Honeytrap ಆರೋಪ: ಸಚಿವ ರಾಜಣ್ಣ ಇನ್ನೂ ದೂರು ದಾಖಲಿಸಿಲ್ಲ- ಗೃಹ ಸಚಿವ ಜಿ. ಪರಮೇಶ್ವರ್

ಆರೋಪ ಮಾಡಿದವರು ದೂರಪು ನೀಡಬೇಕು. ನಂತರ ತನಿಖೆ ನಡೆಸಲಾಗುವುದು. ನೀವು ಎಷ್ಟು ಬಾರಿ ಕೇಳಿದರೂ ಇದು ನನ್ನ ಪ್ರತಿಕ್ರಿಯೆ ಹೀಗೆಯೇ ಇರುತ್ತದೆ.
G Parameshwar
ಗೃಹ ಸಚಿವ ಜಿ ಪರಮೇಶ್ವರ್
Updated on

ಬೆಂಗಳೂರು: ಹನಿಟ್ರ್ಯಾಪ್ ಯತ್ನ ಆರೋಪದ ಬಗ್ಗೆ ತನಿಖೆ ನಡೆಸಲು ಸಚಿವ ಕೆ. ಎನ್. ರಾಜಣ್ಣ ಅವರು ಇನ್ನೂ ದೂರು ದಾಖಲಿಸಿಲ್ಲ ಎಂಗು ಗೃಹ ಸಚಿವ ಜಿ. ಪರಮೇಶ್ವರ್ ಅವರು ಮಂಗಳವಾರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು. ವಿರೋಧ ಪಕ್ಷದ ನಾಯಕ ಆರ್ ಅಶೋಕ ತಮ್ಮ ಫೋನ್ ಟ್ಯಾಪ್ ಅಗುತ್ತಿರುವ ಬಗ್ಗೆ ದೂರಿರುವುದನ್ನು ಕೇಳಿಸಿಕೊಂಡಿದ್ದೇನೆ, ಆದರೆ ಅವರಾಗಲೀ ಅವರು ಪಕ್ಷದ ಸದಸ್ಯರಾಗಲೀ ದೂರು ಸಲ್ಲಿಸಿಲ್ಲ ಎಂದು ಹೇಳಿದರು.

ಆರೋಪ ಮಾಡಿದವರು ದೂರಪು ನೀಡಬೇಕು. ನಂತರ ತನಿಖೆ ನಡೆಸಲಾಗುವುದು. ನೀವು ಎಷ್ಟು ಬಾರಿ ಕೇಳಿದರೂ ಇದು ನನ್ನ ಪ್ರತಿಕ್ರಿಯೆ ಹೀಗೆಯೇ ಇರುತ್ತದೆ ಎಂದು ತಿಳಿಸಿದರು.

ಹನಿಟ್ರ್ಯಾಪ್ ಪ್ರಕರಣದ ತನಿಖೆಗೆ ನಿರ್ದೇಶನ ಕೋರಿ ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕುರಿತ ಪ್ರಶ್ನೆಗೆ ಉತ್ತರಿಸಿ, ಯಾವ ತೀರ್ಪು ಬರಲಿದೆ ಕಾದು ನೋಡೋಣ ಎಂದು ಹೇಳಿದರು.

ಸಚಿವ ರಾಜಣ್ಣ ಯಾವ ಕಾರಣಕ್ಕೆ ದೂರು ಸಲ್ಲಿಸಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿ, ಅವರನ್ನೇ ಕೇಳಬೇಕು. ನನ್ನನ್ನು ಕೇಳಿದರೆ ಹೇಗೆ? ನಾನು ಅವರಿಂದ ದೂರು ದಾಖಲಿಸುವಂತೆ ಮಾಡಲು ಸಾಧ್ಯವೇ? ಸೂಕ್ತ ಎನಿಸಿದರೆ ಅವರು ದೂರು ದಾಖಲಿಸಬೇಕು. ನಂತರ ಇಲಾಖೆ ತನ್ನ ಕೆಲಸ ಪ್ರಾರಂಭಿಸಲಿದೆ ಎಂದರು.

