ವಿಜಯಪುರ: TNIE 'ಜಾಗೋ ಹಿಂದೂಸ್ತಾನಿ' ಕಾರ್ಯಕ್ರಮ; ಮುಖ್ಯ ಅತಿಥಿಯಾಗಿ ಕರ್ನಲ್ ಗಿರೀಶ್ ಬಿ ಶಿಂಧೆ ಭಾಗಿ

ಗಿರೀಶ್ ಬಿ ಶಿಂಧೆ ಅವರು ವಿವಿಧ ಸೇನಾ ಹಂತಗಳಲ್ಲಿ ಶೂಟಿಂಗ್ ಸ್ಪರ್ಧೆಗಳಲ್ಲಿ ಅಧಿಕಾರಿ ಭಾಗವಹಿಸಿದ್ದಾರೆ. ಅವರಲ್ಲದೆ, ಉಪ ಆಯುಕ್ತ ಟಿ ಭೂಬಾಲನ್ ಮತ್ತು ಎಸ್‌ಪಿ ಲಕ್ಷ್ಮಣ್ ನಿಂಬರಗಿ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಜಾಗೋ ಹಿಂದೂಸ್ತಾನಿ ಕಾರ್ಯಕ್ರಮ
ಜಾಗೋ ಹಿಂದೂಸ್ತಾನಿ ಕಾರ್ಯಕ್ರಮ
Updated on

ವಿಜಯಪುರ: ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವತಿಯಿಂದ ವಿಜಯಪುರದಲ್ಲಿಂದು (ಮಾರ್ಚ್ 23) 'ಜಾಗೋ ಹಿಂದೂಸ್ತಾನಿ' ಕಾರ್ಯಕ್ರಮ ಆಯೋಜಿಸಲಾಗಿದ್ದು, ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ವಿಜಯಪುರದ NCC 36 ಕರ್ನಾಟಕ ಬೆಟಾಲಿಯನ್ ಪಡೆಯ ಕರ್ನಲ್ ಗಿರೀಶ್ ಬಿ ಶಿಂಧೆ ಅವರು ಭಾಗಿವಹಿಸಲಿದ್ದಾರೆ.

ಅವರು 2010 ರಲ್ಲಿ ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದಲ್ಲಿ ಯುನೈಟೆಡ್ ನೇಷನ್ಸ್ ಪೀಸ್ ಕೀಪಿಂಗ್ ಫೋರ್ಸ್‌ನ ಭಾಗವಾಗಿದ್ದರು. ಅಧಿಕಾರಿ ವಿವಿಧ ಸೇನಾ ಹಂತಗಳಲ್ಲಿ ಶೂಟಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. ಅವರಲ್ಲದೆ, ಡೆಪ್ಯೂಟಿ ಕಮಿಷನರ್ ಟಿ ಭೂಬಾಲನ್ ಮತ್ತು ಎಸ್‌ಪಿ ಲಕ್ಷ್ಮಣ್ ನಿಂಬರಗಿ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ.

ಕೊಲ್ಲಾಪುರದ ಸ್ವರ್ ನಿನಾದ್‌ನ ಪ್ರಸಿದ್ಧ ಕಲಾವಿದರ ತಂಡವು ಸಂಜೆ 5 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಲಿದೆ.

ಕಾರ್ಯಕ್ರಮದ ನೇರಪ್ರಸಾರವನ್ನು Kannadaprabha.com ನ YouTube ಚಾನೆಲ್ ನಲ್ಲಿ ವೀಕ್ಷಿಸಬಹುದು. Click Here.

ಈ ಕಲಾ ತಂಡವು 1989 ರಿಂದ ಸ್ವರ್ ನಿನಾದ್‌ ದ ಕಾರ್ಯಕ್ರಮಗಳನ್ನು ನಡೆಸಿ ಜನರನ್ನು ಸಂಗೀತದ ಮೂಲಕ ರಂಜಿಸುತ್ತಿದೆ.

ಆರಂಭದಲ್ಲಿ ಮರಾಠಿ ಕಾರ್ಯಕ್ರಮಗಳೊಂದಿಗೆ ತನ್ನ ಕಲೆ ಪ್ರದರ್ಶನ ಆರಂಭಿಸಿದ ತಂಡ ಇಂದು, ಹಿಂದಿ ಸಂಗೀತದೊಂದಿಗೆ ಮುಂದುವರೆಸುತ್ತಿದೆ.

