KPCL ನೇಮಕಾತಿ ಆದೇಶ ಶೀಘ್ರದಲ್ಲೇ ಪ್ರಕಟ: ಇಂಧನ ಸಚಿವ ಕೆ.ಜೆ ಜಾರ್ಜ್

622 ಹುದ್ದೆಗಳನ್ನು ಭರ್ತಿ ಮಾಡಲು 2017 ರಲ್ಲಿ ಅಧಿಸೂಚನೆ ಹೊರಡಿಸಲಾಗಿದೆ. 8 ವರ್ಷಗಳು ಕಳೆದರೂ ನೇಮಕಾತಿ ಆದೇಶ ಸಿಕ್ಕಿಲ್ಲ. ಮನುಷ್ಯನ ಆಯುಷ್ಯ 80 ವರ್ಷ ಎಂದುಕೊಂಡಿದ್ದೀರೋ? 800 ವರ್ಷ ಎಂದುಕೊಂಡಿದ್ದೀರೋ?
ಕೆಜೆ.ಜಾರ್ಜ್
ಕೆಜೆ.ಜಾರ್ಜ್
Updated on

ಬೆಂಗಳೂರು: ಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟೆಡ್ (ಕೆಪಿಸಿಎಲ್) ಗೆ ನೇಮಕಗೊಂಡ 622 ಸಿಬ್ಬಂದಿಗೆ ಶೀಘ್ರದಲ್ಲೇ ನೇಮಕಾತಿ ಆದೇಶಗಳನ್ನು ಹೊರಡಿಸಲಾಗುವುದು ಎಂದು ಇಂಧನ ಸಚಿವ ಕೆ ಜೆ ಜಾರ್ಜ್ ಸೋಮವಾರ ಹೇಳಿದರು.

ಬಿಜೆಪಿಯ ಶರಣು ಸಲಗಾರ್‌ ಅವರು ಗಮನ ಸೆಳೆಯುವ ನಿರ್ಣಯದ ಸಮಯದಲ್ಲಿ, ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ 394 ಮತ್ತು ಹೈ-ಕೇತರ ಪ್ರದೇಶಕ್ಕೆ 228 ಮೀಸಲಾದ ಸಹಾಯಕ ಎಂಜಿನಿಯರ್‌ಗಳು, ಕಿರಿಯ ಎಂಜಿನಿಯರ್‌ಗಳು, ರಸಾಯನಶಾಸ್ತ್ರಜ್ಞರು ಮತ್ತು ರಾಸಾಯನಿಕ ಮೇಲ್ವಿಚಾರಕರ 622 ಹುದ್ದೆಗಳನ್ನು ಭರ್ತಿ ಮಾಡಲು 2017 ರಲ್ಲಿ ಅಧಿಸೂಚನೆ ಹೊರಡಿಸಲಾಗಿದೆ. 8 ವರ್ಷಗಳು ಕಳೆದರೂ ನೇಮಕಾತಿ ಆದೇಶ ಸಿಕ್ಕಿಲ್ಲ. ಮನುಷ್ಯನ ಆಯುಷ್ಯ 80 ವರ್ಷ ಎಂದುಕೊಂಡಿದ್ದೀರೋ? 800 ವರ್ಷ ಎಂದುಕೊಂಡಿದ್ದೀರೋ? ಎಂದು ಸರಕಾರವನ್ನು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಸಚಿವರು, 2017ರಲ್ಲಿ ಅಧಿಸೂಚನೆ ಆಗಿದ್ದು ನಿಜ. ಆದರೆ, ಪ್ರಕರಣ ಹೈಕೋರ್ಟ್‌ ಅಂಗಳದಲ್ಲಿದೆ. ನ್ಯಾಯಾಲಯದ ಆದೇಶದ ಮೇರೆಗೆ 2024ರ ಸೆ.17 ರಂದು ಸಂಭಾವ್ಯ ಆಯ್ಕೆ ಪಟ್ಟು ಬಿಡುಗಡೆ ಮಾಡಲಾಗಿತ್ತು. ಈಗಲೂ ಹೈಕೋರ್ಟ್‌ ಆದೇಶಕ್ಕೆ ಒಳಪಟ್ಟು 1 ವಾರದಲ್ಲಿ ನೇಮಕಾತಿ ಆದೇಶ ನೀಡುತ್ತೇವೆ ಎಂದು ಹೇಳಿದರು.

ಕೆಜೆ.ಜಾರ್ಜ್
KPSC: ಕೆಎಎಸ್ ಗೆಜೆಟೆಡ್ ಪ್ರೊಬೇಷನರ್ ನೇಮಕಾತಿ ಪ್ರಕ್ರಿಯೆಗೆ KSAT ತಡೆ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com