ಯುಗಾದಿಗೂ ಮುನ್ನ ಶಾಕ್: ಹೋಳಿಗೆ ತಯಾರಿಕೆಯಲ್ಲಿ ಪ್ಲಾಸ್ಟಿಕ್ ಕವರ್ ಬಳಕೆಗೆ FDA ನಿಷೇಧ; ಕಲಬೆರಕೆ ಬೆಲ್ಲ ಪತ್ತೆ!

ಹಿಂದೂಗಳ ಪವಿತ್ರ ಹಬ್ಬ ಯುಗಾದಿ ಸಮೀಪಿಸುತ್ತಿದೆ. ಇದರ ಮಧ್ಯೆ ಹಬ್ಬದ ನೆಚ್ಚಿನ ಹೋಳಿಗೆಯನ್ನು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ (ಎಫ್‌ಡಿಎ) ತಯಾರಿಕೆ ಮತ್ತು ಪ್ಯಾಕೇಜಿಂಗ್‌ನಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಿದೆ.
ಯುಗಾದಿಗೂ ಮುನ್ನ ಶಾಕ್: ಹೋಳಿಗೆ ತಯಾರಿಕೆಯಲ್ಲಿ ಪ್ಲಾಸ್ಟಿಕ್ ಕವರ್ ಬಳಕೆಗೆ FDA ನಿಷೇಧ; ಕಲಬೆರಕೆ ಬೆಲ್ಲ ಪತ್ತೆ!
TNIE
Updated on

ಬೆಂಗಳೂರು: ಹಿಂದೂಗಳ ಪವಿತ್ರ ಹಬ್ಬ ಯುಗಾದಿ ಸಮೀಪಿಸುತ್ತಿದೆ. ಇದರ ಮಧ್ಯೆ ಹಬ್ಬದ ನೆಚ್ಚಿನ ಹೋಳಿಗೆಯನ್ನು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ (ಎಫ್‌ಡಿಎ) ತಯಾರಿಕೆ ಮತ್ತು ಪ್ಯಾಕೇಜಿಂಗ್‌ನಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಿದ್ದು ನಂತರ ಪರಿಶೀಲನೆಗೆ ಒಳಪಡಿಸಿದೆ.

ಹೋಟೆಲ್ ಗಳಲ್ಲಿ ಇಡ್ಲಿಗಳನ್ನು ತಯಾರಿಸಲು ಪ್ಲಾಸ್ಟಿಕ್ ಹಾಳೆಗಳನ್ನು ನಿಷೇಧಿಸಿದ ನಂತರ, ಆಹಾರ ಸಂಸ್ಕರಣೆಯಿಂದ ಪ್ಲಾಸ್ಟಿಕ್ ಅನ್ನು ತೆಗೆದುಹಾಕಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಬೆಂಗಳೂರು, ಮೈಸೂರು ಮತ್ತು ರಾಜ್ಯದ ಇತರ ಭಾಗಗಳಲ್ಲಿ ಹೋಳಿಗೆ ತಯಾರಿಸಲು ಮತ್ತು ಸುತ್ತಲು ಪ್ಲಾಸ್ಟಿಕ್ ಕವರ್ ಬಳಸುತ್ತಿದ್ದ ಹಲವಾರು ಅಂಗಡಿಗಳಿಗೆ ಈಗಾಗಲೇ ಸುಧಾರಣಾ ಸೂಚನೆಗಳನ್ನು ನೀಡಲಾಗಿದೆ ಎಂದು ಅಧಿಕಾರಿಗಳು TNIEಗೆ ತಿಳಿಸಿದರು.

ಸಾಂಪ್ರದಾಯಿಕ ಸಿಹಿತಿಂಡಿಗಳಲ್ಲಿ ಮತ್ತೊಂದು ಪ್ರಮುಖ ಅಂಶವಾಗಿರುವ ಮತ್ತು ಹೋಳಿಗೆ ಮಾಡಲು ಬಳಸುವ ಬೆಲ್ಲದ ಕಲಬೆರಕೆ ಮಾದರಿಗಳನ್ನು ಪತ್ತೆಹಚ್ಚಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕೆಲವು ಬೆಲ್ಲದ ಮಾದರಿಗಳಲ್ಲಿ ಪರಿಮಾಣವನ್ನು ಹೆಚ್ಚಿಸಲು 'ವಾಷಿಂಗ್ ಸೋಡಾ ಅಥವಾ ಸೀಮೆಸುಣ್ಣದ ಪುಡಿ' ಇತ್ತು ಮತ್ತು ಚಿನ್ನದ-ಹಳದಿ ಬಣ್ಣವನ್ನು ನೀಡಲು 'ಮೆಟಾನಿಲ್ ಹಳದಿ' ನಂತಹ ವಸ್ತುಗಳನ್ನು ಸೇರಿಸಲಾಗುತ್ತಿದೆ. ಹೋಳಿಗೆ ಮತ್ತು ಇತರ ಕೆಲವು ಆಹಾರ ಪದಾರ್ಥಗಳಿಗೆ ಸಂಬಂಧಿಸಿದ ತಪಾಸಣೆಗಳು ಇದೀಗ ಪ್ರಾರಂಭವಾಗಿವೆ. ವಿವರವಾದ ಮಾದರಿ ಸಂಗ್ರಹ ಮುಂದುವರೆದಿದೆ ಎಂದು ಅಧಿಕಾರಿ ತಿಳಿಸಿದರು.

ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಹೆಚ್ಚಿನ ಅಂಗಡಿಗಳು ಏಕ-ಬಳಕೆಯ ಪ್ಲಾಸ್ಟಿಕ್ ಕವರ್ ಗಳನ್ನು ಬಳಸುತ್ತಿವೆ. ವಿಶೇಷವಾಗಿ ಹಾಲು ಮತ್ತು ಎಣ್ಣೆಗಳನ್ನು ಪ್ಯಾಕೇಜಿಂಗ್ ಮಾಡಲು ಸಾಮಾನ್ಯವಾಗಿ ಬಳಸುವ ಕವರ್ ಗಳ ಮೇಲೆ ಹೋಳಿಗೆಯನ್ನು ಮಾಡುತ್ತಾರೆ. ಬಿಸಿ ಪ್ಯಾನ್‌ಗಳು ಅಥವಾ ತವಾಗಳ ಮೇಲೆ ಹೋಳಿಕೆಯನ್ನು ಹಾಕಿ ಅದು ಒಂದು ಕಡೆ ಬೇಯುವವರೆಗೂ ಪ್ಲಾಸ್ಟಿಕ್ ಕವರನ್ ಅನ್ನು ಅದರ ಮೇಲೆ ಇಟ್ಟಿರುತ್ತಾರೆ. ನಂತರ ತಕ್ಷಣವೇ ಹೋಳಿಗೆಯನ್ನು ಏಕ-ಬಳಕೆಯ ಪ್ಲಾಸ್ಟಿಕ್ ಅಥವಾ ಪಾಲಿಥಿನ್ ಕವರ್ ಗಳಿಂದ ಮುಚ್ಚುತ್ತಾರೆ. ಇದು ಹೋಳಿಗೆಗಳು ಒಂದಕ್ಕೊಂದು ಅಂಟಿಕೊಳ್ಳದಂತೆ ತಡೆಯುತ್ತದೆ. ಇದು ಹಾನಿಕಾರಕ ಅಭ್ಯಾಸವಾಗಿದೆ ಎಂದು ಅಧಿಕಾರಿ ಹೇಳಿದರು.

ಯುಗಾದಿಗೂ ಮುನ್ನ ಶಾಕ್: ಹೋಳಿಗೆ ತಯಾರಿಕೆಯಲ್ಲಿ ಪ್ಲಾಸ್ಟಿಕ್ ಕವರ್ ಬಳಕೆಗೆ FDA ನಿಷೇಧ; ಕಲಬೆರಕೆ ಬೆಲ್ಲ ಪತ್ತೆ!
ಇಡ್ಲಿ ತಯಾರಿಕೆಗೆ ಪ್ಲ್ಯಾಸ್ಟಿಕ್ ಶೀಟ್ ಬಳಕೆ: ನಗರದ ಜನಪ್ರಿಯ ಹೋಟೆಲ್ ಗಳಲ್ಲಿ ಬೇಡಿಕೆ ಕುಸಿತ..!

ಏಕ-ಬಳಕೆಯ ಪ್ಲಾಸ್ಟಿಕ್ ಅನ್ನು ಬಿಸಿ ಮಾಡಿದಾಗ, ವಿಶೇಷವಾಗಿ ಬಿಸಿ ಪ್ಯಾನ್ ಅಥವಾ ತವಾದಲ್ಲಿ, ಅದು ಕರಗಲು ಪ್ರಾರಂಭಿಸುತ್ತದೆ. ಆಹಾರಕ್ಕೆ ವಿಷಕಾರಿ ರಾಸಾಯನಿಕಗಳನ್ನು ಬಿಡುಗಡೆ ಮಾಡುತ್ತದೆ. ಈ ಪ್ಲಾಸ್ಟಿಕ್‌ಗಳು ಥಾಲೇಟ್‌ಗಳು, ಬಿಸ್ಫೆನಾಲ್‌ಗಳು ಮತ್ತು ಡಯಾಕ್ಸಿನ್‌ಗಳಂತಹ ಹಾನಿಕಾರಕ ವಸ್ತುಗಳನ್ನು ಹೊಂದಿರುತ್ತವೆ. ಅವು ಶಾಖಕ್ಕೆ ಒಡ್ಡಿಕೊಂಡಾಗ ಆಹಾರಕ್ಕೆ ಸೋರಿಕೆಯಾಗುತ್ತವೆ. ಅಂತಹ ರಾಸಾಯನಿಕಗಳು ದೇಹದೊಳಗೆ ಹೋದರೆ ಅವು ದೇಹದಲ್ಲಿನ ಹಾರ್ಮೋನುಗಳೊಂದಿಗೆ ಸಂಘರ್ಷಕ್ಕಿಳಿಯುತ್ತವೆ. ಈ ವಸ್ತುಗಳಿಗೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದರಿಂದ ಹಾರ್ಮೋನುಗಳ ಅಸಮತೋಲನ, ಸಂತಾನೋತ್ಪತ್ತಿ ಸಮಸ್ಯೆಗಳು, ಚಯಾಪಚಯ ಅಸ್ವಸ್ಥತೆಗಳು ಮತ್ತು ಕ್ಯಾನ್ಸರ್ ಅಪಾಯ ಹೆಚ್ಚಾಗುವಂತಹ ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿದೆ ಎಂದು FDA ಅಧಿಕಾರಿ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com