ಕೌಟುಂಬಿಕ ಕಲಹ ಹಿನ್ನೆಲೆ, ಹಸುವಿನ ಕೆಚ್ಚಲು ಕೊಚ್ಚಿ ವಿಕೃತಿ: ಜಮೀನಿನಲ್ಲಿ ನರಳಿ-ನರಳಿ ಪ್ರಾಣ ಬಿಟ್ಟ ಹಸು!

ಹಸುವಿನ ಮಾಲೀಕ ಮರಿ ಬಸವಯ್ಯ ನೀಡಿದ ದೂರಿನ ಆಧಾರದ ಮೇಲೆ, ಆರೋಪಿ ಗುರುಸಿದ್ದಪ್ಪ ವಿರುದ್ಧ ಪ್ರಾಣಿ ಹಿಂಸೆ ತಡೆ ಕಾಯ್ದೆ ಮತ್ತು ಬಿಎನ್‌ಎಸ್‌ನ ಇತರ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Representational image
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಎರಡು ಕುಟುಂಬಗಳ ನಡುವಿನ ಜಗಳದಿಂದಾಗಿ ಹಸುವಿನ ಕೆಚ್ಚಲು ಕತ್ತರಿಸಿದ ಘಟನೆ ದಕ್ಷಿಣ ಬೆಂಗಳೂರು ಜಿಲ್ಲೆಯ (ರಾಮನಗರ) ಸುಳಿವರ ಗ್ರಾಮದಲ್ಲಿ ನಡೆದಿದೆ.

ಹಸುವಿನ ಮಾಲೀಕ ಮರಿ ಬಸವಯ್ಯ ನೀಡಿದ ದೂರಿನ ಆಧಾರದ ಮೇಲೆ, ಆರೋಪಿ ಗುರುಸಿದ್ದಪ್ಪ ವಿರುದ್ಧ ಪ್ರಾಣಿ ಹಿಂಸೆ ತಡೆ ಕಾಯ್ದೆ ಮತ್ತು ಬಿಎನ್‌ಎಸ್‌ನ ಇತರ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಾವರೆಕೆರೆ ನ್ಯಾಯವ್ಯಾಪ್ತಿಯ ಪೊಲೀಸರು ತಿಳಿಸಿದ್ದಾರೆ.

ಗುರುಸಿದ್ದಪ್ಪ ಹಸುವಿನ ಕೆಚ್ಚಲು ಕತ್ತರಿಸಿದ ಶಂಕೆ ವ್ಯಕ್ತವಾಗಿದೆ. ರಕ್ತಸ್ರಾವವಾಗುತ್ತಿರುವ ಹಸುವನ್ನು ಗಮನಿಸಿದ ದಾರಿಹೋಕರು ಅದರ ಮಾಲೀಕರು ಮತ್ತು ಪಶುವೈದ್ಯರಿಗೆ ಮಾಹಿತಿ ನೀಡಿದರು. ಚಿಕಿತ್ಸೆಯ ಹೊರತಾಗಿಯೂ, ಶುಕ್ರವಾರ ಮಧ್ಯಾಹ್ನ ಹಸು ಸಾವನ್ನಪ್ಪಿದೆ. ಶವಪರೀಕ್ಷೆ ವರದಿಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಎರಡು ಹಸುಗಳ ನಡುವಿನ ಜಗಳ ಗಾಯಕ್ಕೆ ಕಾರಣವಾಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಶವಪರೀಕ್ಷೆ ವರದಿ ಬಂದ ನಂತರ ಸಾವಿಗೆ ನಿಖರವಾದ ಕಾರಣ ತಿಳಿಯಲಿದೆ. ತನ್ನ ಹೊಲಕ್ಕೆ ಪ್ರವೇಶಿಸಿದ ನಂತರ ಗುರುಸಿದ್ದಪ್ಪ ಹಸುವಿನ ಕೆಚ್ಚಲು ಕತ್ತರಿಸಿದ್ದಾನೆ ಎಂದು ದೂರಿನಲ್ಲಿ ಆರೋಪಿಲಾಗಿದೆ. ಜನವರಿಯಲ್ಲಿ, ನಗರದ ಕಾಟನ್‌ಪೇಟ್ ಪೊಲೀಸ್ ವ್ಯಾಪ್ತಿಯ ವಿನಾಯಕ ನಗರದಲ್ಲಿ ಬಿಹಾರದ ವ್ಯಕ್ತಿಯೊಬ್ಬ ಮೂರು ಹಸುಗಳ ಕೆಚ್ಚಲಿಗೆ ಗಾಯಗೊಳಿಸಿದ್ದರು.

Representational image
ಹಸುಗಳ ಕೆಚ್ಚಲು ಕೊಯ್ದ ಘಟನೆ: ಮಾಲೀಕರಿಗೆ ಮೂರು ಹಸುಗಳನ್ನು ಉಡುಗೊರೆಯಾಗಿ ನೀಡಿದ ಸಚಿವ ಜಮೀರ್ ಅಹ್ಮದ್ ಖಾನ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com