ಕೊಪ್ಪಳ: ಕೂಡಿಟ್ಟ 'ಗೃಹಲಕ್ಷ್ಮಿ' ಹಣದಿಂದ ಗ್ರಾಮದ ರಸ್ತೆ ಸರಿಪಡಿಸಿದ ರೈತ ಮಹಿಳೆ!

ಹಲವು ಮಹಿಳೆಯರು ಸರ್ಕಾರ ಪ್ರತಿ ತಿಂಗಳು ನೀಡುವ ರೂ. 2 ಸಾವಿರ ಕೂಡಿಟ್ಟು ಚಿನ್ನ ಖರೀದಿಸಿದರೆ, ಕೆಲವರು ಬೋರ್ ವೆಲ್ ಕೊರೆಸಿದ್ದಾರೆ.
Farmer Savita Nagreddy in Yerehanchinal village
ರೈತ ಮಹಿಳೆ ಸವಿತಾ ನಾಗರೆಡ್ಡಿ
Updated on

ಕೊಪ್ಪಳ: ಗದಗ ಮತ್ತು ಕೊಪ್ಪಳ ಜಿಲ್ಲೆಗಳ ಗಡಿಭಾಗ ಯರೇಹಂಚಿನಾಳ್ ಗ್ರಾಮದ ರೈತ ಮಹಿಳೆಯೊಬ್ಬರು ಕೂಡಿಟ್ಟ ಗೃಹಲಕ್ಷ್ಮಿ ಹಣದಲ್ಲಿ ರಸ್ತೆ ಬದಿಯ ಮುಳ್ಳು, ಪೊದೆಗಳನ್ನು ತೆರವುಗೊಳಿಸಲು ಬಳಸಿದ್ದಾರೆ.

ಹಲವು ಮಹಿಳೆಯರು ಸರ್ಕಾರ ಪ್ರತಿ ತಿಂಗಳು ನೀಡುವ ರೂ. 2 ಸಾವಿರ ಕೂಡಿಟ್ಟು ಚಿನ್ನ ಖರೀದಿಸಿದರೆ, ಕೆಲವರು ಬೋರ್ ವೆಲ್ ಕೊರೆಸಿದ್ದಾರೆ. ಆದರೆ ಸವಿತಾ ನಾಗರೆಡ್ಡಿ ಅವರು 11 ತಿಂಗಳಿಂದ ಕೂಡಿಟ್ಟ ಹಣವನ್ನು ಕೊಪ್ಪಳ ಜಿಲ್ಲೆಯ ಯರೇಹಂಚಿನಾಳದಿಂದ ಕೋಟುಮಚಗಿ ಗ್ರಾಮಗಳವರೆಗೆ ರಸ್ತೆ ಕಾಮಗಾರಿಗೆ ಬಳಸಿದ್ದಾರೆ.

ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿರುವ ಮುಳ್ಳು, ಗಿಡಗಂಟಿ, ಪೊದೆಗಳನ್ನು ತೆರವುಗೊಳಿಸುವಂತೆ ಹಲವು ರೈತರು ಸಂಬಂಧಪಟ್ಟ ಗ್ರಾಮ ಪಂಚಾಯಿತಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಸವಿತಾ ಜೆಸಿಬಿ ಯಂತ್ರಗಳನ್ನು ಬಾಡಿಗೆಗೆ ಪಡೆದು ಕೂಲಿ ಕಾರ್ಮಿಕರಿಗೆ ಕೂಲಿ ನೀಡಿ ಕಾಮಗಾರಿ ಪೂರ್ಣಗೊಳಿಸಲು ನಿರ್ಧರಿಸಿದ್ದಾರೆ. ಅನೇಕ ಗ್ರಾಮಸ್ಥರು ಆಕೆಯ ನಡೆಯನ್ನು ಶ್ಲಾಘಿಸಿದ್ದು, ಈ ದಿಟ್ಟ ಹೆಜ್ಜೆಗೆ ಧನ್ಯವಾದ ಸಲ್ಲಿಸಿದ್ದಾರೆ.

