ಪ್ರಯಾಣಿಕರ ಜೇಬಿಗೆ ಕತ್ತರಿ: ಬೆಂಗಳೂರಿನಲ್ಲಿ ದುಬಾರಿಯಾಗಲಿದೆ ಆಟೋ ಪ್ರಯಾಣ!

ಮೂಲ ದರವನ್ನು 40 ರೂ.ಗಳಿಗೆ ಮತ್ತು ಪ್ರತಿ ಕಿಲೋಮೀಟರ್ ಶುಲ್ಕವನ್ನು 20 ರೂ.ಗಳಿಗೆ ಪರಿಷ್ಕರಿಸಬೇಕೆಂದು ಒತ್ತಡ ಹೇರುತ್ತಿದ್ದಾರೆ.
Representational image
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ರಾಜ್ಯದ ಜನತೆ ಹಲವು ಬೆಲೆ ಏರಿಕೆಗಳಿಂದ ತತ್ತರಿಸಿರುವ ನಡುವೆಯೇ ಆಟೋ ಪ್ರಯಾಣ ದರ ಕೂಡ ಏರಿಕೆಯಾಗುವ ಸಾಧ್ಯತೆಯಿದೆ. ಆಟೋರಿಕ್ಷಾ ದರವು ಈಗಿರುವ 30 ರೂ.ಗಳಿಂದ 36 ರೂ.ಗಳಿಗೆ ಮತ್ತು ನಂತರದ ಪ್ರತಿ ಕಿಲೋಮೀಟರ್ ಶುಲ್ಕವು 15 ರೂ.ಗಳಿಂದ 18 ರೂ.ಗಳಿಗೆ ಏರಿಕೆಯಾಗುವ ನಿರೀಕ್ಷೆಯಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಆಟೋರಿಕ್ಷಾ ಚಾಲಕರು ಮತ್ತು ಸಂಘಗಳು ಸರ್ಕಾರವನ್ನು ಪದೇ ಪದೇ ದರವನ್ನು ಹೆಚ್ಚಿಸುವಂತೆ ಒತ್ತಾಯಿಸುತ್ತಿವೆ. ಮೂಲ ದರವನ್ನು 40 ರೂ.ಗಳಿಗೆ ಮತ್ತು ಪ್ರತಿ ಕಿಲೋಮೀಟರ್ ಶುಲ್ಕವನ್ನು 20 ರೂ.ಗಳಿಗೆ ಪರಿಷ್ಕರಿಸಬೇಕೆಂದು ಒತ್ತಡ ಹೇರುತ್ತಿದ್ದಾರೆ.

ನಗರ ವ್ಯಾಪ್ತಿಗೆ ಬರುವ 10 ಪ್ರಾದೇಶಿಕ ಸಾರಿಗೆ ಕಚೇರಿಗಳ (ಆರ್‌ಟಿಒ) ಅಧಿಕಾರಿಗಳು, ಪೊಲೀಸ್ ಉಪ ಆಯುಕ್ತರು (ಸಂಚಾರ) ಮತ್ತು ಆಟೋ ಚಾಲಕರ ಸಂಘಗಳ ಪ್ರತಿನಿಧಿಗಳು ಜಿಲ್ಲಾ ಸಾರಿಗೆ ಪ್ರಾಧಿಕಾರದ (ಡಿಟಿಎ) ಭಾಗವಾಗಿರುತ್ತಾರೆ. ಅಸ್ತಿತ್ವದಲ್ಲಿರುವ ಇಂಧನ ಬೆಲೆಗಳು, ನಗರದಲ್ಲಿನ ಸಂಚಾರ ಸ್ಥಿತಿ ಮತ್ತು ಪ್ರಯಾಣಿಕರ ಬೇಡಿಕೆಯಂತಹ ಅಂಶಗಳನ್ನು ಪರಿಗಣಿಸಿ ದರ ಪರಿಷ್ಕರಣೆಯನ್ನು ನಿರ್ಧರಿಸಲಾಗುತ್ತದೆ. ಶಿಫಾರಸಿನ ಆಧಾರದ ಮೇಲೆ, ಡಿಟಿಎ ಅಧ್ಯಕ್ಷರಾಗಿರುವ ಬೆಂಗಳೂರು ನಗರ ಉಪ ಆಯುಕ್ತರು ದರ ಪರಿಷ್ಕರಣೆಯ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ

