ಸಿವಿಲ್ ಪ್ರಕ್ರಿಯಾ ಸಂಹಿತೆ ಮಸೂದೆಗೆ ರಾಷ್ಟ್ರಪತಿ ಅಂಕಿತ: ಇನ್ನು ಮುಂದೆ 2 ತಿಂಗಳಲ್ಲೇ ಸಿವಿಲ್‌ ವ್ಯಾಜ್ಯಗಳು ಇತ್ಯರ್ಥ..!

ತಿದ್ದುಪಡಿ ಮಸೂದೆಯನ್ನು ಬೆಳಗಾವಿ ಅಧಿವೇಶನದಲ್ಲಿ ಅನುಮೋದಿಸ ಲಾಗಿತ್ತು. ರಾಜ್ಯಪಾಲರು ಇದನ್ನು ಸಂವಿಧಾನದ ಅನುಚ್ಛೇದ 200 ಮತ್ತು 254ರ ಅಡಿ ರಾಷ್ಟ್ರಪತಿಗಳ ಅಂಕಿತಕ್ಕಾಗಿ ಕಾಯ್ದಿರಿಸಿದ್ದರು.
President Murmu seeks top court's opinion
ರಾಷ್ಟ್ರಪತಿ ದ್ರೌಪದಿ ಮುರ್ಮು
Updated on

ಬೆಂಗಳೂರು: ಪ್ರಕರಣಗಳ ತ್ವರಿತ ವಿಲೇವಾರಿಗಾಗಿ ಮತ್ತು ಶೀಘ್ರವಾಗಿ ನ್ಯಾಯ ಒದಗಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯಕ್ಕೆ ಅನುಕೂಲವಾಗುವಂತೆ ಉಪಬಂಧ ಕಲ್ಪಿಸಲು ಸಿವಿಲ್‌ ಪ್ರಕ್ರಿಯಾ ಸಂಹಿತೆ 1908ಕ್ಕೆ ತಿದ್ದುಪಡಿ ಮಾಡುವ “ಸಿವಿಲ್‌ ಪ್ರಕ್ರಿಯಾ ಸಂಹಿತೆ (ಕರ್ನಾಟಕ ತಿದ್ದುಪಡಿ) ಅಧಿನಿಯಮ, 2024” ಕ್ಕೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದಾರೆ.

ತಿದ್ದುಪಡಿ ಮಸೂದೆಯನ್ನು ಬೆಳಗಾವಿ ಅಧಿವೇಶನದಲ್ಲಿ ಅನುಮೋದಿಸ ಲಾಗಿತ್ತು. ರಾಜ್ಯಪಾಲರು ಇದನ್ನು ಸಂವಿಧಾನದ ಅನುಚ್ಛೇದ 200 ಮತ್ತು 254ರ ಅಡಿ ರಾಷ್ಟ್ರಪತಿಗಳ ಅಂಕಿತಕ್ಕಾಗಿ ಕಾಯ್ದಿರಿಸಿದ್ದರು. ಇದೀಗ ಅಧಿನಿಯಮಕ್ಕೆ ರಾಷ್ಟ್ರಪತಿಗಳು ಒಪ್ಪಿಗೆ ಸೂಚಿಸಿದ್ದು, ರಾಜ್ಯ ಗೆಜೆಟ್‌ನಲ್ಲಿ ಪ್ರಕಟವಾಗಿದೆ.

ಕೋರ್ಟ್‌ಗಳಲ್ಲಿ ಸಾಕಷ್ಟು ಸಂಖ್ಯೆ ಯಲ್ಲಿ ಸಿವಿಲ್‌ ವ್ಯಾಜ್ಯಗಳು ವಿಲೇವಾರಿಗೆ ಬಾಕಿ ಇವೆ. ಹಾಗಾಗಿ ಅವುಗಳ ತ್ವರಿತ ವಿಲೇವಾರಿಗಾಗಿ ರಾಜ್ಯ ಸರಕಾರ ಸಿವಿಲ್‌ ಪ್ರಕ್ರಿಯಾ ಸಂಹಿತೆ ಮಸೂದೆಗೆ ತಿದ್ದುಪಡಿ ಮಾಡಿತ್ತು.

