಿಂಗ್‌ ರೂಮ್‌, ಕಚೇರಿಗಳು ಸೇರಿದ ವಿವಿಧ ಕೊಠಡಿಗಳನ್ನು ನಿರ್ಮಿಸಲಾಗುತ್ತದೆ.

ಕೆಎಸ್‌ಐಐಡಿಸಿ ಸಂಸ್ಥೆಯು ಫೈರ್‌ ಸೇಫ್ಟಿ, ಆಂಬುಲೆನ್ಸ್‌ ಸೌಲಭ್ಯ, ಏರ್‌ ಟ್ರಾಫಿಕ್‌ ಕಂಟ್ರೋಲ್‌, ರನ್‌ ವೇ ನಿರ್ವಹಣೆ ಮಾಡಲಿದೆ. ತರಬೇತಿ ಸಂಸ್ಥೆ ಆರಂಭಿಸುವ ಏಜೆನ್ಸಿಯು ತನ್ನ ವ್ಯಾಪ್ತಿಯ ವಿದ್ಯುತ್‌ ಬಿಲ್‌, ಸೆಕ್ಯೂರಿಟಿ ಸೇರಿದಂತೆ ವಿವಿಧ ನಿರ್ವಹಣೆಗಳನ್ನು ತಾನೆ ಮಾಡಿಕೊಳ್ಳಬೇಕು. ಅಲ್ಲದೆ, ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ), ನಾಗರಿಕ ವಿಮಾನಯಾನ ಇಲಾಖೆ ಸೂಚಿಸಿರುವ ನಿಯಮಗಳ ಪ್ರಕಾರ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಲಾಗಿದೆ.

ಪ್ರತಿ ವರ್ಷ 100 ಮಂದಿಗೆ ತರಬೇತಿ ನೀಡುವ ಗುರಿ ಇದೆ. ತರಬೇತಿ ಸಂಸ್ಥೆ ಆರಂಭವಾದ ಮೊದಲ ವರ್ಷ 50 ಅಭ್ಯರ್ಥಿಗಳನ್ನು ದಾಖಲು ಮಾಡಲಾಗುತ್ತದೆ. ಮೂರನೇ ವರ್ಷದ ಹೊತ್ತಿಗೆ 100 ಅಭ್ಯರ್ಥಿಗಳನ್ನು ದಾಖಲು ಮಾಡಿಕೊಳ್ಳಬೇಕು. ಶೇ.25 ಸೀಟುಗಳನ್ನು ಕರ್ನಾಟಕದ ವಿದ್ಯಾರ್ಥಿಗಳು ಮತ್ತು ಮಹಿಳೆಯರಿಗೆ ಕಾಯ್ದಿರಿಸಬೇಕು. ಅವರಿಗೆ ಶುಲ್ಕ ವಿನಾಯಿತಿ ಸಹ ನೀಡಬೇಕು. ಏಜೆನ್ಸಿಯೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದರೂ ಅದಕ್ಕೆ ಮುನ್ನ ಕೆಎಸ್‌ಐಐಡಿಸಿ ಅನುಮತಿ ಪಡೆಯಬೇಕು.

ಪ್ರತಿ ಚದರ ಮೀಟರ್‌ಗೆ ವಾರ್ಷಿಕ 650 ರೂ.ಗಳನ್ನು ಕೆಎಸ್‌ಐಐಡಿಸಿಗೆ ಏಜೆನ್ಸಿಯು ಪಾವತಿಸಬೇಕು. ಪ್ರತಿ ಮೂರು ವರ್ಷಕ್ಕೆ ಈ ದರ ಶೇ.15ರಷ್ಟು ಹೆಚ್ಚಳವಾಗಲಿದೆ. ವಿಮಾನ ನಿಲ್ದಾಣ ಮತ್ತು ರನ್‌ವೇ ಬಳಕೆ ಮಾಡಿಕೊಳ್ಳುವಾಗ ಕೆಎಸ್‌ಐಐಡಿಸಿಯೊಂದಿಗೆ ಮಾಹಿತಿ ಪಡೆಯಬೇಕು. ದೈನಂದಿನ ಕಾರ್ಯಾಚರಣೆ, ಸರ್ಕಾರದ ವಿಮಾನಗಳು, ವಿವಿಐಪಿ ವಿಮಾನಗಳಿಗೆ ಮೊದಲ ಆದ್ಯತೆ ನೀಡಬೇಕು. ತರಬೇತಿ ಸಂಸ್ಥೆ ಕಾರ್ಯಾರಂಭ ಮಾಡಿದ ಮೂರು ತಿಂಗಳ ಒಳಗೆ ಮೂರು ವಿಮಾನಗಳನ್ನು ಹೊಂದಿಸಿಕೊಳ್ಳಬೇಕು. ಡಿಜಿಸಿಎ ನಿಯಮದಂತೆ ಒಂದು ವರ್ಷದೊಂದಿಗೆ ಮತ್ತಷ್ಟು ವಿಮಾನಗಳನ್ನು ಹೊಂದಬೇಕು ಎಂಬ ಷರತ್ತುಗಳನ್ನು ಹಾಕಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com