ಜಾತಿ ಸಮೀಕ್ಷೆ ಕುರಿತು ಕೇಂದ್ರ ಸರ್ಕಾರದ ನಿರ್ಧಾರದಿಂದ ಸಂತಸ ತಂದಿದೆ: ಜಯಪ್ರಕಾಶ್ ಹೆಗ್ಡೆ

ಬಿಜೆಪಿ ನಮ್ಮ ಸಮೀಕ್ಷಾ ವರದಿಯನ್ನು ಒಪ್ಪುತ್ತಿಲ್ಲ. ಅವರು ಒಪ್ಪಿದ್ದೇ ಆದರೆ, ಅದನ್ನು ತಕ್ಷಣವೇ ಸರ್ಕಾರಕ್ಕೆ ಹಸ್ತಾಂತರಿಸುತ್ತಿದ್ದೆವು.
ಜಯಪ್ರಕಾಶ್ ಹೆಗ್ಡೆ(ಸಂಗ್ರಹ ಚಿತ್ರ)
ಜಯಪ್ರಕಾಶ್ ಹೆಗ್ಡೆ(ಸಂಗ್ರಹ ಚಿತ್ರ)
Updated on

ಉಡುಪಿ: ಜನಸಂಖ್ಯಾ ಸಮೀಕ್ಷೆಯೊಂದಿಗೆ ಜಾತಿ ಜನಗಣತಿ ನಡೆಸುವಂತೆ ರಾಹುಲ್ ಗಾಂಧಿಯವರು ಬಹಳ ಹಿಂದಿನಿಂದಲೂ ಆಗ್ರಹಿಸುತ್ತಲೇ ಬಂದಿದ್ದರು. ಇದೀಗ ಕೇಂದ್ರ ಸರ್ಕಾರ ಈ ಬಗ್ಗೆ ನಿರ್ಧಾರ ಕೈಗೊಂಡಿರುವುದು ಸಂತಸ ತಂದಿದೆ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಅವರು ಹೇಳಿದ್ದಾರೆ.

ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಸಾಮಾಜಿಕ-ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ನಡೆಸಿದ್ದೇವೆ. ಜಾತಿ ಜನಗಣತಿಯ ಆಧಾರದ ಮೇಲೆ ಮಾತ್ರ ಮೀಸಲಾತಿ ನೀಡುವುದು ಸವಾಲಿನ ಕೆಲಸ. ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಗಳನ್ನು ಅರ್ಥಮಾಡಿಕೊಳ್ಳುವುದರಿಂದ ಮೀಸಲಾತಿ ಹಂಚಿಕೆ ಮತ್ತು ವ್ಯಕ್ತಿಗಳು ಯಾವ ವರ್ಗಕ್ಕೆ ಸೇರಿದವರು ಎಂಬುದನ್ನು ನಿರ್ಧರಿಸುವುದು ಸುಲಭವಾಗುತ್ತದೆ. ಕೇಂದ್ರ ಸರ್ಕಾರ ತೆಗೆದುಕೊಂಡ ನಿರ್ಧಾರ ಸಂತಸ ತಂದಿದೆ. ಬಿಜೆಪಿ ಹೈಕಮಾಂಡ್ ಒಪ್ಪಿದ್ದು, ರಾಜ್ಯ ಬಿಜೆಪಿ ಕೂಡ ಅದನ್ನು ಪಾಲಿಸಬೇಕು ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರ ಸಂಪುಟದಲ್ಲಿ ನಿರ್ಧಾರ ತೆಗೆದುಕೊಂಡಿದೆ. ರಾಜ್ಯದ ಜಾತಿ ಜನಗಣತಿ ವರದಿಯ ಕುರಿತು ಸಂಪುಟ ಏನು ನಿರ್ಧರಿಸುತ್ತದೆ ಎಂಬುದನ್ನು ಕಾದು ನೋಡೋಣ ಎಂದು ತಿಳಿಸಿದರು.

ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಜಯಪ್ರಕಾಶ್ ಹೆಗ್ಡೆ ಅವರ ಸಮೀಕ್ಷಾ ವರದಿಯನ್ನು ವಿಧಾನಸಭೆಯ ಮುಂದೆ ಮಂಡಿಸಲಾಗುವುದು ಎಂದು ಹೇಳಿದ್ದರು. ಆದರೆ, ಬಿಜೆಪಿ ನಮ್ಮ ಸಮೀಕ್ಷಾ ವರದಿಯನ್ನು ಒಪ್ಪುತ್ತಿಲ್ಲ. ಅವರು ಒಪ್ಪಿದ್ದೇ ಆದರೆ, ಅದನ್ನು ತಕ್ಷಣವೇ ಸರ್ಕಾರಕ್ಕೆ ಹಸ್ತಾಂತರಿಸುತ್ತಿದ್ದೆವು. ಎಚ್. ಕಾಂತರಾಜು ಅವರು ಸಂಗ್ರಹಿಸಿದ ದತ್ತಾಂಶವನ್ನು ಆಧರಿಸಿ ನಾವು ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿದ್ದೇವೆ. ಮುಂದಿನ ನಿರ್ಧಾರ ಸರ್ಕಾರಕ್ಕೆ ಬಿಟ್ಟದ್ದು ಎಂದು ಹೇಳಿದ್ದಾರೆ.

ಜಯಪ್ರಕಾಶ್ ಹೆಗ್ಡೆ(ಸಂಗ್ರಹ ಚಿತ್ರ)
ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಸೇವಾವಧಿ ಎರಡು ತಿಂಗಳು ವಿಸ್ತರಣೆ

ರಾಷ್ಟ್ರೀಯ ಜನಗಣತಿಯನ್ನು 2011 ರಲ್ಲಿ ನಡೆಸಲಾಗಿತ್ತು. ಈಗ 2025ನೇ ವರ್ಷ. ಈ ಅವಧಿಯಲ್ಲಿ ಅನೇಕ ಚುನಾವಣೆಗಳು ನಡೆದಿತೆ. ನಾವು ನಮ್ಮ ಜವಾಬ್ದಾರಿಯನ್ನು ಪೂರೈಸಿದ್ದೇವೆ, ನಿರ್ಧಾರ ತೆಗೆದುಕೊಳ್ಳುವುದು ಸರ್ಕಾರಕ್ಕೆ ಬಿಟ್ಟದ್ದು. ವರದಿ ಮಂಡನೆಗಾಗಿ ನಾವು ಕಾಯುತ್ತಿದ್ದೇವೆಯ ರಾಜ್ಯ ಸಚಿವ ಸಂಪುಟವು ಅದನ್ನು ಅನುಮೋದಿಸಿ ಅಂಗೀಕರಿಸಿದ ನಂತರ, ಸರ್ಕಾರವು ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು.

ಕರ್ನಾಟಕ ಮಾದರಿಯನ್ನು ಅನುಸರಿಸಿ ಜನಗಣತಿಯನ್ನು ನಡೆಸುವಂತೆ ಎಲ್ಲಾ ರಾಜ್ಯಗಳಿಗೂ ನಾನು ಒತ್ತಾಯಿಸುತ್ತೇನೆ. ಸಾಮಾಜಿಕ-ಆರ್ಥಿಕ ಶೈಕ್ಷಣಿಕ ಪರಿಸ್ಥಿತಿಗಳನ್ನು ಸಾರ್ವಜನಿಕಗೊಳಿಸಬೇಕು. ಇದರಿಂದ ಸಣ್ಣ ಜಾತಿಗಳು ಕೂಡ ಪ್ರಯೋಜನಗಳನ್ನು ಪಡೆಯಬೇಕು. ಸಮಾನ ಸಮಾಜವನ್ನು ನಿರ್ಮಿಸಲು ವರದಿಯನ್ನು ಕಾರ್ಯಗತಗೊಳಿಸುವುದು ಅವಶ್ಯಕ. ಜಾತಿ ಜನಗಣತಿಯಲ್ಲಿ ಕೇಂದ್ರ ಸರ್ಕಾರವು ಯಾವ ವಿಭಾಗಗಳನ್ನು ಸಮೀಕ್ಷೆ ಮಾಡುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ. ನಮ್ಮ ಜನಗಣತಿ ಮತ್ತು ಅವರ ಜನಗಣತಿಯ ನಡುವೆ ವ್ಯತ್ಯಾಸಗಳಿದ್ದರೆ, ನವೀಕರಿಸುವ ಅವಕಾಶಗಳಿವೆ ಎಂದು ಹೇಳಿದರು.

ಬಳಿಕ ಪಹಲ್ಗಾಮ್ ಉಗ್ರರ ದಾಳಿ ಕುರಿತು ಮಾತನಾಡಿದ ಅವರು, ಇಡೀ ರಾಷ್ಟ್ರ ಸರ್ಕಾರದ ಜೊತೆಗೆ ಒಗ್ಗಟ್ಟಾಗಿ ನಿಂತಿದೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com