
ಬೆಂಗಳೂರು: ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ನಾರಿಯರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲಾ ಮಹಿಳೆಯರಿಗೂ ಶನಿವಾರ ಶುಭಾಶಯಗಳನ್ನು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಅವಕಾಶ ದೊರೆತರೆ ಹೆಣ್ಣು ಏನೆಲ್ಲಾ ಸಾಧಿಸಬಲ್ಲಳು ಎಂಬುದು ಇಂದು ನಮ್ಮ ಕಣ್ಣ ಮುಂದಿದೆ. ದೌರ್ಜನ್ಯ, ಅಸಮಾನತೆಗಳ ವಿರುದ್ಧದ ಮಹಿಳೆಯರ ದನಿಗೆ ನಾವು-ನೀವೆಲ್ಲರೂ ದನಿಗೂಡಿಸೋಣ ಎಂದು ಹೇಳಿದ್ದಾರೆ.
ಹೆಣ್ಣೆಂದರೆ ಸಹನೆ, ಸಹಿಷ್ಣುತೆ, ಪ್ರೀತಿ, ತ್ಯಾಗ, ಮಮತೆಯ ಸಾಕಾರ ಮೂರ್ತಿ. ತಾಯಾಗಿ ಜನ್ಮ ಕೊಟ್ಟು, ಸಹೋದರಿಯಾಗಿ ಸಲಹಿ, ಹೆಂಡತಿಯಾಗಿ ಜೊತೆನಿಂತು, ಮಗಳಾಗಿ ಪೊರೆಯುವವಳು ಹೆಣ್ಣು. ಅವಕಾಶ ದೊರೆತರೆ ಹೆಣ್ಣು ಏನೆಲ್ಲಾ ಸಾಧಿಸಬಲ್ಲಳು ಎಂಬುದು ಇಂದು ನಮ್ಮ ಕಣ್ಣ ಮುಂದಿದೆ. ಅಂತಾರಾಷ್ಟ್ರೀಯ ಮಹಿಳಾ ದಿನದ ಈ ಸಂದರ್ಭದಲ್ಲಿ ದೌರ್ಜನ್ಯ, ಅಸಮಾನತೆಗಳ ವಿರುದ್ಧದ ಮಹಿಳೆಯರ ದನಿಗೆ ನಾವು-ನೀವೆಲ್ಲರೂ ದನಿಗೂಡಿಸೋಣ ಎಂದು ತಿಳಿಸಿದ್ದಾರೆ.
ಉಪ ಮುಖ್ಯಮಂತ್ರಿ ಡಿಕೆ. ಶಿವಕುಮಾರ್ ಅವರು ಪೋಸ್ಟ್ ಮಾಡಿ, ನಾಡಿನ ಸಮಸ್ತ ಮಹಿಳೆಯರಿಗೆ ಅಂತಾರಾಷ್ಟ್ರೀಯ ಮಹಿಳಾ ದಿನದ ಹಾರ್ದಿಕ ಶುಭಾಶಯಗಳು. ʼಗೃಹಜ್ಯೋತಿʼ ತಂದಿತು ಬೆಳಕು, ʼಗೃಹಲಕ್ಷ್ಮಿʼ ಕಟ್ಟಿತು ಬದುಕು. ಅಬಲೆಯನ್ನು ಸಬಲೆಯಾಗಿಸಿತು ʼಶಕ್ತಿʼ, ʼಅನ್ನ ಭಾಗ್ಯʼ ನೀಡಿತು ಹಸಿವಿಗೆ ಮುಕ್ತಿ. ಹೆಣ್ಣೇ ನೀನಲ್ಲ ಒಬ್ಬಂಟಿ, ನಿನ್ನೊಟ್ಟಿಗಿವೆ 5 ಗ್ಯಾರಂಟಿ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿಯವರು ಪೋಸ್ಟ್ ಮಾಡಿ, ಮಹಿಳಾ ದಿನಾಚರಣೆಯನ್ನು ನಾವು ನಮ್ಮ ನಾರಿ ಶಕ್ತಿಗೆ ತಲೆಬಾಗುತ್ತೇವೆ. ನಮ್ಮ ಸರ್ಕಾರ ಯಾವಾಗಲೂ ಮಹಿಳೆಯರ ಸಬಲೀಕರಣಕ್ಕಾಗಿ ಕೆಲಸ ಮಾಡಿದೆ, ನಮ್ಮ ಯೋಜನೆಗಳು ಮತ್ತು ಕಾರ್ಯಕ್ರಮಗಳಲ್ಲಿ ಅದು ಪ್ರತಿಬಿಂಬಿಸುತ್ತದೆ. ಭರವಸೆಯಂತೆ ಇಂದು ನನ್ನ ಸಾಮಾಜಿಕ ಮಾಧ್ಯಮ ಖಾತೆಗಳನ್ನುವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳಾ ಸಾಧಕಿಯರು ಒಂದು ದಿನದ ಮಟ್ಟಿಗೆ ನಿರ್ವಹಿಸಲಿದ್ದಾರೆಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಗುಜರಾತ್‌ನ ನವಸಾರಿ ಜಿಲ್ಲೆಯಲ್ಲಿ ಲಖ್ಪತಿ ದೀದಿಯರೊಂದಿಗೆ ಸಂವಾದ ನಡೆಸಲಿದ್ದಾರೆ. ಈ ಸಮಯದಲ್ಲಿ ಮೋದಿ ಅವರು ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
Advertisement