Aishwarya Gowda gold cheating case: ಜೂನ್ 23ರಂದು ED ವಿಚಾರಣೆಗೆ ಹಾಜರಾಗುವೆ- ಡಿ.ಕೆ ಸುರೇಶ್‌

ಜೂನ್‌ 19ಕ್ಕೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಆದರೆ, ಅಂದು ಪೂರ್ವನಿಯೋಜಿತ ಕಾರ್ಯಕ್ರಮ ಇರುವುದರಿಂದ ಬರುವ ಸೋಮವಾರ (ಜೂನ್‌ 23) ಹಾಜರಾಗುವುದಾಗಿ ಹೇಳಿದ್ದೇನೆ.
Former MP DK Suresh
ಮಾಜಿ ಸಂಸದ ಡಿ.ಕೆ. ಸುರೇಶ್‌
Updated on

ಬೆಂಗಳೂರು: ಐಶ್ವರ್ಯ ಗೌಡ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ)ದಿಂದ ಸಮನ್ಸ್‌ ಜಾರಿಯಾಗಿರುವುದು ನಿಜ. ಅದರಂತೆ ಜೂನ್ 23ರಂದು ವಿಚಾರಣೆಗೆ ಹಾಜರಾಗುತ್ತೇನೆ ಎಂದು ಮಾಜಿ ಸಂಸದ ಡಿ.ಕೆ. ಸುರೇಶ್‌ ಅವರು ಮಂಗಳವಾರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಧ್ಯಾಹ್ನವಷ್ಟೇ ಇಡಿ ಸಮನ್ಸ್‌ ಜಾರಿ ಮಾಡಿದೆ. ಅಧಿಕಾರಿಗಳು ಮನೆಗೆ ಬಂದು ಸಮನ್ಸ್‌ ನೀಡಿದಾಗ, ನಾನು ಮನೆಯಲ್ಲಿ ಇರಲಿಲ್ಲ. ಅನಂತರ ಮನೆಗೆ ಬಂದು ಭೇಟಿಯಾಗಿ, ಯಾವ ವಿಚಾರವಾಗಿ ಸಮನ್ಸ್‌ ಎಂದು ನೋಡಿದಾಗ ಐಶ್ವರ್ಯಗೌಡ ಕೇಸ್‌ ಎಂಬುದು ಗೊತ್ತಾಯಿತು ಎಂದು ಹೇಳಿದರು.

ಜೂನ್‌ 19ಕ್ಕೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಆದರೆ, ಅಂದು ಪೂರ್ವನಿಯೋಜಿತ ಕಾರ್ಯಕ್ರಮ ಇರುವುದರಿಂದ ಬರುವ ಸೋಮವಾರ (ಜೂನ್‌ 23) ಹಾಜರಾಗುವುದಾಗಿ ಹೇಳಿದ್ದೇನೆ. ಈಗ ಮೌಖಿಕವಾಗಿ ತಿಳಿಸಿದ್ದೇನೆ. ನಂತರ ಮೇಲ್ ಮೂಲಕ ಅಧಿಕೃತವಾಗಿ ತಿಳಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ಆರೋಪ ಕುರಿತು ಪ್ರತಿಕ್ರಿಯಿಸಿದ ಅವರು, ನಾನು ಯಾವುದೇ ಅಕೌಂಟ್ ಟ್ರಾನ್ಸಾಕ್ಷನ್ ನಡೆಸಿರಲಿಲ್ಲ. ಅವರು ನಮ್ಮ ಕ್ಷೇತ್ರದವರು. ಒಂದೆರಡು ಕಾರ್ಯಕ್ರಮಕ್ಕೆ ಹೋಗಿದ್ದೆ. ನನ್ನ ತಂಗಿ ಎನ್ನುವ ಹೆಸರಲ್ಲಿ ಹೀಗೆಲ್ಲ ಮಾಡಿದ್ದಾರೆಂಬುದು ತಿಳಿದ ಕೂಡಲೇ ಸ್ವತಃ ನಾನೇ ದೂರು ಕೊಟ್ಟಿದ್ದೇನೆ. ಇಡಿಯವರು 7 ರಿಂದ 8 ದಾಖಲೆಗಳನ್ನು ಕೇಳಿದ್ದಾರೆ. ನನ್ನ ಬಳಿ ದಾಖಲೆ ಕೇಳಿದ್ದು ಅಸಂಬದ್ಧ. ಅದನ್ನ ಹೋದಾಗ ಅಲ್ಲಿ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.

Former MP DK Suresh
ಐಶ್ವರ್ಯಾ ಗೌಡ ಚಿನ್ನಾಭರಣ ವಂಚನೆ ಕೇಸ್: ಮಾಜಿ ಸಂಸದ ಡಿಕೆ ಸುರೇಶ್ ಗೆ ED ಸಮನ್ಸ್

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com