ಬೆಂಗಳೂರು: ಮದುವೆ ಮಂಟಪದಿಂದ ವರ ಪರಾರಿ; ಪೋಷಕರ ವಿರುದ್ಧ ವರದಕ್ಷಿಣೆ ಬೇಡಿಕೆ ಕೇಸ್!

ಮದುವೆ ಸಮಾರಂಭದ ಹಿಂದಿನ ರಾತ್ರಿ ವರನ ಪೋಷಕರು ವರದಕ್ಷಿಣೆ ಕೇಳಿದ್ದರು, ಆದರೆ ವಧುವಿನ ತಂದೆ ನಿರಾಕರಿಸಿದ ನಂತರ ಮದ್ಯರಾತ್ರಿ ಹೊರಟುಹೋದರು ಎಂದು ವರದಿಯಾಗಿದೆ.
representational image
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ವಧುವಿನ ಪೋಷಕರು ವರದಕ್ಷಿಣೆ ಕೊಡಲು ನಿರಾಕರಿಸಿದ್ದರಿಂದ ಕೋಪಗೊಂಡ ವರ ಮತ್ತು ಆತನ ಪೋಷಕರು ಕಲ್ಯಾಣ ಮಂಟಪದಿಂದ ಪರಾರಿಯಾಗಿದ್ದು, ಅವರ ವಿರುದ್ಧ ಉಪ್ಪಾರಪೇಟೆ ಠಾಣೆಯಲ್ಲಿ ದೂರು ದಾಖಲಾಗಿದೆ.

ಮದುವೆ ಸಮಾರಂಭದ ಹಿಂದಿನ ರಾತ್ರಿ ವರನ ಪೋಷಕರು ವರದಕ್ಷಿಣೆ ಕೇಳಿದ್ದರು, ಆದರೆ ವಧುವಿನ ತಂದೆ ನಿರಾಕರಿಸಿದ ನಂತರ ಮದ್ಯರಾತ್ರಿ ಹೊರಟುಹೋದರು ಎಂದು ವರದಿಯಾಗಿದೆ.

ಜುಲೈ 13,2024 ರಂದು ಗಾಂಧಿನಗರದ ಕ್ಲಬ್‌ನಲ್ಲಿ ನಿಶ್ಚಿತಾರ್ಥ ನಡೆದಿತ್ತು. ಭಾನುವಾರ ಅದೇ ಕ್ಲಬ್ ನಲ್ಲಿ ಮದುವೆ ನಡೆಯಬೇಕಿತ್ತು. ಯಲಹಂಕ ಬಳಿ ವಾಸಿಸುವ ವಧುವಿನ 61 ವರ್ಷದ ತಂದೆ ಶನಿವಾರ ಉಪ್ಪಾರಪೇಟೆ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ವಂಚನೆ ಪ್ರಕರಣ ದಾಖಲಿಸಿದ್ದಾರೆ. ವರ ಮತ್ತು ವಧು ಇಬ್ಬರೂ ತಮ್ಮ ಶಾಲಾ ದಿನಗಳಿಂದಲೂ ಪರಸ್ಪರ ಪರಿಚಿತರು. ವರನ ಕುಟುಂಬ ಆನೇಕಲ್ ಬಳಿ ವಾಸಿಸುತ್ತಿದೆ.

ಯುರೋಪ್‌ನಲ್ಲಿ ಕೆಲಸ ಮಾಡುವ ದೂರುದಾರರ ಹಿರಿಯ ಮಗಳು ಫ್ರಾನ್ಸ್ ನಲ್ಲಿ ಕೆಲಸ ಮಾಡುವ ತನ್ನ ಗೆಳೆಯನೊಂದಿಗೆ ಮದುವೆಯಾಗಬೇಕಿತ್ತು. ದೂರುದಾರರು ಫೆಬ್ರವರಿ 28 ರಿಂದ ಮೂರು ದಿನಗಳವರೆಗೆ ಸ್ಥಳವನ್ನು ಕಾಯ್ದಿರಿಸಿದ್ದರು. ಉತ್ತರ ಭಾರತೀಯ ಸಂಪ್ರದಾಯದಂತೆ ಫೆಬ್ರವರಿ 28 ರಂದು ಸಂಗೀತ ಕಾರ್ಯಕ್ರಮ ನಡೆದಿದ್ದು, ಮಾರ್ಚ್ 1 ರಂದು ಹಳದಿ ಶಾಸ್ತ್ರ ಮತ್ತು ಮೆಹೆಂದಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com