ತಿದ್ದುಪಡಿ ಮಸೂದೆಯಿಂದ ಇನ್ನು ಮುಂದೆ ಸಿವಿಲ್‌ ಪ್ರಕರಣಗಳಲ್ಲಿ ನ್ಯಾಯದಾನ ತ್ವರಿಗತಿಯಲ್ಲಿ ಸಿಗಲಿದೆ. ಮಧ್ಯಸ್ಥಿಕೆದಾರರು ಸಿವಿಲ್‌ ದಾವೆಗಳ ರಾಜಿ- ಸಂಧಾನಕ್ಕೆ ಪ್ರಯತ್ನಿಸಲು ಅವಕಾಶ ಇದ್ದು, 2 ತಿಂಗಳು ಗಳಲ್ಲಿ ರಾಜಿ-ಸಂಧಾನ ಮಾಡಬಹುದು. ಅದು ಮುರಿದು ಬಿದ್ದರೆ ತತ್‌ಕ್ಷಣವೇ ನ್ಯಾಯಾಲಯವು ವಿಚಾರಣೆಗೆ ಕೈಗೆತ್ತಿಕೊಳ್ಳಬಹುದು. ಅರ್ಜಿದಾರರು, ಪ್ರತಿವಾದಿ ಇಬ್ಬರೂ ಒಪ್ಪಿದರೆ ಇನ್ನೂ ಒಂದು ತಿಂಗಳ ರಾಜಿ-ಸಂಧಾನ ನಡೆಸಲು ಅವಕಾಶ ಇದೆ. ಅಲ್ಲೂ ಪ್ರಯೋ ಜನ ಆಗದಿದ್ದರೆ ನ್ಯಾಯಾಲಯ ವಿಚಾರಣೆ ನಡೆಸಲಿದೆ.

President Murmu seeks top court's opinion
ನೋಂದಣಿ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತ

ಪ್ರಕರಣವನ್ನು ನ್ಯಾಯಾಲಯ ವಿಚಾರಣೆಗೆ ಕೈಗೆತ್ತಿಕೊಂಡ ದಿನವೇ ತೀರ್ಪಿನ ದಿನಾಂಕ ನಿಗದಿಪಡಿಸಲಿದೆ. ಅಲ್ಲದೆ, ಲಿಖೀತ ಹೇಳಿಕೆ, ಸಾಕ್ಷ್ಯ ಸಂಗ್ರಹ, ಪ್ರಮಾಣಪತ್ರ ಸಲ್ಲಿಕೆ, ಸಾಕ್ಷ್ಯ ದಾಖಲಿಸುವಿಕೆ, ಲಿಖೀತ ವಾದ ಮಂಡನೆ, ಮೌಖೀಕ ವಾದ ಮಂಡನೆ ಆಲಿಸುವಿಕೆ, ಮೌಖಿಕ ವಾದದ ಚರ್ಚೆಗೂ ವೇಳಾಪಟ್ಟಿಯನ್ನು ಸೂಚಿಸಲಿದೆ.

ಈ ಪ್ರಕಾರ ಆದ್ಯತೆ ಮೇರೆಗೆ ಪ್ರಕರಣ ನಿರ್ವಹಿಸಲು ತಿದ್ದುಪಡಿಯಲ್ಲಿ ತಿಳಿಸಿದ್ದು, ಯಾವುದೇ ಹಂತದಲ್ಲಿ ಒಂದು ತಿಂಗಳಲ್ಲಿ ಕೇವಲ 3 ಮುಂದೂಡಿಕೆ ಅಥವಾ 3 ದಿನಾಂಕಗಳ ಅವಕಾಶ ಮಾತ್ರ ಇದೆ. ಯಾವುದೇ ಹಂತದಲ್ಲಿ ಅರ್ಜಿದಾರ-ಪ್ರತಿ ವಾದಿ ಈ ಅವಕಾಶದಲ್ಲಿ ಸಲ್ಲಿಸದಿದ್ದರೆ, ಅಂಥವರ ಹೇಳಿಕೆ ಗಳನ್ನು ಶೂನ್ಯವೆಂದು ಪರಿಗಣಿಸಲು ಅವಕಾಶ ಇದೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com