ಜಾಗೋ ಹಿಂದೂಸ್ತಾನಿ ಕಾರ್ಯಕ್ರಮ
TNIEಯಿಂದ 'ಜಾಗೋ ಹಿಂದೂಸ್ತಾನಿ', ಯುವಜನತೆ ದೇಶದ ಇತಿಹಾಸ ತಿಳಿದುಕೊಂಡು ಕೃತಜ್ಞರಾಗಿರಬೇಕು: ಕಲಬುರಗಿ ಡಿಸಿ

1997ರಲ್ಲಿ, ಭಾರತ 5೦ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತಿದ್ದಾಗ, ನಿರ್ಮಾಪಕ ಸುನಿಲ್ ಸುತಾರ್ ಮತ್ತು ಸ್ವರ್ಣಿನಾಡಿನ ನಿರ್ದೇಶಕ ಪ್ರೊಫೆಸರ್ ಸುರೇಶ್ ಶುಕ್ಲಾ ಅವರು ಜಾಗೋ ಹಿಂದೂಸ್ತಾನಿ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಿ ವೇದಿಕೆಗೆ ತಂದರು. ಈ ಕಾರ್ಯಕ್ರಮವು ಭಾರತೀಯ ಸಂಸ್ಕೃತಿ, ಸ್ವಾತಂತ್ರ್ಯ ಚಳುವಳಿ ಮತ್ತು ಪ್ರಸ್ತುತ ಸಾಮಾಜಿಕ ಪರಿಸ್ಥಿತಿಗಳ ವಿಷಯವನ್ನು ಆಧರಿಸಿದೆ.

ಇಂದು ನಡೆಯುವ ಕಾರ್ಯಕ್ರಮದಲ್ಲಿ ಸ್ವರ್ ನಿನಾದ್‌ ನ ಪ್ರಸಿದ್ಧ ಕಲಾವಿದರ ತಂಡವು ಹಳೆಯ ಮತ್ತು ಹೊಸ ಹಿಂದಿ ಚಲನಚಿತ್ರ ಗೀತೆಗಳನ್ನು ಸಾಂಸ್ಕೃತಿಕ ಹಿನ್ನೆಲೆಯೊಂದಿಗೆ ಎರಡೂವರೆ ಗಂಟೆಗಳ ಕಾಲ ಬೆಳಕಿನ ಪರಿಣಾಮಗಳೊಂದಿಗೆ ಕಾರ್ಯಕ್ರಮವನ್ನು ವೇದಿಕೆಯಲ್ಲಿ ಪ್ರದರ್ಶಿಸಲಿದೆ.

ಸ್ವರ್ ನಿನಾದ್‌ ಭಾರತದ ಬಹುತೇಕ ಎಲ್ಲಾ ಪ್ರಮುಖ ನಗರಗಳಲ್ಲಿ ದೆಹಲಿ, ಕೋಲ್ಕತ್ತಾ, ಚೆನ್ನೈ, ಅಹಮದಾಬಾದ್ ಮತ್ತು ಬೆಂಗಳೂರಿನಲ್ಲಿ ಜಾಗೋ ಹಿಂದೂಸ್ತಾನಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪ್ರದರ್ಶಿಸಿದೆ.

ಈ ತಂಡವವು ತಂಡವು ಪಂಜಾಬ್‌ನ ವಾಘಾ ಗಡಿಯಲ್ಲಿಯೂ ಪ್ರದರ್ಶನ ನೀಡಿದೆ. ವಿದೇಶದಲ್ಲಿಯೂ (USA) ಜಾಗೋ ಹಿಂದೂಸ್ತಾನಿಯನ್ನು ಪ್ರಸ್ತುತಪಡಿಸಿದೆ. ತಂಡವು ಇಲ್ಲಿಯವರೆಗೆ 2,000 ಕ್ಕೂ ಹೆಚ್ಚು ವಿವಿಧ ವೇದಿಕೆ ಕಾರ್ಯಕ್ರಮಗಳನ್ನು ಪ್ರದರ್ಶಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com