ಬೇಸಿಗೆ ಮಳೆ ತಂದ ಸಂತಸ: ರೈತರ ಮೊಗದಲ್ಲಿ ಮಂದಹಾಸ; 2 ಬೆಳೆ ಬೆಳೆಯಲು ಸಜ್ಜು

ಒಂದು ವರ್ಷದಲ್ಲಿ ಎರಡು ಬೆಳೆ ಮಾತ್ರವಲ್ಲ, ಉತ್ತಮ ಪೂರ್ವ ಮಾನ್ಸೂನ್ ಮಳೆಯು ಕಳೆದ ಹಲವು ವರ್ಷಗಳಲ್ಲಿ ಗಣನೀಯವಾಗಿ ಅನೇಕ ಪ್ರಯೋಜನಗಳನ್ನು ತಂದಿದೆ.
Representational image
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ರೈತರಿಗೆ ಇಲ್ಲಿದೆ ಒಳ್ಳೆಯ ಸುದ್ದಿ, ಬೇಸಿಗೆ ಮಳೆ ಚೆನ್ನಾಗಿ ಆಗುವ ನಿರೀಕ್ಷೆಯಿರುವುದರಿಂದ, ಈ ವರ್ಷ ಎರಡು ಬೆಳೆಗಳನ್ನು ತೆಗೆಯಬಹುದಾಗಿದೆ. ಮುಂಗಾರಿಗೂ ಮುನ್ನ ರೈತರು ಅಲ್ಪಾವಧಿ ಬೆಳೆ ತೆಗೆಯಬೇಕೆಂದು ತಜ್ಞರು ಸೂಚಿಸುತ್ತಿದ್ದಾರೆ.

ಒಂದು ವರ್ಷದಲ್ಲಿ ಎರಡು ಬೆಳೆ ಮಾತ್ರವಲ್ಲ, ಉತ್ತಮ ಪೂರ್ವ ಮಾನ್ಸೂನ್ ಮಳೆಯು ಕಳೆದ ಹಲವು ವರ್ಷಗಳಲ್ಲಿ ಗಣನೀಯವಾಗಿ ದಾಖಲಾಗದ ಅನೇಕ ಪ್ರಯೋಜನಗಳನ್ನು ಹೊಂದಿದೆ. ಹವಾಮಾನ ಇಲಾಖೆ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಉತ್ತಮ ಮಳೆಯಾಗುವ ಮುನ್ಸೂಚನೆ ನೀಡಿರುವುದರಿಂದ, ರೈತರು ಈ ಪ್ರಯೋಜನಗಳನ್ನು ಪಡೆಯಲಿದ್ದಾರೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದ ಮಾಜಿ ನಿರ್ದೇಶಕ ಶ್ರೀನಿವಾಸ್ ರೆಡ್ಡಿ ಮಾತನಾಡಿ, ಅಂತರ್ಜಲ ಕುಸಿತದೊಂದಿಗೆ, ನೀರಿನ ಗುಣಮಟ್ಟ ಮತ್ತು ಪ್ರಮಾಣ ಕುಸಿಯುತ್ತಿತ್ತು, ಆದರೆ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಉತ್ತಮ ಮಳೆಯಾಗುವುದರಿಂದ ಅಂತರ್ಜಲ ಮರುಪೂರಣವಾಗುತ್ತದೆ, ಅದರ ಗುಣಮಟ್ಟ ಮತ್ತು ಪ್ರಮಾಣ ಸುಧಾರಿಸುತ್ತದೆ ಎಂದು ಹೇಳಿದ್ದಾರೆ.

ಕೊಳವೆಬಾವಿಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಮತ್ತು ಪರೋಕ್ಷವಾಗಿ ರೈತರು ವಿದ್ಯುತ್ ಬಳಕೆಯನ್ನು ಕಡಿಮೆ ಮಾಡಲು ಮಳೆ ಸಹಾಯ ಮಾಡುತ್ತದೆ ಎಂದು ರೆಡ್ಡಿ ಹೇಳಿದರು. ಇದರ ಜೊತೆಗೆ ಜಾನುವಾರುಗಳಿಗೆ ಮೇವು ಒದಗಿಸುವ ಹುಲ್ಲುಗಾವಲುಗಳನ್ನು ಹಸಿರೀಕರಣಗೊಳಿಸಲು ಮಳೆ ಸಹಾಯ ಮಾಡುತ್ತದೆ, ಇದು ಮತ್ತೆ ರೈತರಿಗೆ ದೊಡ್ಡ ರೀತಿಯಲ್ಲಿ ಸಹಾಯ ಮಾಡುತ್ತದೆ ಎಂದಿದ್ದಾರೆ.

Representational image
Bengaluru Rains: ಬೆಂಗಳೂರಿನಲ್ಲಿ ಬೇಸಿಗೆ ಮಳೆ: ನಗರದ ತಾಪಮಾನ ತಗ್ಗಿಸಿದ ಮಾರ್ಚ್ ತಿಂಗಳ ಮೊದಲ ವರ್ಷಧಾರೆ!

