
ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮೇಜರ್ ಪಿ. ಮಣಿವಣ್ಣನ್‌ಗೆ ಬಿಡಿಎ ಆಯುಕ್ತ ಹುದ್ದೆಯನ್ನು ಸಮಪ್ರಭಾರ ಜವಾಬ್ದಾರಿವಹಿಸಿ ಸರ್ಕಾರ ಆದೇಶಿಸಿದ್ದು, ಇದರಂತೆ ಬಿಡಿಎ ಆಯುಕ್ತರಾಗಿ ಅವರು ಶನಿವಾರ ಅಧಿಕಾರ ಸ್ವೀಕಾರ ಮಾಡಿದರು.
ಶನಿವಾರ ಸದಾಶಿವನಗರದಲ್ಲಿ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ ಮಣಿವಣ್ಣನ್ ಅವರಿಗೆ ಡಿಸಿಎಂ ಶುಭ ಹಾರೈಸಿದರು.
ನಾವು ಒಟ್ಟಾಗಿ ನಾವೀನ್ಯತೆ, ಸುಸ್ಥಿರತೆ ಮತ್ತು ಸ್ಮಾರ್ಟ್ ಸಿಟಿ ಬೆಳವಣಿಗೆಯ ನಗರವಾದ ಬ್ರ್ಯಾಂಡ್ ಬೆಂಗಳೂರನ್ನು ನಿರ್ಮಿಸಲು ಬದ್ಧರಾಗಿದ್ದೇವೆ ಎಂದು ಹೇಳಿದರು.
ಬಿಡಿಎ ಆಯುಕ್ತ ಎನ್.ಜಯರಾಮ್ ಅವರು ಶನಿವಾರ (ಮೇ 31) ವಯೋನಿವೃತ್ತಿಗೊಂಡಿದ್ದು, 1998 ರ ಬ್ಯಾಚ್ ಅಧಿಕಾರಿಯಾಗಿದ್ದ ಮಣಿವಣ್ಣನ್ ಬಿಡಿಎ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
Advertisement