ವಿವಾಹಕ್ಕೂ ಮುನ್ನ ಯುವತಿ ಗರ್ಭಿಣಿ: ಅಕ್ರಮ ಸಂಬಂಧ ಮುಚ್ಚಿಡಲು ನವಜಾತ ಶಿಶುವನ್ನು ತಿಪ್ಪೆಗೆ ಎಸೆದ ಜೋಡಿ; ಬಂಧನ

ಇಬ್ಬರೂ ಕಳೆದ ಮೂರು ವರ್ಷಗಳಿಂದ ಸಂಬಂಧದಲ್ಲಿದ್ದರು, ಇನ್ನು ಕೆಲವೇ ದಿನಗಳಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಬೇಕಿತ್ತು.
ನವಜಾತ ಶಿಶು (ಸಂಗ್ರಹ ಚಿತ್ರ)
ನವಜಾತ ಶಿಶು (ಸಂಗ್ರಹ ಚಿತ್ರ)
Updated on

ಬೆಳಗಾವಿ: ನವಜಾತ ಶಿಶುವನ್ನು ಕೊಂದು ಶವವನ್ನು ಕಸದ ತೊಟ್ಟಿಯಲ್ಲಿ ಎಸೆದ ಆರೋಪದ ಮೇಲೆ ಯುವಕ ಹಾಗೂ ಯುವತಿನ್ನು ಬೆಳಗಾವಿ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.

ಬಂಧಿತರನ್ನು ಕಿತ್ತೂರು ಬಳಿಯ ಅಂಬಡಗಟ್ಟಿ ಗ್ರಾಮದ ಮಹಾಬಲೇಶ್ ಕಾಮೋಜಿ (31) ಮತ್ತು ಸಿಮ್ರಾನ್ ಅಲಿಯಾಸ್ ಮುಸ್ಕಾನ್ (22) ಎಂದು ಗುರ್ತಿಸಲಾಗಿದೆ.

ಇಬ್ಬರೂ ಕಳೆದ ಮೂರು ವರ್ಷಗಳಿಂದ ಸಂಬಂಧದಲ್ಲಿದ್ದರು, ಇನ್ನು ಕೆಲವೇ ದಿನಗಳಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಬೇಕಿತ್ತು. ಆದರೆ, ವಿವಾಹಕ್ಕೂ ಮುನ್ನವೇ ಯುವತಿ ಗರ್ಭಣಿಯಾಗಿದ್ದು, ಮಾರ್ಚ್ 5 ರಂದು ಹೆರಿಗೆ ನೋವು ಕಾಣಿಸಿಕೊಂಡಿದೆ. ಈ ವೇಳೆ ತನ್ನ ವೇದನೆಯನ್ನು ಮಹಾಬಲೇಶ್ ಬಳಿ ಹೇಳಿಕೊಂಡಿದ್ದು, ಆತ ಹೇಳಿದಂತೆ ಮಗುವಿಗೆ ಜನ್ಮ ನೀಡಿದ್ದಾಳೆ.

ಬಳಿಕ ಮಗುವಿನ ಅಳುವಿನಿಂದ ಇತರರಿಗೆ ತಿಳಿಯುತ್ತದೆ ಎಂದು ಬಾಯಿ ಮೂಗು ಹಿಡಿದು ಡಬ್ಬದಲ್ಲಿ ಹಾಕಿದ್ದಾಳೆ. ಈ ವೇಳೆ ತಲೆಗೆ ಬಲವಾಗಿ ಪೆಟ್ಟು ಬಿದ್ದು ಮಗು ಸಾವನ್ನಪ್ಪಿದೆ. ಇದಾದ ಬಳಿಕ ಶಿಶುವನ್ನ ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ತಿಪ್ಪೆಗೆಸದು ಇದಕ್ಕೂ ತನಗೂ ಸಂಬಂಧ ಇಲ್ಲ ಎನ್ನುವಂತೆ ಸ್ಥಳದಿಂದ ಕಾಲ್ಕಿತ್ತಿದ್ದಾಳೆ.

ನವಜಾತ ಶಿಶು (ಸಂಗ್ರಹ ಚಿತ್ರ)
ಟಾಯ್ಲೆಟ್ ಗುಂಡಿಯಲ್ಲಿ ನವಜಾತ ಶಿಶು ಎಸೆದು ಪರಾರಿ: ರಾಮನಗರ ಆಸ್ಪತ್ರೆಯಲ್ಲಿ ಅಮಾನವೀಯ ಘಟನೆ

ಈ ನಡುವೆ ಅಕ್ಕಪಕ್ಕದವರು ಶಿಶು ಬಿದ್ದಿದ್ದನ್ನ ಗಮನಿಸಿ ಕಿತ್ತೂರು ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರಕರಣದಲ್ಲಿ ತಾಯಿ ಪತ್ತೆ ಹಚ್ಚಿದ ಪೊಲೀಸರು, ಯುವಕ ಮಹಾಬಲೇಶನನ್ನು ಬಂಧನಕ್ಕೊಳಪಡಿಸಿದ್ದಾರೆ.

ವಿಚಾರಣೆ ವೇಳೆ ಯುವತಿ ಮಗುವನ್ನು ಹತ್ಯೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆಂದು ಪೊಲೀಸರು ತಿಳಿಸಿದ್ದಾನೆ.

ಮಗುವಿನ ಶವವನ್ನು ವಶಪಡಿಸಿಕೊಂಡ ಕೂಡಲೇ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಇದೀಗ ಪೊಲೀಸರು ಇಬ್ಬರ ವಿರುದ್ಧ ಬಿಎನ್‌ಎಸ್ ಸೆಕ್ಷನ್ 94 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com