ಈ ವರ್ಷ, ರೈತರು ಎರಡು ಬೆಳೆಗಳನ್ನು ತೆಗೆದುಕೊಳ್ಳಬಹುದು. ಅವರು ಮಕ್ಕೆಜೋಳ, ಹೆಸರುಕಾಳು ಅಥವಾ ಟೊಮೆಟೊದಂತಹ 80-85 ದಿನಗಳ ಬೆಳೆಗಳನ್ನು ಬಿತ್ತಲು ಪ್ರಾರಂಭಿಸಿ ಜೂನ್ ವೇಳೆಗೆ ಅವುಗಳನ್ನು ಕೊಯ್ಲು ಮಾಡಬಹುದು ಎಂದು ಬೆಂಗಳೂರಿನ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಮಾಜಿ ರಿಜಿಸ್ಟ್ರಾರ್ ಪ್ರೊ. ರಾಜೇಗೌಡ ಹೇಳಿದ್ದಾರೆ.

ಈ ವರ್ಷ, ಈಶಾನ್ಯ ಮಾನ್ಸೂನ್ ಅನೇಕ ಸ್ಥಳಗಳಲ್ಲಿ ಕೊರತೆಯಿತ್ತು, ಆದಾಗ್ಯೂ, ಕಳೆದ ಎರಡು ದಿನಗಳಲ್ಲಿ ಮಳೆಯು ಮಣ್ಣಿನ ತೇವಾಂಶ ಹೆಚ್ಚಿಸಲು ಪಡೆಯಲು ಸಹಾಯ ಮಾಡುತ್ತಿದೆ. ರೈತರು ಪೂರ್ವ ಮಾನ್ಸೂನ್ ಬೆಳೆಗಳನ್ನು ಬಿತ್ತಲು ಸಜ್ಜಾಗುತ್ತಿದ್ದಾರೆ. ಚಾಮರಾಜನಗರ, ಮೈಸೂರು, ಮಂಡ್ಯ ಮತ್ತು ಹಾಸನದ ಕೆಲವು ಭಾಗಗಳ ರೈತರು ಈಗಾಗಲೇ ಬಿತ್ತನೆಗಾಗಿ ಭೂಮಿಯನ್ನು ಸಿದ್ಧಪಡಿಸಲು ಪ್ರಾರಂಭಿಸಿದ್ದಾರೆ.

ಈ ವರ್ಷ ಪೂರ್ವ ಮಾನ್ಸೂನ್ ಮಳೆ ಉತ್ತಮವಾಗಿರುತ್ತದೆ ಎಂದು ತಮಗೆ ತಿಳಿದಿದೆ ಎಂದು ಎನ್. ಚೆಲುವರಾಯಸ್ವಾಮಿ ಹೇಳಿದರು. ಹಲವು ವರ್ಷಗಳ ನಂತರ, ಪೂರ್ವ ಮಾನ್ಸೂನ್ ಮಳೆ ಉತ್ತಮವಾಗಿದೆ. ಕರ್ನಾಟಕದ ಹಲವು ಭಾಗಗಳಲ್ಲಿ ರೈತರು ಕೃಷಿ ಚಟುವಟಿಕೆಗಳನ್ನು ಪ್ರಾರಂಭಿಸಿದ್ದಾರೆ. ನಾವು ತಾಲ್ಲೂಕು ಮಟ್ಟದಿಂದ ರೈತ ಸಂಪರ್ಕ ಕೇಂದ್ರದವರೆಗಿನ ಅಧಿಕಾರಿಗಳಿಗೆ ರೈತರಿಗೆ ಅಗತ್ಯವಿರುವ ಬೀಜಗಳು ಮತ್ತು ರಸಗೊಬ್ಬರಗಳನ್ನು ಪೂರೈಸಲು ನಿರ್ದೇಶಿಸಿದ್ದೇವೆ ಎಂದು ಅವರು ಹೇಳಿದರು.

ಬೇಸಿಗೆ ಮಳೆ ಬೆಳೆಗಳಿಗೆ, ವಿಶೇಷವಾಗಿ ಹೂಬಿಡಲು ಅಥವಾ ಕೊಯ್ಲಿಗೆ ಸಿದ್ಧವಾಗಿರುವ ಬೆಳೆಗಳಿಗೆ ಒಳ್ಳೆಯದಲ್ಲ. ಬೇಸಿಗೆಯ ಮಳೆಯ ಸಮಯದಲ್ಲಿ ಸಾಮಾನ್ಯವಾಗಿ ಕಂಡುಬರುವ ಮಿಂಚು ಮತ್ತು ಗುಡುಗಿನ ಬಗ್ಗೆ ರೈತರು ಎಚ್ಚರದಿಂದಿರಬೇಕು ಎಂದು ತಜ್ಞರು ಎಚ್ಚರಿಸಿದ್ದಾರೆ. "ಮನೆಯಿಂದ ಹೊರಗೆ ಕಾಲಿಡದಂತೆ ನಾವು ಅವರಿಗೆ ಮನವಿ ಮಾಡುತ್ತೇವೆ" ಎಂದು ರೆಡ್ಡಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com