ashika ranganath
ನಟಿ ಆಶಿಕಾ ರಂಗನಾಥ್ ಮತ್ತಿತರರು

ಬೆಂಗಳೂರು: ದೇಶದ ಅತಿ ದೊಡ್ಡ ಎಲ್ ಇಡಿ ಆಧಾರಿತ ಸ್ಪೇಸ್ ಥಿಯೇಟರ್ ಅನಾವರಣ!

ಈ ವರ್ಷ ವಂಡರ್ ಲಾದ 25 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಮೊದಲ ಬಾರಿಗೆ ಮ್ಮರ್ಸಿವ್ ಸ್ಕ್ರೀನ್ ಸ್ಪೇಸ್ ಥಿಯೇಟರ್ ಅನಾವರಣಗೊಳಿಸಲಾಗಿದೆ
Published on

ಬೆಂಗಳೂರು: ವಂಡರ್ ಲಾದಲ್ಲಿ ದೇಶದ ಅತಿದೊಡ್ಡ ಎಲ್ ಇಡಿ ಆಧಾರಿತ ಇಮ್ಮರ್ಸಿವ್ ಸ್ಕ್ರೀನ್ ಸ್ಪೇಸ್ ಥಿಯೇಟರ್ ನ್ನು ಕನ್ನಡ ಚಿತ್ರ ನಟಿ ಆಶಿಕಾ ರಂಗನಾಥ್ ಅನಾವರಣಗೊಳಿಸಿದರು. ಮಿಷನ್ ಇಂಟರ್ ಸ್ಟೆಲ್ಲಾರ್ ಎಂದು ಕರೆಯಲಾಗುವ ಥಿಯೇಟರ್ 23 ಮೀಟರ್ ಎತ್ತರದ ಛಾವಣಿಯೊಂದಿಗೆ 8 ಅಂತಸ್ತಿನ ಗುಮ್ಮಟ ಆಕಾರದ ಕಟ್ಟಡದೊಳಗೆ ಇದೆ.

ಈ ಕುರಿತು ಮಾತನಾಡಿದ ವಂಡರ್ ಲಾ ಹಾಲಿಡೇಸ್ ಲಿಮಿಟೆಡ್ ಕಾರ್ಯನಿರ್ವಾಹಕ ಅಧ್ಯಕ್ಷ ಹಾಗೂ ಎಂಡಿ ಅರುಣ್ ಕೆ ಚಿಟ್ಟಿಲಪ್ಪಿಲ್ಲಿ, ಮಿಷನ್ ಇಂಟರ್ ಸ್ಟೆಲ್ಲಾರ್ ನೊಂದಿಗೆ ನಾವು ಅತ್ಯಾಧುನಿಕ ತಂತ್ರಜ್ಞಾನವನ್ನು ಉತ್ಸಾಹದೊಂದಿಗೆ ಮನರಂಜನೆಯ ಹೊಸ ಯುಗವನ್ನು ಪ್ರಾರಂಭಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಈ ವರ್ಷ ವಂಡರ್ ಲಾದ 25 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಮೊದಲ ಬಾರಿಗೆ ಮ್ಮರ್ಸಿವ್ ಸ್ಕ್ರೀನ್ ಸ್ಪೇಸ್ ಥಿಯೇಟರ್ ಅನಾವರಣಗೊಳಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಮಿಷನ್ ಇಂಟರ್ ಸ್ಟೆಲ್ಲಾರ್ ವಿಶೇಷತೆಗಳು: 3,500 ಚದರ ಅಡಿ ವಿಸ್ತೀರ್ಣದ ಆವರಣದಲ್ಲಿ ನಿರ್ಮಿಸಲಾಗಿರುವ 22 ಮೀ x 15 ಮೀ. ವಿಸ್ತೀರ್ಣದ ಎಲ್ ಇಡಿ ಪರದೆ ಮೇಲೆ ದೃಶ್ಯ ವೈಭವ ಇರಲಿದೆ.ಇಟಲಿಯಿಂದ ಆಮದು ಮಾಡಿಕೊಳ್ಳಲಾದ 60 ಅತಿಥಿಗಳಿಗೆ ಹೈಡ್ರಾಲಿಕ್ ಲಿಫ್ಟ್ ಆಸನ ವ್ಯವಸ್ಥೆಯು ಸವಾರರನ್ನು 40 ಅಡಿ ಎತ್ತರಕ್ಕೆ ಕೊಂಡೊಯ್ದು ಬಾಹ್ಯಾಕಾಶದ ದೃಶ್ಯ ವೈಭವ ಆನಂದಿಸಲಿದ್ದಾರೆ. ಹೈಟೆಕ್ ಲೇಸರ್ ಪ್ರೊಜೆಕ್ಷನ್ ಗಳೊಂದಿಗೆ ಚಲನೆಯನ್ನು ಸಿಂಕ್ರೊನೈಸ್ ಮಾಡಲಾಗಿದ್ದು, ಅಮೆರಿಕದ ಲಾಸ್ ಏಂಜಲಿಸ್ ನಲ್ಲಿ ರೂಪಿಸಲಾಗಿದೆ.

ashika ranganath
ಬೆಂಗಳೂರು: ವಂಡರ್ ಲಾ ರೆಸಾರ್ಟ್ ಮೇಲೆ ಐಟಿ ಅಧಿಕಾರಿಗಳು ದಾಳಿ

ಶಕ್ತಿಯುತ ಧ್ವನಿ ವ್ಯವಸ್ಥೆ: 46,000-ವ್ಯಾಟ್ ಧ್ವನಿ ವ್ಯವಸ್ಥೆಯು ಬಹುಸಂವೇದನಾ ಅನುಭವ. ಬಾಹ್ಯಾಕಾಶ ಪ್ರಯಾಣದ ವಾಸ್ತವಿಕತೆ . ಪೂರ್ವವೀಕ್ಷಣೆ ಹಾಲ್ ಮತ್ತು ಕ್ಯೂ ಪ್ರದೇಶದೊಂದಿಗೆ 6500 sq. ft. ಹವಾನಿಯಂತ್ರಿತ ಸ್ಥಳವು ಅತಿಥಿಗಳ ಆರಾಮವನ್ನು ಖಚಿತಪಡಿಸುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com