ಕಡಿಮೆ ಮಳೆಗೂ ತತ್ತರಿಸುವ ಬೆಂಗಳೂರು: ಪ್ರವಾಹಕ್ಕೆ ಅಂಡರ್‏ಗ್ರೌಂಡ್ ಕಾಂಕ್ರೀಟ್ ಪದರ ಕಾರಣ!

ಭೂಮಿಯ ಕೆಳಗೆ 30 ರಿಂದ 40 ಅಡಿ ಆಳದ ಕಾಂಕ್ರೀಟ್ ಪದರವೂ ಕಾರಣವಾಗಿವೆ. ಇದು ಮಳೆನೀರು ಭೂಮಿಯೊಳಗೆ ಇಳಿಯುವುದನ್ನು ತಡೆಯುತ್ತದೆ. ಹೀಗಾಗಿ ನಗರದ ವಿವಿಧ ಭಾಗಗಳಲ್ಲಿ ಪ್ರವಾಹಕ್ಕೆ ಕಾರಣವಾಗಿದೆ .
Representational image
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಮುಂಬರುವ ವರ್ಷಗಳಲ್ಲಿ ಭಾರೀ ಮಳೆಯಾದಾಗಲೆಲ್ಲಾ ರಾಜ್ಯ ರಾಜಧಾನಿಯನ್ನು ಪ್ರವಾಹದ ಸಮಸ್ಯೆ ಕಾಡುವ ಸಾಧ್ಯತೆಯಿದೆ, ಏಕೆಂದರೆ ದಶಕದಲ್ಲಿ ಅನಿಯಂತ್ರಿತ ನಿರ್ಮಾಣ ಚಟುವಟಿಕೆಗಳು, ವಿಶೇಷವಾಗಿ ಎತ್ತರದ ಕಟ್ಟಡಗಳು, ಹಾಗೂ ಭೂಮಿಯ ಕೆಳಗೆ 30 ರಿಂದ 40 ಅಡಿ ಆಳದ ಕಾಂಕ್ರೀಟ್ ಪದರವೂ ಕಾರಣವಾಗಿವೆ.

ಇದು ಮಳೆನೀರು ಭೂಮಿಯೊಳಗೆ ಇಳಿಯುವುದನ್ನು ತಡೆಯುತ್ತದೆ. ಹೀಗಾಗಿ ನಗರದ ವಿವಿಧ ಭಾಗಗಳಲ್ಲಿ ಪ್ರವಾಹಕ್ಕೆ ಕಾರಣವಾಗಿದೆ ಎಂದು ಭೂವಿಜ್ಞಾನಿಗಳು ಮತ್ತು ತಜ್ಞರು ಹೇಳಿದ್ದಾರೆ. ಇದರ ಜೊತೆಗೆ ಕಾಂಕ್ರೀಟ್ ಪದರದ ಹೆಚ್ಚುತ್ತಿರುವ ವಿಸ್ತಾರವು ಬೆಂಗಳೂರಿನಾದ್ಯಂತ ನೈಸರ್ಗಿಕ ಇಳಿಜಾರು ಮತ್ತು ಭೂಪ್ರದೇಶವನ್ನು ಬದಲಾಯಿಸುತ್ತಿದೆ.

ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಭೂ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಸಜೀವ್ ಕೃಷ್ಣನ್, ವಸತಿ ಅಥವಾ ವಾಣಿಜ್ಯ ಕಟ್ಟಡಗಳು ಈಗ ಆಳವಾದ ಅಡಿಪಾಯಗಳನ್ನು ಮಾತ್ರವಲ್ಲದೆ ಬಹು-ಹಂತದ ನೆಲಮಾಳಿಗೆಯ (ಭೂಗತ) ಕಾರು ಪಾರ್ಕಿಂಗ್ ಸೌಲಭ್ಯಗಳನ್ನು ಹೊಂದಿವೆ ಎಂದು ಹೇಳಿದರು. ಈ ಅಡಿಪಾಯಗಳು ಮತ್ತು ಭೂಗತ ಪಾರ್ಕಿಂಗ್ ಸ್ಥಳಗಳು ಅಣೆಕಟ್ಟುಗಳಾಗಿ ಕಾರ್ಯನಿರ್ವಹಿಸುತ್ತವೆ, ಇದು ನೀರಿನ ಸೋರಿಕೆಯ ಮೇಲೆ ಪರಿಣಾಮ ಬೀರುತ್ತದೆ. ಇದು ನಗರ ಪ್ರವಾಹಕ್ಕೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ.

