ಕೋಮು ಹಿಂಸಾಚಾರ ನಿಗ್ರಹಿಸುವ ವಿಶೇಷ ಕಾರ್ಯಪಡೆ ಕಚೇರಿ ಉದ್ಘಾಟಿಸಿದ ಗೃಹ ಸಚಿವ ಜಿ ಪರಮೇಶ್ವರ; Video

ಈ ಪ್ರದೇಶವು ಸಾಂಸ್ಕೃತಿಕವಾಗಿ ಶ್ರೀಮಂತವಾಗಿದ್ದು, ಸಾಕ್ಷರರು ಮತ್ತು ಶಾಂತಿಯುತ ಜನಸಂಖ್ಯೆಗೆ ನೆಲೆಯಾಗಿದ್ದರೂ, ಇತ್ತೀಚಿನ ದಿನಗಳಲ್ಲಿ ಇದು 'ದ್ವೇಷ ಮತ್ತು ಕೋಮು ಧ್ರುವೀಕರಣದ ವಾತಾವರಣ'ದಿಂದ ಬಳಲುತ್ತಿದೆ ಎಂದರು.
Home Minister G Parameshwara inaugurated the "Special Action Force" (SAF) at Mangaluru on Friday
ಗೃಹ ಸಚಿವ ಜಿ ಪರಮೇಶ್ವರ ಅವರು ಶುಕ್ರವಾರ ಮಂಗಳೂರಿನಲ್ಲಿ "ವಿಶೇಷ ಕ್ರಿಯಾ ಪಡೆ" (SAF) ಅನ್ನು ಉದ್ಘಾಟಿಸಿದರು.
Updated on

ಮಂಗಳೂರು: ರಾಜ್ಯದ ಕರಾವಳಿ ಪ್ರದೇಶದಲ್ಲಿ ಕೋಮು ಹಿಂಸಾಚಾರವನ್ನು ನಿಗ್ರಹಿಸುವ ಮತ್ತು ಸಾರ್ವಜನಿಕ ಸುವ್ಯವಸ್ಥೆಯನ್ನು ಕಾಪಾಡುವ ಗುರಿಯನ್ನು ಹೊಂದಿರುವ ವಿಶೇಷ ಕಾರ್ಯಪಡೆ (ಎಸ್‌ಎಎಫ್) ಕಚೇರಿಯನ್ನು ಗೃಹ ಸಚಿವ ಜಿ ಪರಮೇಶ್ವರ ಶುಕ್ರವಾರ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಪರಮೇಶ್ವರ, ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಉದ್ವಿಗ್ನತೆಗೆ ಕಾರಣವಾದ ಇತ್ತೀಚಿನ ಕೊಲೆ ಸೇರಿದಂತೆ ಜಿಲ್ಲೆಯಲ್ಲಿ ಪದೇ ಪದೆ ನಡೆಯುತ್ತಿರುವ ಹಿಂಸಾಚಾರದ ಘಟನೆಗಳಿಂದಾಗಿ ಎಸ್‌ಎಎಫ್ ಅನ್ನು ಸ್ಥಾಪಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.

ಈ ಪ್ರದೇಶವು ಸಾಂಸ್ಕೃತಿಕವಾಗಿ ಶ್ರೀಮಂತವಾಗಿದ್ದು, ಸಾಕ್ಷರರು ಮತ್ತು ಶಾಂತಿಯುತ ಜನಸಂಖ್ಯೆಗೆ ನೆಲೆಯಾಗಿದ್ದರೂ, ಇತ್ತೀಚಿನ ದಿನಗಳಲ್ಲಿ ಇದು 'ದ್ವೇಷ ಮತ್ತು ಕೋಮು ಧ್ರುವೀಕರಣದ ವಾತಾವರಣ'ದಿಂದ ಬಳಲುತ್ತಿದೆ ಎಂದರು.

'ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಸರ್ಕಾರದ SAF ಅನ್ನು ರಚನೆ ಮಾಡಿದೆ. ಇದು ಕೋಮು ಭಾಷಣ, ಕೋಮು ಸಂಘರ್ಷ ಸೃಷ್ಟಿಸುವವರನ್ನು ಹತ್ತಿಕ್ಕುವ ದಿಸೆಯಲ್ಲಿ ಈ ಕಾರ್ಯಪಡೆ ಕೆಲಸ ಮಾಡಲಿದೆ. ಸ್ಥಳೀಯ ಪೊಲೀಸ್ ಅಧಿಕಾರಿಗಳು ಮತ್ತು ಮಾಜಿ ಆಯುಕ್ತ ಕುಲದೀಪ್ ಕುಮಾರ್ ಜೈನ್ ಅವರ ಸಲಹೆಗಳನ್ನು ಅನುಸರಿಸಿ, ಪ್ರಸ್ತಾವನೆಯ ಒಂದು ವಾರದೊಳಗೆ ಪಡೆ ರಚಿಸಲಾಗಿದೆ' ಎಂದು ಹೇಳಿದರು.

ಇಲ್ಲಿನ ನಿವಾಸಿಗಳು ಶಾಂತಿ ಕಾಪಾಡುವಂತೆ ಸಚಿವರು ಒತ್ತಾಯಿಸಿದರು. ಜನರು ಶಾಂತವಾಗಿದ್ದರೆ, ಈ ಪಡೆ ನಿಷ್ಕ್ರಿಯವಾಗಿರುತ್ತದೆ. ಆದರೆ, ಅವರು ಹಾಗೆ ಮಾಡದಿದ್ದರೆ, ಅದು ಕಾರ್ಯನಿರ್ವಹಿಸಬೇಕಾಗುತ್ತದೆ' ಎಂದು ಅವರು ಹೇಳಿದರು.

ನಕ್ಸಲ್ ವಿರೋಧಿ ಘಟಕಗಳಿಂದ ಸಿಬ್ಬಂದಿಯನ್ನು ಎಸ್‌ಎಎಫ್ ರಚಿಸಲು ಮರು ನಿಯೋಜಿಸಲಾಗಿದ್ದು, ಅಗತ್ಯವಿದ್ದರೆ ಉಡುಪಿ ಮತ್ತು ಶಿವಮೊಗ್ಗದಂತಹ ಇತರ ಸೂಕ್ಷ್ಮ ಜಿಲ್ಲೆಗಳಿಗೆ ವಿಸ್ತರಿಸಲಾಗುವುದು ಎಂದು ಪರಮೇಶ್ವರ ಸ್ಪಷ್ಟಪಡಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಎಸ್‌ಎಎಫ್ ರಚನೆಯು ದ್ವೇಷ ಮತ್ತು ಹಿಂಸಾಚಾರದ ಮೂಲ ಕಾರಣಗಳನ್ನು ಪರಿಹರಿಸಲು ರಾಜ್ಯ ಸರ್ಕಾರ ತೆಗೆದುಕೊಂಡ ನಿರ್ಣಾಯಕ ಹೆಜ್ಜೆಯಾಗಿದೆ. ಪ್ರಗತಿಪರವಾಗಿರುವ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಏಕೈಕ ಕರಾಳ ವಿಚಾರವೆಂದರೆ ಕೋಮು ಉದ್ವಿಗ್ನತೆ. ಈ ಸಮಯದಲ್ಲಿ ಇದನ್ನು ತೊಡೆದಾಕುವ ಅಗತ್ಯವಿದೆ ಎಂದು ಹೇಳಿದರು.

SAF ರಾಜಕೀಯ ಪ್ರೇರಿತವಾಗಿಲ್ಲ ಮತ್ತು ಸಾಮರಸ್ಯವನ್ನು ಕಾಪಾಡುವ ಗುರಿಯನ್ನು ಹೊಂದಿದೆ. ಮುಂದಿನ ದಿನಗಳಲ್ಲಿ ಎಲ್ಲ ಸಮುದಾಯಗಳ ಪ್ರತಿನಿಧಿಗಳೊಂದಿಗೆ ಶಾಂತಿ ಸಭೆಗಳನ್ನು ನಡೆಸುವ ಯೋಜನೆಗಳು ನಡೆಯುತ್ತಿವೆ ಎಂದು ರಾವ್ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com