ಐಸ್ ಕ್ರೀಮ್‌ ನಲ್ಲಿ ಡಿಟರ್ಜೆಂಟ್; ಕೂಲ್ ಡ್ರಿಂಕ್ಸ್ ನಲ್ಲಿ ಮೂಳೆ ದುರ್ಬಲಗೊಳಿಸುವ ಫಾಸ್ಪರಿಕ್ ಆಮ್ಲ: FDA ಅಧಿಕಾರಿಗಳಿಂದ ಪರಿಶೀಲನೆ

ರಾಜ್ಯದ 220 ಅಂಗಡಿಗಳಲ್ಲಿ 97 ಅಂಗಡಿಗಳಿಗೆ ನೋಟಿಸ್ ನೀಡಲಾಗಿದೆ ಮತ್ತು ಇತರ ಅಂಗಡಿಗಳಿಗೆ ಸರಿಯಾದ ಶೇಖರಣಾ ಪರಿಸ್ಥಿತಿಗಳನ್ನು ಕಾಯ್ದುಕೊಳ್ಳಲು ವಿಫಲವಾದ ಕಾರಣ ಎಚ್ಚರಿಕೆ ನೀಡಲಾಗಿದೆ.
Representational image
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಸ್ವಚ್ಛತೆ ಮತ್ತು ಕಳಪೆ ಗುಣಮಟ್ಟದ ಉತ್ಪನ್ನಗಳನ್ನು ಬಳಸಿ ಐಸ್ ಕ್ರೀಂ ಮತ್ತು ತಂಪು ಪಾನೀಯ ತಯಾರಿಸುತ್ತಿರುವ ಆರೋಪದ ಮೇಲೆ ತಯಾರಿಕಾ ಘಟಕಗಳ ಮೇಲೆ ದಾಳಿ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ದಾಳಿ ನಡೆಸಿದೆ.

ರಾಜ್ಯದ 220 ಅಂಗಡಿಗಳಲ್ಲಿ 97 ಅಂಗಡಿಗಳಿಗೆ ನೋಟಿಸ್ ನೀಡಲಾಗಿದೆ ಮತ್ತು ಇತರ ಅಂಗಡಿಗಳಿಗೆ ಸರಿಯಾದ ಶೇಖರಣಾ ಪರಿಸ್ಥಿತಿಗಳನ್ನು ಕಾಯ್ದುಕೊಳ್ಳಲು ವಿಫಲವಾದ ಕಾರಣ ಎಚ್ಚರಿಕೆ ನೀಡಲಾಗಿದೆ ಎಂದು ಎಫ್‌ಡಿಎಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಪಾಸಣೆಯಲ್ಲಿ ಆಘಾತಕಾರಿ ಉಲ್ಲಂಘನೆಗಳು ಪತ್ತೆಯಾಗಿವೆ. ಐಸ್ ಕ್ರೀಮ್‌ಗಳಲ್ಲಿ ಕೆನೆ ಬಣ್ಣದ ವಿನ್ಯಾಸವನ್ನು ರಚಿಸಲು ಡಿಟರ್ಜೆಂಟ್ ಪೌಡರ್ ಅನ್ನು ಬಳಸಲಾಗುತ್ತಿತ್ತು. ಕೂಲ್ ಡ್ರಿಂಕ್‌ಗಳಲ್ಲಿ ಮೂಳೆಗಳನ್ನು ದುರ್ಬಲಗೊಳಿಸುವ ಫಾಸ್ಪರಿಕ್ ಆಮ್ಲ ಹಾಗೂ ಫಿಜ್ ಅನ್ನು ಹೆಚ್ಚಿಸಲು ಬಳಸಲಾಗುತ್ತಿತ್ತು ಎಂದು ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ. ಇಲಾಖೆಯು ಒಟ್ಟು 38,000 ರೂ. ದಂಡ ವಿಧಿಸಿದೆ ಎಂದು ಹೇಳಿದರು.

ಮಕ್ಕಳು ಸಾಮಾನ್ಯವಾಗಿ ಸೇವಿಸುವ ಆಹಾರದ ಗುಣಮಟ್ಟ ಮತ್ತು ತಯಾರಿಕೆಯ ವಿಧಾನಗಳನ್ನು ನಿರ್ಣಯಿಸುವ ಪ್ರಯತ್ನಗಳ ಭಾಗವಾಗಿ, ಇಲಾಖೆಯು ಎರಡು ದಿನಗಳಲ್ಲಿ ತಪಾಸಣೆ ನಡೆಸಿತು. ಐಸ್ ಕ್ರೀಮ್‌ಗಳು ಮತ್ತು ತಂಪು ಪಾನೀಯಗಳನ್ನು ಉತ್ಪಾದಿಸುವಲ್ಲಿ ತೊಡಗಿರುವ ಎಲ್ಲಾ ಸ್ಥಳೀಯ ಉತ್ಪಾದನಾ ಘಟಕಗಳನ್ನು ಅಧಿಕಾರಿಗಳು ಪರಿಶೀಲಿಸಿದರು.

