ಜಾತಿ ಮರು ಸಮೀಕ್ಷೆ: ಸರ್ಕಾರದ ನಡೆ ಸ್ವಾಗತಿಸಿದ ಲಿಂಗಾಯತರು-ಒಕ್ಕಲಿಗರು

ಹಳೆಯ ವರದಿಯನ್ನು ರದ್ದುಗೊಳಿಸಿ ಹೊಸ ಸಮೀಕ್ಷೆಗೆ ಆದೇಶಿಸುವ ಕಾಂಗ್ರೆಸ್ ನಾಯಕತ್ವದ ನಿರ್ಧಾರವನ್ನು ಲಿಂಗಾಯಕರು ಹಾಗೂ ಒಕ್ಕಲಿಗ ನಾಯಕರು ಶ್ಲಾಘಿಸಿದ್ದಾರೆ.
File photo
ಸಂಗ್ರಹ ಚಿತ್ರ
Updated on

ಬೆಂಗಳೂರು: ಜಾತಿ ಮರು ಸಮೀಕ್ಷೆ ಕುರಿತ ರಾಜ್ಯ ಸರ್ಕಾರದ ನಿರ್ಧಾರವವನ್ನು ವೀರಶೈವ-ಲಿಂಗಾಯತರು ಮತ್ತು ಒಕ್ಕಲಿಗರು ಸ್ವಾಗತಿಸಿದ್ದಾರೆ.

ಹಳೆಯ ವರದಿಯನ್ನು ರದ್ದುಗೊಳಿಸಿ ಹೊಸ ಸಮೀಕ್ಷೆಗೆ ಆದೇಶಿಸುವ ಕಾಂಗ್ರೆಸ್ ನಾಯಕತ್ವದ ನಿರ್ಧಾರವನ್ನು ಲಿಂಗಾಯಕರು ಹಾಗೂ ಒಕ್ಕಲಿಗ ನಾಯಕರು ಶ್ಲಾಘಿಸಿದ್ದಾರೆ,

ಮೀಸಲಾತಿ ವಿಚಾರಕ್ಕೆ ನಮ್ಮ ವಿರೋಧವಿಲ್ಲ. ಆದರೆ, ವೈಜ್ಞಾನಿಕ ಅಧ್ಯಯನಕ್ಕೆ ಒತ್ತಾಯಿಸುತ್ತಿದ್ದೆವು ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಹೇಳಿದೆ.

ನಮ್ಮ ಮುಂದಿನ ನಡೆ ಕುರಿತು ಜೂನ್ 12 ಅಥವಾ 13 ರಂದು ಸಭೆ ನಡೆಸಲಾಗುವುದು ಎಂದು ಭಾರತ ವೀರಶೈವ ಮಹಾಸಭಾ ಕಾರ್ಯದರ್ಶಿ ರೇಣುಕಾ ಪ್ರಸನ್ನ ಅವರು ಹೇಳಿದ್ದಾರೆ.

ರಾಜ್ಯ ಒಕ್ಕಲಿಗರ ಮೀಸಲಾತಿ ಸಮಿತಿಯ ಜಿ.ಎನ್. ಶ್ರೀಕಂಠಯ್ಯ ಮತ್ತು ಇತರರು ಕೂಡ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ.

ಒಕ್ಕಲಿಗ ಕ್ರಿಯಾ ಸಮಿತಿ ಅಧ್ಯಕ್ಷ ಕೆ.ಜಿ. ಕುಮಾರ್ ಅವರು ಮಾತನಾಡಿ, ಕೊನೆಗೂ ಸಮುದಾಯಕ್ಕೆ ನ್ಯಾಯ ಸಿಕ್ಕಿಗೆ ಎಂದು ಹೇಳಿದರು.

ಇದು 10 ವರ್ಷಗಳ ಹೋರಾಟವಾಗಿತ್ತು. ನಮ್ಮ ಕಠಿಣ ಪರಿಶ್ರಮಕ್ಕೆ ಜಯ ಸಿಕ್ಕಿದೆ. "ನಾವು ವೈಜ್ಞಾನಿಕ ಮತ್ತು ಸಮಗ್ರವಾದ ಹೊಸ ಸಮೀಕ್ಷೆಯನ್ನು ಒತ್ತಾಯಿಸಿದ್ದೆವು. ಇಂದು, ಸಿಎಂ, ಡಿಸಿಎಂ ಮತ್ತು ಕಾಂಗ್ರೆಸ್ ಮಂತ್ರಿಗಳು ಮರು ಸಮೀಕ್ಷೆ ಕುರಿತು ಘೋ,ಣೆ ಮಾಡಿದ್ದಾರೆ. ನಮ್ಮೊಂದಿಗೆ ನಿಂತ ನಮ್ಮ ಎಲ್ಲಾ ನಾಯಕರಿಗೆ ಧನ್ಯವಾದ ಹೇಳುತ್ತೇನೆ. ಈ ನಿಟ್ಟಿನಲ್ಲಿ ಮುಂದಿನ ಬುಧವಾರ ಸಭೆ ನಡೆಸುತ್ತೇವೆ.. ನಮ್ಮ ಮಹಾನ್ ಕವಿ ಕುವೆಂಪು ಹೇಳಿದಂತೆ: 'ಸರ್ವರಿಗು ಸಮಪಾಲು' ಸಿಗಬೇಕು. ನಾವು ಬಯಸುತ್ತಿರುವದಷ್ಟೇ ಎಂದು ತಿಳಿಸಿದ್ದಾರೆ.

File photo
ಮರು ಜಾತಿ ಗಣತಿಗೆ ನಿರ್ಧಾರ: ಈಗಾಗಲೇ ಖರ್ಚು ಮಾಡಿರುವ 160 ಕೋಟಿ ರೂ ಹಣ ವ್ಯರ್ಥವೆಂದು ಒಪ್ಪಿಕೊಳ್ಳಲಿದೆಯೇ ರಾಜ್ಯ ಸರ್ಕಾರ?

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com