ಉತ್ತರ ಕನ್ನಡ: ದೇವಿಮನೆ ಘಟ್ಟದಲ್ಲಿ ಮತ್ತೆ ಗುಡ್ಡ ಕುಸಿತ; ವಾಹನ ಸಂಚಾರ ಸಂಪೂರ್ಣ ಬಂದ್

ಕಳೆದ ಎರಡು ದಿನದಿಂದ ಶಿರಸಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 766 (ಇ) ನಲ್ಲಿ ಗುಡ್ಡ ಕುಸಿತವಾಗುತಿತ್ತು. ಕುಸಿದ ಗುಡ್ಡದ ಮಣ್ಣು ತೆಗೆದು ಶನಿವಾರ ರಾತ್ರಿ ಲಘು ವಾಹನ ಸಂಚಾರಕ್ಕೆ ಬಿಡಲಾಗಿತ್ತು.
Hill collapse
ಗುಡ್ಡ ಕುಸಿತ
Updated on

ಕಾರವಾರ: ನಿರಂತರ ಮಳೆ ಪರಿಣಾಮ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ದೇವಿಮನೆ ಘಟ್ಟದಲ್ಲಿ ಗುಡ್ಡ ಕುಸಿತ ಉಂಟಾಗಿದ್ದು, ವಾಹನ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿದೆ.

ಕಳೆದ ಎರಡು ದಿನದಿಂದ ಶಿರಸಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 766 (ಇ) ನಲ್ಲಿ ಗುಡ್ಡ ಕುಸಿತವಾಗುತಿತ್ತು. ಕುಸಿದ ಗುಡ್ಡದ ಮಣ್ಣು ತೆಗೆದು ಶನಿವಾರ ರಾತ್ರಿ ಲಘು ವಾಹನ ಸಂಚಾರಕ್ಕೆ ಬಿಡಲಾಗಿತ್ತು.

ಇಂದು ಮತ್ತೆ ಕುಸಿದ ಜಾಗದಲ್ಲೇ ದೊಡ್ಡ ಪ್ರಮಾಣದಲ್ಲಿ ಗುಡ್ಡ ಕುಸಿದು ಬಿದ್ದಿದ್ದು, ಹೆದ್ದಾರಿ ಮೇಲೆ ಕಲ್ಲು, ಮರಗಳು ಬಿದ್ದಿವೆ. ಈ ಹಿನ್ನೆಲೆ ಕುಮಟಾ-ಶಿರಸಿಯ ಹೆದ್ದಾರಿ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ.

Hill collapse
ಆಗುಂಬೆ ಘಾಟ್ ನಲ್ಲಿ ನಾಳೆಯಿಂದ ಮೂರುವರೆ ತಿಂಗಳು ಭಾರೀ ವಾಹನ ಸಂಚಾರಕ್ಕೆ ನಿಷೇಧ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com