ಆಗಸ್ಟ್ 15 ರಿಂದ ಮುಜರಾಯಿ ಇಲಾಖೆ ವ್ಯಾಪ್ತಿಯ ಎಲ್ಲಾ ದೇವಾಲಯಗಳು ಪ್ಲಾಸ್ಟಿಕ್ ಮುಕ್ತ!

ಹಲವಾರು ದೇವಾಲಯಗಳು ಪ್ರಸಾದ ವಿತರಿಸಲು ಪ್ಲಾಸ್ಟಿಕ್ ಕವರ್‌ಗಳು, ತೀರ್ಥಗಳಿಗೆ ಪ್ಲಾಸ್ಟಿಕ್ ಬಾಟಲಿಗಳು ಮತ್ತು ಭಕ್ತರಿಗೆ ಕುಂಕುಮ ನೀಡಲು ಪ್ಲಾಸ್ಟಿಕ್ ಸ್ಯಾಚೆಟ್‌ಗಳನ್ನು ಬಳಸುತ್ತಿವೆ. ಇವುಗಳನ್ನು ನಿಷೇಧಿಸಲು ನಿರ್ಧರಿಸಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ರಾಜ್ಯದ ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುವ ದೇವಾಲಯಗಳನ್ನು ಆಗಸ್ಟ್ 15ರಿಂದ ಪ್ಲಾಸ್ಟಿಕ್ ಮುಕ್ತಗೊಳಿಸಲು ತೀರ್ಮಾನಿಸಲಾಗಿದ್ದು, ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ದೇವಸ್ಥಾನಗಳ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮುಜರಾಯಿ ಖಾತೆ ಸಚಿವ ರಾಮಲಿಂಗಾರೆಡ್ಡಿ ಅವರು ಸೋಮವಾರ ಹೇಳಿದರು.

ಸೋಮವಾರ ವಿಕಾಸಸೌಧದ ಸಮ್ಮೇಳನ ಸಭಾಂಗಣದಲ್ಲಿ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ (ಮುಜರಾಯಿ) ಪ್ರಗತಿ ಪರಿಶೀಲನೆ ಸಭೆ ನಡೆಸಿ ಬಳಿಕ ಸಚಿವರು ಪತ್ರಿಕಾಗೋಷ್ಠಿಯದ್ದೇಶಿಸಿ ಮಾತನಾಡಿದರು.

ಪ್ರಸ್ತುತ, ಹಲವಾರು ದೇವಾಲಯಗಳು ಪ್ರಸಾದ ವಿತರಿಸಲು ಪ್ಲಾಸ್ಟಿಕ್ ಕವರ್‌ಗಳು, ತೀರ್ಥಗಳಿಗೆ ಪ್ಲಾಸ್ಟಿಕ್ ಬಾಟಲಿಗಳು ಮತ್ತು ಭಕ್ತರಿಗೆ ಕುಂಕುಮ ನೀಡಲು ಪ್ಲಾಸ್ಟಿಕ್ ಸ್ಯಾಚೆಟ್‌ಗಳನ್ನು ಬಳಸುತ್ತಿವೆ. ಇವುಗಳನ್ನು ನಿಷೇಧಿಸಲು ನಿರ್ಧರಿಸಲಾಗಿದೆ. ಈ ವರ್ಷ ಆಗಸ್ಟ್ 15 ರಿಂದ ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಾಲಯಗಳಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗುವುದು. ದೇವಾಲಯಗಳಿಗೆ ಅಸ್ತಿತ್ವದಲ್ಲಿರುವ ಪ್ಲಾಸ್ಟಿಕ್ ಸ್ಟಾಕ್ ಅನ್ನು ವಿಲೇವಾರಿ ಮಾಡಲು ಎರಡು ತಿಂಗಳ ಕಾಲಾವಕಾಶ ನೀಡಲಾಗುವುದು ಎಂದು ಹೇಳಿದರು.

ಮುಂದಿನ ಮೂರು ತಿಂಗಳಲ್ಲಿ ಭೂಮಿ ಸೇರಿದಂತೆ ಎಲ್ಲಾ ದೇವಾಲಯಗಳ ವಿವರಗಳನ್ನು ಒದಗಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದ್ದು, ದೇವಾಲಯಗಳಿಗೆ ಸೇರಿದ ಉಳಿದ 20,000 ಎಕರೆ ಭೂಮಿಯ ದಾಖಲಾತಿಯನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.

ಸಂಗ್ರಹ ಚಿತ್ರ
ಮುಜರಾಯಿ ತಿದ್ದುಪಡಿ ವಿಧೇಯಕಕ್ಕೆ ಅಂಕಿತ ಹಾಕುವಂತೆ ರಾಜ್ಯಪಾಲರಿಗೆ ಅರ್ಚಕರ ಒಕ್ಕೂಟ ಮನವಿ

ರಾಜ್ಯದಲ್ಲಿ 34,565 ಅಧಿಸೂಚಿತ ಮುಜರಾಯಿ ದೇವಾಲಯಗಳಿವೆ. ಈ ಪೈಕಿ 31,095 ದೇವಾಲಯ ಗಳ ಮಾಹಿತಿ ಲಭ್ಯವಿದೆ. ಉಳಿದ 3,470 ದೇವಾಲಯಗಳ ಮಾಹಿತಿ ಲಭ್ಯವಿಲ್ಲ. ಈ ಪೈಕಿ ಕಳೆದ ಮೂರು ತಿಂಗಳಲ್ಲಿ 1,253 ದೇವಾಲಯಗಳನ್ನು ಗುರುತಿಸಲಾಗಿದೆ. ಮುಂದಿನ ಮೂರು ತಿಂಗಳಲ್ಲಿ ಮಾಹಿತಿ ಲಭ್ಯವಿಲ್ಲದ ದೇವಾಲಯಗಳ ಮಾಹಿತಿ ಸಂಗ್ರಹಿಸಿ ಅಂತಿಮಪಟ್ಚಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.

