BBMP Budget 2025: 'ಬಿಳಿಯಾನೆ' ಯೋಜನೆಗಳಿಗೆ ಭಾರಿ ಅನುದಾನ; ಮೂಲಸೌಕರ್ಯ ನಿರ್ಲಕ್ಷ್ಯ; ತಜ್ಞರು ಏನಂತಾರೆ?

ಮಹಾನಗರ ಪಾಲಿಕೆ ಯೋಜನಾ ಸಮಿತಿ (ಎಂಪಿಸಿ) ಮತ್ತು ಬಿಬಿಎಂಪಿಗೆ ಚುನಾವಣೆ ನಡೆಯದಿರುವ ಬಗ್ಗೆ ಸಾಮಾಜಿಕ ಕಾರ್ಯಕರ್ತರಾದ ಕಾತ್ಯಾಯಿನಿ ಚಾಮರಾಜ್ ಮತ್ತು ಸಂದೀಪ್ ಅನಿರುಧನ್ ಕಳವಳ ವ್ಯಕ್ತಪಡಿಸಿದ್ದಾರೆ.
Bengaluru Trafic
ಬೆಂಗಳೂರು ಟ್ರಾಫಿಕ್ ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಬಿಬಿಎಂಪಿ ಬಜೆಟ್‌ನಲ್ಲಿ ‘ಬಿಳಿ ಆನೆ ಯೋಜನೆಗಳಿಗೆ’ ಭಾರಿ ಅನುದಾನ ಮೀಸಲಿಟ್ಟಿದ್ದು, ನಗರದ ನಿರಂತರವಾದ ರಸ್ತೆ ನಿರ್ಮಾಣ, ರಸ್ತೆ ಗುಂಡಿ ರಿಪೇರಿಯಂತಹ ಸಮಸ್ಯೆಗಳನ್ನು ನಿರ್ಲಕ್ಷಿಸಲಾಗಿದೆ ಎಂದು ನಾಗರಿಕ ತಜ್ಞರು ಹಾಗೂ ಕಾರ್ಯಕರ್ತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಮಹಾನಗರ ಪಾಲಿಕೆ ಯೋಜನಾ ಸಮಿತಿ (ಎಂಪಿಸಿ) ಮತ್ತು ಬಿಬಿಎಂಪಿಗೆ ಚುನಾವಣೆ ನಡೆಯದಿರುವ ಬಗ್ಗೆ ಸಾಮಾಜಿಕ ಕಾರ್ಯಕರ್ತರಾದ ಕಾತ್ಯಾಯಿನಿ ಚಾಮರಾಜ್ ಮತ್ತು ಸಂದೀಪ್ ಅನಿರುಧನ್ ಕಳವಳ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ನಾಗರಿಕರ ಸಾಂವಿಧಾನಿಕ ಹಕ್ಕನ್ನು ಉಲ್ಲಂಘಿಸುವ ಮೂಲಕ ಚುನಾಯಿತ ಕೌನ್ಸಿಲ್ ಮತ್ತು ಮೇಯರ್ ಬದಲಿಗೆ ಅಧಿಕಾರಿಗಳು ಸತತ ಐದನೇ ವರ್ಷಕ್ಕೆ ಬಿಬಿಎಂಪಿ ಬಜೆಟ್ ಅನ್ನು ಮಂಡಿಸುತ್ತಿರುವುದು ದುರಂತವಾಗಿದೆ ಎಂದು ಕಾತ್ಯಾಯಿನಿ ಹೇಳಿದರು.Citizens’ Agenda For Bengaluru ಸಂಚಾಲಕ ಅನಿರುಧನ್ ಈ ಬಜೆಟ್ ನಿಂದ ನಗರಕ್ಕೆ ವಂಚನೆ ಮಾಡಲಾಗಿದೆ ಎಂದು ಆರೋಪಿಸಿದರು.

ಹಲವು ಬಿಳಿ ಆನೆ ಯೋಜನೆಗಳಿಗೆ ದೊಡ್ಡ ಮೊತ್ತದ ಹಣವನ್ನು ಮಂಜೂರು ಮಾಡಲಾಗಿದೆ. ಆದರೆ ನಾಗರಿಕರು ಕೇಳುತ್ತಿರುವ ಮೂಲ ಸೌಕರ್ಯಗಳನ್ನು ನಿರ್ಲಕ್ಷಿಸಲಾಗಿದೆ. ದೊಡ್ಡ ದೊಡ್ಡ ಯೋಜನೆಗಳನ್ನು ಘೋಷಿಸಲಾಗಿದೆ ಆದರೆ ರಸ್ತೆ ಗುಂಡಿ ದುರಸ್ತಿ ಮತ್ತು ರಸ್ತೆ ದುರಸ್ತಿಗೆ ಹಣ ಇದೆಯೇ? ಅಕ್ರಮ ಕಟ್ಟಡಗಳು ಮತ್ತು ಬಡಾವಣೆ ತೆರವಿಗೆ ಹಣವಿಲ್ಲ," ಪೊಲೀಸ್ ಪಡೆ ಸ್ಥಾಪನೆಗೆ ಹಣವಿಲ್ಲ ಎಂದು ಕಿಡಿಕಾರಿದರು.

Bengaluru Trafic
BBMP Budget 2025: ಬ್ರಾಂಡ್‌ ಬೆಂಗಳೂರು ಸಾಕಾರಕ್ಕೆ 1,360 ಕೋಟಿ ರೂ ಮೀಸಲು!

ಬೆಂಗಳೂರು ನವನಿರ್ಮಾಣ ಪಾರ್ಟಿಯ (ಬಿಎನ್‌ಪಿ) ಶ್ರೀಕಾಂತ್ ನರಸಿಂಹನ್ ಮಾತನಾಡಿ, ಘನತ್ಯಾಜ್ಯ ನಿರ್ವಹಣೆಗೆ 1,500-ರೂ. 2,000 ಕೋಟಿ ವ್ಯಯಿಸುತ್ತಿದ್ದರೂ ಪಾಲಿಕೆ ಘನತ್ಯಾಜ್ಯ ಬಳಕೆದಾರರ ಶುಲ್ಕವನ್ನು ವಿಧಿಸಲು ಬಯಸಿದೆ. ನಮ್ಮ ನಗರ ಅಥವಾ ಯಾವುದೇ ವಾರ್ಡ್‌ಗಳು ರಸ್ತೆಗಳು, ಚರಂಡಿಗಳು ಮತ್ತು ಇತರ ನಾಗರಿಕ ಮೂಲಸೌಕರ್ಯಗಳ ನಿರ್ವಹಣೆ ಮತ್ತು ನಿರ್ವಹಣೆಗಾಗಿ ಪ್ರತಿ ವರ್ಷ 10,000 ಕೋಟಿ ರೂ.ಗಳನ್ನು ವ್ಯಯಿಸುತ್ತಿರುವಂತೆ ತೋರುತ್ತಿದೆಯೇ? ಇಷ್ಟೆಲ್ಲ ಹಣ ಎಲ್ಲಿಗೆ ಹೋಗುತ್ತಿದೆ ಮತ್ತು ಇಷ್ಟೊಂದು ಹಣ ಹೋಗುತ್ತಿದ್ದರೂ ನಮ್ಮ ನಾಗರಿಕ ಸೌಲಭ್ಯಗಳು ಏಕೆ ದಯನೀಯ ಸ್ಥಿತಿಯಲ್ಲಿವೆ? ಪ್ರಶ್ನಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com