ಬೆಂಗಳೂರು ನಗರ ಡಿಸಿ ಕಚೇರಿಯ ಮೂಲಗಳ ಪ್ರಕಾರ, ಪರಿಷ್ಕೃತ ದರಗಳು ರೂ 36 ಮತ್ತು ರೂ 18 ಆಗಿದ್ದು, ಬೆಂಗಳೂರು ನಗರ ಡಿಸಿ ಜಗದೀಶ ಜಿ ಅವರ ಅನುಮೋದನೆಗಾಗಿ ಕಾಯುತ್ತಿವೆ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತದ ತನಿಖೆಯ ಕಾರ್ಯವನ್ನು ಬೆಂಗಳೂರು ಡಿಸಿ ವಹಿಸಿದ್ದಾರೆ ಹಾಗೂ ಆ ಕೆಲಸದಲ್ಲಿ ಸಂಪೂರ್ಣವಾಗಿ ನಿರತರಾಗಿದ್ದಾರೆ, ಈಕೆಲಸಗಳು ಮುಗಿದ ನಂತರ, ದರಗಳನ್ನು ಅಧಿಕೃತವಾಗಿ ಘೋಷಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

Representational image
ಬಿಹಾರ ಮಹಿಳೆ ದರ್ಪ ಖಂಡಿಸಿ ಆಟೋ ಚಾಲಕರ ಖಂಡನೆ: ರಕ್ಷಣೆಗೆ ಕಾನೂನು ರೂಪಿಸುವಂತೆ ಆಗ್ರಹ

ಪರಿಷ್ಕೃತ ದರಗಳು ರೂ 40 ಮತ್ತು ರೂ 20 ಆಗದಿದ್ದರೆ ಹೋರಾಟ ನಡೆಸುವುದಾಗಿ ಆಟೋರಿಕ್ಷಾ ಚಾಲಕರ ಸಂಘ, ಆದರ್ಶ ಆಟೋ ಮತ್ತು ಟ್ಯಾಕ್ಸಿ ಚಾಲಕರ ಒಕ್ಕೂಟದಂತಹ ಆಟೋ ಒಕ್ಕೂಟಗಳು ತಿಳಿಸಿವೆ.

2021 ರಿಂದ ದರಗಳನ್ನು ಪರಿಷ್ಕರಿಸಲಾಗಿಲ್ಲ. ಈ ಎಲ್ಲಾ ವರ್ಷಗಳಲ್ಲಿ, ಅನೇಕ ವಸ್ತುಗಳ ಬೆಲೆಗಳು ಹೆಚ್ಚಿವೆ. ಆಟೋ ದರ ಪರಿಷ್ಕರಣೆಯನ್ನು ಸಗಟು ಬೆಲೆ ಸೂಚ್ಯಂಕಕ್ಕೆ ಲಿಂಕ್ ಮಾಡಬೇಕೆಂದು ನಾವು ಒತ್ತಾಯಿಸುತ್ತೇವೆ ಎಂದು ಎಆರ್‌ಡಿಯು ಪ್ರಧಾನ ಕಾರ್ಯದರ್ಶಿ ರುದ್ರಮೂರ್ತಿ ಹೇಳಿದರು.

ಆದರ್ಶ ಆಟೋ ಮತ್ತು ಟ್ಯಾಕ್ಸಿ ಚಾಲಕರ ಒಕ್ಕೂಟದ ಅಧ್ಯಕ್ಷ ಮಂಜುನಾಥ್ ಮಾತನಾಡಿ 1.85 ಲಕ್ಷ ರೂ. ಇದ್ದ ಹೊಸ ಆಟೋಗಳ ಬೆಲೆ ಈಗ 2.85 ಲಕ್ಷ ರೂ. ಆಗಿದೆ. ಸಿಂಗಲ್ ಬೆಡ್‌ರೂಮ್‌ನ ಬೆಲೆ 4,000 ರೂ.ಗಳಿಂದ 8,000 ರೂ.ಗಳಿಗೆ ದ್ವಿಗುಣಗೊಂಡಿದೆ. ಎಲ್ಲಾ ಅಗತ್ಯ ವಸ್ತುಗಳ ಬೆಲೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ, ಆದರೆ ಆಟೋ ದರಗಳು ಪರಿಷ್ಕರಣೆಯಿಲ್ಲದೆ ವರ್ಷಗಳಿಂದ ಹಾಗೆಯೇ ಉಳಿದಿವೆ" ಎಂದು ಅವರು ಪ್ರಶ್ನಿಸಿದರು. ಆಟೋ ಚಾಲಕರು ತಮ್ಮ ಕುಟುಂಬಗಳನ್ನು ಹೇಗೆ ನಡೆಸಬೇಕು ಎಂದು ಅವರು ಪ್ರಶ್ನಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com