ರಾಜ್ಯದಲ್ಲಿ ಒಟ್ಟು 45,915 ಅಧಿಸೂಚಿತ ದೇವಾಲಯಗಳು ಮತ್ತು ಆಸ್ತಿಗಳಿವೆ. ಕಳೆದ ಮೂರು ತಿಂಗಳಲ್ಲಿ 11,332 ಆಸ್ತಿ ಗಳನ್ನು ಗುರುತಿಸಲಾಗಿದೆ. ಈ ಪೈಕಿ 9,883 ಆಸ್ತಿಗಳ ಸರ್ವೆ ಮಾಡಲಾಗಿದೆ. ಉಳಿದ ಆಸ್ತಿಗಳನ್ನು ಮೂರು ತಿಂಗಳೊಳಗೆ ಸ್ವಾಯಿತ್ವ ಯೋಜನೆಯಡಿ ಸರ್ವೆ ಮಾಡಿ ವರದಿ ಸಲ್ಲಿಸಲು ನಿರ್ದೇಶನ ನೀಡಲಾಗಿದೆ ಎಂದರು.

ಮುಜರಾಯಿ ದೇವಸ್ಥಾನಗಳ ಆಸ್ತಿಯನ್ನು ನಗರ, ಗ್ರಾಮಾಂತರ ಮತ್ತು ವ್ಯವಸಾಯ ಜಮೀನು ಎಂದು ವಿಂಗಡಿಸಿ ಸರ್ವೆ ಮಾಡಿಸಬೇಕು. ಏಕೆಂದರೆ, ರಾಜ್ಯ ದಲ್ಲಿ ಮುಜರಾಯಿ ದೇವಸ್ಥಾನಗಳನ್ನು ಗೆಜೆಟ್ ಅಧಿ ಸೂಚನೆ ಮಾಡಲಾಗಿದೆ. ಆದರೆ, ಅದರ ಆಸ್ತಿಗಳನ್ನು ಗೆಜೆಟ್ ಅಧಿಸೂಚನೆ ಮಾಡಿಲ್ಲ. ಹೀಗಾಗಿ ಸರ್ವೆ ಮಾಡಿದ ಆಸ್ತಿಗಳನ್ನು ಸೆಕ್ಷನ್ 31ರ ಅಡಿ ಗೆಜೆಟ್ ಅಧಿಸೂಚನೆ ಹೊರಡಿಸುವಂತೆ ಸೂಚಿಸಲಾಗಿದೆ. ಇದರಿಂದ ದೇವಸ್ಥಾನ ಆಸ್ತಿ ಉಳಿಸಲು ಅನುಕೂಲ ವಾಗಲಿದೆ ಎಂದರು.

ತಿರುಪತಿಯಲ್ಲಿ ಮುಂದಿನ ಸೆಪ್ಟೆಂಬರ್ ಅಂತ್ಯಕ್ಕೆ 400 ವಿಐಪಿ ವಸತಿ ಗೃಹಗಳು ಬಳಕೆಗೆ ಲಭ್ಯವಾಗಲಿದ್ದು, ಈ ವಸತಿ ಗೃಹಗಳಿಗೆ ತ್ರಿಸ್ಟಾ‌ಪ್ ಸೌಲಭ್ಯ ಕಲ್ಪಿಸಲು ತೀರ್ಮಾನಿಸಲಾಗಿದೆ. ಮಹಾರಾಷ್ಟ್ರದ ತುಳಜಾಪುದಲ್ಲಿ ರೂ3 ಕೋಟಿ ವೆಚ್ಚದಲ್ಲಿ ಡಾರ್ಮೆಟರಿ, ಸ್ನಾನಗೃಹ, ಶೌಚಾ ಲಯ, ಸ್ಟೋರ್, ಕಚೇರಿ ಕೊಠಡಿ ದುರಸ್ತಿಗೆ ತೀರ್ಮಾನಿಸಿ, ಅನುದಾನ ಬಿಡುಗಡೆ ಹಾಗೂ ಆಡಳಿತಾತ್ಮಕ ಅನುಮೋದನೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪಂಡರಾಪುರದಲ್ಲಿ ಯಾತ್ರಿ ನಿವಾಸಿ ನಿರ್ಮಾಣ ಸಂಬಂಧ ಸ್ಥಳ ಪರಿಶೀಲಿಸಿ, ಸ್ಥಳೀಯ ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಲಾಗಿದೆ ಎಂದು ಇದೇ ವೇಳೆ ಮಾಹಿತಿ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com