
ಧಾರವಾಡ: ಆಟವಾಡುತ್ತಿದ್ದಾಗ ಕಾಲು ಜಾರಿ ಕೆರೆಗೆ ಬಿದ್ದು ಅವಳಿಮಕ್ಕಳಿಬ್ಬರು ನೀರು ಪಾಲಾಗಿರುವ ಹೃದಯವಿದ್ರಾವಕ ಘಟನೆ ಧಾರವಾಡದ ಕುಂದಗೋಳ ತಾಲೂಕಿನ ಯರಿ ನಾರಾಯಣಪುರ ಗ್ರಾಮದಲ್ಲಿ ನಡೆದಿದೆ. ಮೃತ ಮಕ್ಕಳನ್ನು ಮೂರು ವರ್ಷದ ಮುದಸ್ಸಿರ್ ಮತ್ತು ಮುಜಮ್ಮಿಲ್ ಎಂದು ಗುರುತಿಸಲಾಗಿದೆ. ಮನೆಯ ಪಕ್ಕದಲ್ಲೇ ಕೆರೆ ಇದ್ದು ಆಟವಾಡುತ್ತಿದ್ದಾಗ ಮಕ್ಕಳು ಆಯಾತಪ್ಪಿ ಕೆರೆ ಬಿದ್ದಿದ್ದಾರೆ. ಇನ್ನು ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಕುಂದಗೋಳ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Advertisement