ರಾಜಣ್ಣ ಅವರೇ ಮೇಲೆ ಒತ್ತರ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ನನಗೆ ಗೊತ್ತಿಲ್ಲ, ಅವರನ್ನೇ ಕೇಳಿ. ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ಮೇಲೆ ಯಾವುದೇ ಒತ್ತಡವಿಲ್ಲ. ದೂರು ನೀಡಿದ ನಂತರ ತನಿಖೆ ಆರಂಭವಾಗಲಿದೆ.... ನಾನು ಈಗಾಗಲೇ ಉನ್ನತ ಮಟ್ಟದ ತನಿಖೆಯನ್ನು ಆದೇಶಿಸಿದ್ದೇನೆ. ಮುಖ್ಯಮಂತ್ರಿಗಳು ತನಿಖೆಯ ಸ್ವರೂಪ ಮತ್ತು ಮಟ್ಟವನ್ನು ನಿರ್ಧರಿಸುತ್ತಾರೆ, ಆದರೆ, ಕ್ರಮಕ್ಕೆ ಕಾರಣದ ಅವಶ್ಯಕತೆಯಿದೆ, ಆದ್ದರಿಂದ ದೂರು ದಾಖಲಾಗಬೇಕಿದೆ ಎಂದರು.

ಡಿನ್ನರ್ ಮೀಟಿಂಗ್'ನಲ್ಲಿ ಭಾಗಿಯಾಗಿರುವ ಸಚಿವರ ಮೇಲೆ ಬೇಹುಗಾರಿಕೆ ನಡೆಸಲಾಗಿದೆ ಎಂಬ ಊಹಾಪೋಹಗಳ ಕುರಿತ ಪ್ರಶ್ನೆಗೆ ಉತ್ತರಿಸಿ, "ಯಾರಾದರೂ ನಿಗಾ ಇಡಲಿ, ಯಾವುದೇ ಸಮಸ್ಯೆ ಇಲ್ಲ. ನಾವು ಡಿನ್ನರ್ ಮೀಟಿಂಗ್ ನಡೆಸುತ್ತಿಲ್ಲ. ಆಂತರಿಕ ಮೀಸಲಾತಿ (ಎಸ್‌ಸಿಗಳಲ್ಲಿ) ಕುರಿತು ಚರ್ಚಿಸಲು ಸಚಿವ ಮಹಾದೇವಪ್ಪ ಅವರ ಮನೆಯಲ್ಲಿ ಭೇಟಿಯಾಗಿದ್ದೆವು. ನಿನ್ನೆ ಈ ವಿಷಯದ ಬಗ್ಗೆ ಮುಖ್ಯಮಂತ್ರಿಗಳನ್ನೂ ಭೇಟಿಯಾಗಿದ್ದೆವು ಎಂದು ಹೇಳಿದರು.

ನಟಿ ರನ್ಯಾ ರಾವ್ ಅವರ ಚಿನ್ನದ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಅವರು ಯಾವುದೇ ತನಿಖಾ ವರದಿಯನ್ನು ಸಲ್ಲಿಸಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ಅದರ ಬಗ್ಗೆ ನನಗೆ ತಿಳಿದಿಲ್ಲ. ಮುಖ್ಯಮಂತ್ರಿಗೆ ಯಾವುದೇ ಮಧ್ಯಂತರ ವರದಿ ಸಲ್ಲಿಕೆಯಾಗಿರುವ ಬಗ್ಗೆ ಖಚಿತವಿಲ್ಲ ಎಂದು ಹೇಳಿದರು.

ತನಿಖೆಗೆ ಸಂಬಂಧಿಸಿದಂತೆ ಅವರೊಂದಿಗೆ (ಗುಪ್ತಾ) ದಿನನಿತ್ಯ ಚರ್ಚಿಸುವುದಿಲ್ಲ, ಅವರಿಗೆ ಒಂದು ವಾರದ ಸಮಯವನ್ನು ನೀಡಲಾಗಿದೆ, ಅವರು ವರದಿಯನ್ನು ನೀಡಬಹುದು ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com