Representational image
ಐಸ್ ಕ್ರೀಂ, ಕೂಲ್ ಡ್ರಿಂಕ್ಸ್ ಘಟಕಗಳ ಮೇಲೆ ಆಹಾರ ಇಲಾಖೆ ಅಧಿಕಾರಿಗಳ ದಾಳಿ: ಪನ್ನೀರ್ ನಲ್ಲಿ ಬ್ಯಾಕ್ಟೀರಿಯಾ ಅಂಶ ಪತ್ತೆ

ತಪಾಸಣೆಯ ಸಮಯದಲ್ಲಿ, ಕೆಲವು ಸ್ಥಳಗಳಲ್ಲಿ ನೈರ್ಮಲ್ಯವಿಲ್ಲದ ಮತ್ತು ಕಳಪೆ ನಿರ್ವಹಣೆಯ ಶೇಖರಣೆ ಮಾಡಿರುವುದನ್ನು ಕಂಡು ಹಿಡಿದಿದ್ದಾರೆ. ಹಲವಾರು ಸಂದರ್ಭಗಳಲ್ಲಿ, ತಯಾರಕರು ವೆಚ್ಚವನ್ನು ಕಡಿಮೆ ಮಾಡಲು ಡಿಟರ್ಜೆಂಟ್, ಯೂರಿಯಾ ಅಥವಾ ಪಿಷ್ಟದಿಂದ ತಯಾರಿಸಿದ ಸಂಶ್ಲೇಷಿತ ಹಾಲನ್ನು ಬಳಸುತ್ತಿದ್ದರು. ನೈಸರ್ಗಿಕ ಸಕ್ಕರೆಯ ಬದಲಿಗೆ, ರುಚಿ ಮತ್ತು ಬಣ್ಣವನ್ನು ಹೆಚ್ಚಿಸಲು ಸ್ಯಾಕ್ರರಿನ್ ಮತ್ತು ಅನುಮತಿಸದ ಬಣ್ಣಗಳಂತಹ ಹಾನಿಕಾರಕ ವಸ್ತುಗಳನ್ನು ಸೇರಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಐಸ್ ಕ್ಯಾಂಡಿಗಳು ಮತ್ತು ಕೂಲ್ ಡ್ರಿಂಕ್‌ಗಳಲ್ಲಿ ಕಲುಷಿತ ಅಥವಾ ಕುಡಿಯಲು ಯೋಗ್ಯವಲ್ಲದ ನೀರನ್ನು ಬಳಸುತ್ತಿವೆ ಅಥವಾ ಅನುಮತಿಸಲಾದ ಮಿತಿಗಳನ್ನು ಮೀರಿದ ಪ್ರಮಾಣದಲ್ಲಿ ಸುವಾಸನೆ ನೀಡುವ ವಸ್ತುಗಳನ್ನು ಸೇರಿಸುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಉತ್ಪನ್ನಗಳಲ್ಲಿ ಬಳಸಲಾಗುವ ಫ್ಲೇವರ್‌ಗಳು, ಎಸೆನ್ಸ್‌ಗಳು ಮತ್ತು ಬಣ್ಣಗಳನ್ನು ಹೆಚ್ಚಾಗಿ ಮಾನ್ಯತೆ ಪಡೆದ ಅಥವಾ ಅನುಮೋದಿತ ಪೂರೈಕೆದಾರರಿಂದ ಪಡೆಯಲಾಗುವುದಿಲ್ಲ ಎಂದು ಇಲಾಖೆಯ ಅಧಿಕಾರಿಗಳು ವಿವರಿಸಿದ್ದಾರೆ.

ರೆಸ್ಟೋರೆಂಟ್‌ಗಳು, ಮೆಸ್‌ಗಳು ಮತ್ತು ಹೋಟೆಲ್‌ಗಳು ಸೇರಿದಂತೆ 590 ಘಟಕಗಳಲ್ಲಿ ತಪಾಸಣೆಯನ್ನು ಇಲಾಖೆ ಪೂರ್ಣಗೊಳಿಸಿದೆ. 214 ಹೋಟೆಲ್‌ಗಳು ಸರಿಯಾದ ಕೀಟ ನಿಯಂತ್ರಣ ಕ್ರಮಗಳನ್ನು ಹೊಂದಿಲ್ಲ ಎಂದು ಅಧಿಕಾರಿಗಳ ಗಮನಕ್ಕೆ ಬಂದ ಪರಿಣಾಮವಾಗಿ, 1,15,000 ರೂ. ದಂಡ ವಿಧಿಸಲಾಯಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com