
ಉಡುಪಿ: ಇತ್ತೀಚಿಗಷ್ಟೇ ಗೃಹಸ್ಥಾಶ್ರಮಕ್ಕೆ ಕಾಲಿಟ್ಟ ಸಂಸದ ತೇಜಸ್ವಿ ಸೂರ್ಯ (Tejasvi Surya) ದಂಪತಿ ರಾಜ್ಯದ ಹಲವು ದೇವಾಲಯಗಳಿಗೆ ಭೇಟಿ ನೀಡಿದ್ದಾರೆ.
ಶೃಂಗೇರಿ, ಉಡುಪಿ, ಹೊರನಾಡು ದೇವಾಲಯಗಳನ್ನು ಸಂದರ್ಶಿಸಿರುವ ದಂಪತಿ, ದೇವರ ಸನ್ನಿಧಿಯಲ್ಲಿ ಕೀರ್ತನೆ, ಸಂಗೀತ ಸೇವೆ ಸಲ್ಲಿಸಿದ್ದಾರೆ.
ಉಡುಪಿಯ (Udupi) ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ್ದ ದಂಪತಿ. ಸುಗುಣೇಂದ್ರ ತೀರ್ಥ ಸ್ವಾಮೀಜಿಗಳ (Sugunendra Theertha Swamiji) ಆಶೀರ್ವಾದ ಪಡೆದಿದ್ದಾರೆ.
ಎಲ್ಲಾ ನವದಂಪತಿಗಳು ಕೃಷ್ಣನ ದರ್ಶನ ಮಾಡಬೇಕು. ಶ್ರೀಕೃಷ್ಣ ಕಲ್ಯಾಣದ ದೇವರು. ಇಂದು ಮದುವೆಯಾದ ತಕ್ಷಣ ಪಿಕ್‌ನಿಕ್ ಹೋಗ್ತಾರೆ. ಆದರೆ ತೇಜಸ್ವಿ ಸೂರ್ಯ ಅವರು ದೇವಾಲಯಗಳಿಗೆ ಭೇಟಿ ಕೊಡುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದ್ದಾರೆ. ಇಬ್ಬರೂ ಭಾರತದ ಸಂಸ್ಕೃತಿಯನ್ನು ಪ್ರತಿನಿಧಿಸುವ ದಂಪತಿಯಾಗಿದ್ದಾರೆ. ಇಡಿ ದೇಶಕ್ಕೆ ಇವರ ಸೇವೆ, ಸ್ಪೂರ್ತಿ ಸಿಗುವಂತಾಗಲಿ ಎಂದು ಸುಗುಣೇಂದ್ರ ತೀರ್ಥ ಶ್ರೀಗಳು ಹಾರೈಸಿದ್ದಾರೆ.
ರಥಬೀದಿಯಲ್ಲಿ ನಡೆದ ನಿತ್ಯೋತ್ಸವದಲ್ಲಿ ಪಾಲ್ಗೊಂಡ ನವದಂಪತಿಯ ಕುಟುಂಬಗಳು, ಕೃಷ್ಣ ದೇವರ ಗರ್ಭಗುಡಿಯಲ್ಲಿ ನಡೆಯುವ ಮಹಾಪೂಜೆ ಮತ್ತು ಶಯನ ಪೂಜೆಯಲ್ಲಿ ಭಾಗಿಯಾಯ್ತು. ಈ ಸಂದರ್ಭದಲ್ಲಿ ಶಿವಶ್ರೀ ತೇಜಸ್ವಿ ದೇವರ ಮುಂದೆ ಸಂಗೀತ ಸೇವೆಯನ್ನು ಸಲ್ಲಿಸಿದರು.
Advertisement