ಇದೇ ರೀತಿಯ ಸಾರ್ವಜನಿಕ ಸೇವೆಗೆ ಗೃಹ ಲಕ್ಷ್ಮಿ ಹಣ ಬಳಸುವುದಾಗಿ ಸವಿತಾ ಹೇಳಿದ್ದಾರೆ. ಸವಿತಾ ಅವರ ಪತಿ ಉಮೇಶ್ ಅವರು ರೈತರಾಗಿದ್ದು, ರಸ್ತೆ ಸರಿಪಡಿಸಲು ರೂ. 22,000 ಬಳಸಲು ಒಪ್ಪಿಗೆ ನೀಡಿದ್ದಾರೆ.

ಸವಿತಾ ಕಾರ್ಯಕ್ಕೆ ರೈತ ಸಂಘದಿಂದ ಮೆಚ್ಚುಗೆ: ಗ್ರಾಮಕ್ಕೆ ಭೇಟಿ ನೀಡಿದ ಯಲಬುರ್ಗಾ ರೈತ ಸಂಘದ ಅಧ್ಯಕ್ಷ ಅಂದಪ್ಪ ಕೋಳೂರು, ಸವಿತಾ ಅವರ ಸಮಾಜ ಸೇವಾ ಕಾರ್ಯಕ್ಕೆ ಕೃತಜ್ಞತೆ ಸಲ್ಲಿಸಿದರು. ರಸ್ತೆಯಲ್ಲಿ ಡಾಂಬರ್ ಕಿತ್ತುಬಂದಿದ್ದು, ಹೊಂಡಗಳು ಬಿದ್ದಿವೆ, ರಸ್ತೆ ಬದಿಯಲ್ಲಿ ಮುಳ್ಳು ಪೊದೆಗಳು ಬೆಳೆದಿದ್ದು, ವಾಹನಗಳ ಓಡಾಟಕ್ಕೆ ಮುಳ್ಳು-ಕಂಟಿ ಅಡ್ಡಿಯಾಗುತ್ತಿವೆ. ರಸ್ತೆ ದುರಸ್ತಿಗೊಳಿಸಬೇಕು ಎಂದು ರೈತ ಸಂಘದಿಂದ ಶಾಸಕ ಬಸವರಾಜ ರಾಯರೆಡ್ಡಿ ಅವರಿಗೆ ಮನವಿ ಪತ್ರ ಸಲ್ಲಿಸಿದ್ದೆವು.ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಆದರೆ ಈಗ ಸವಿತಾ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾದರಿಯಾಗಿದ್ದಾರೆ. ಇವರಿಂದ ಇತರರು ಪ್ರೇರಣೆಯಾಗಿ ಗ್ರಾಮೀಣ ಪ್ರದೇಶಗಳಲ್ಲಿ ಬದಲಾವಣೆಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

Farmer Savita Nagreddy in Yerehanchinal village
ಹಾವೇರಿ: ಗೃಹಲಕ್ಷ್ಮಿ ಹಣ ಕೂಡಿಟ್ಟು ಸೊಸೆಗೆ ಫ್ಯಾನ್ಸಿ ಸ್ಟೋರ್ ಹಾಕಿಸಿ‌ಕೊಟ್ಟ ಅತ್ತೆ!

ಸವಿತಾ ಹೇಳಿದ್ದು ಹೀಗೆ: ನಮ್ಮ ಹಳ್ಳಿಯ ಜನರು ಓಡಾಡಲು ಹೇಗೆ ಕಷ್ಟಪಡುತ್ತಾರೆ ಎಂಬುದನ್ನು ಗಮನಿಸುತ್ತಿದ್ದೇನೆ, ಮುಳ್ಳಿನ ಪೊದೆಗಳಿಂದ ಜನರಿಗೆ ಗಾಯಗಳಾಗಿದ್ದು, ನಮ್ಮ ಮುಖಕ್ಕೂ ಹೊಡೆದಿವೆ. ರಸ್ತೆ ಕಾಮಗಾರಿಗಾಗಿ ಗೃಹ ಲಕ್ಷ್ಮಿ ಹಣ ಬಳಸಲು ನಿರ್ಧರಿಸಿದ್ದೇನೆ ಮತ್ತು ಅಗತ್ಯವಿದ್ದರೆ ಹೆಚ್ಚಿನ ಹಣ ವೆಚ್ಚ ಮಾಡಲು ಸಿದ್ದನಿದ್ದೇನೆ. ಇದು ನನ್ನ ಗ್ರಾಮಸ್ಥರಿಗೆ ಸಣ್ಣ ಸೇವೆಯಾಗಿದೆ ಎಂದು ಸವಿತಾ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com