ಬೆಂಗಳೂರು ಸಮುದ್ರ ಮಟ್ಟದಿಂದ ಸುಮಾರು 1,000 ಮೀಟರ್ ಎತ್ತರದಲ್ಲಿದೆ, ಆದರೆ ಹೆಚ್ಚುತ್ತಿರುವ ನಿರ್ಮಾಣ ಚಟುವಟಿಕೆಯು ನೈಸರ್ಗಿಕ ಭೂ ಸ್ವರೂಪವನ್ನು ಬದಲಾಯಿಸಿದೆ ಎಂದು ಕೃಷ್ಣನ್ ಗಮನಸೆಳೆದರು. ಬೆಂಗಳೂರಿನ ಹಳೆಯ ಎತ್ತರದ ಕಟ್ಟಡಗಳು ಪ್ರಸ್ತುತತೆಯನ್ನು ಕಳೆದುಕೊಂಡಿರುವುದರಿಂದ ಇಂದಿನ ಎತ್ತರದ ಮಟ್ಟವನ್ನು ಖಚಿತಪಡಿಸಿಕೊಳ್ಳುವ ತುರ್ತು ಅವಶ್ಯಕತೆಯಿದೆ ಎಂದು ಅವರು ಹೇಳಿದರು.

Representational image
Heavy rains in Bengaluru: ಬೆಂಗಳೂರಿನಲ್ಲಿ ಭಾರಿ ಮಳೆ, ಜನಜೀವನ ಅಸ್ತವ್ಯಸ್ಥ; ಇನ್ನೂ 3 ದಿನ ವರ್ಷಧಾರೆ ಸಾಧ್ಯತೆ

ಬೆಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಭೂವಿಜ್ಞಾನ ಪ್ರಾಧ್ಯಾಪಕ ಟಿ.ಜೆ. ರೇಣುಕಾ ಪ್ರಸಾದ್ ಮಾತನಾಡಿ, ಈ ಕಾಂಕ್ರೀಟ್ ಪದರವು ಹೆಚ್ಚಿದ ಮತ್ತು ಯೋಜಿತವಲ್ಲದ ನಗರೀಕರಣದ ಪರಿಣಾಮವಾಗಿದೆ ಎಂದು ಹೇಳಿದರು. ತಂತ್ರಜ್ಞಾನದ ಬಳಕೆಯಿಂದಾಗಿ ಬೆಂಗಳೂರು ಬಲಿಯಾಗಿದೆ. ಭೂಗತ ಕಾಂಕ್ರೀಟ್ ಪದರವು ನೈಸರ್ಗಿಕ ಭೂಗತ ಜಲಚರಗಳ ಮೇಲೆ ಪರಿಣಾಮ ಬೀರುತ್ತಿದೆ. ಅಂತರ್ಜಲ ಮರುಪೂರಣವನ್ನು ನಿರ್ಬಂಧಿಸುತ್ತಿದೆ ಎಂದು ಅವರು ಹೇಳಿದರು. ಇದು ಭೂಮಿಯ ನೈಸರ್ಗಿಕ ಬಿರುಕುಗಳ ಮೇಲೂ ಪರಿಣಾಮ ಬೀರುತ್ತಿದೆ, ಇದರಿಂದಾಗಿ ಹಾನಿಯನ್ನು ಸರಿಪಡಿಸದಂತಾಗಿದೆ.

ಇದು ಗಂಭೀರ ಸಮಸ್ಯೆಯಾಗಿದ್ದರೂ, ಬೆಂಗಳೂರು ನಗರ ಮತ್ತು ಅದರ ಹೊರವಲಯದಲ್ಲಿರುವ ಎತ್ತರದ ನಿರ್ಮಾಣದ ಸಂಖ್ಯೆಯ ಬಗ್ಗೆ ಯಾವುದೇ ದಾಖಲೆಗಳಿಲ್ಲ ಎಂದು ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ಒಪ್ಪಿಕೊಳ್ಳುತ್ತಾರೆ. ವಿಮಾನಯಾನ ಅಥವಾ ರಕ್ಷಣಾ ವ್ಯಾಪ್ತಿಗೆ ಬರದ ಹೊರತು, ಕಟ್ಟಡಗಳ ಎತ್ತರದ ಮೇಲೆ ಯಾವುದೇ ಮಿತಿಯಿಲ್ಲ. ಒಂದು ನಗರವು ಎಷ್ಟು ಎತ್ತರದ ಕಟ್ಟಡಗಳ ನಿರ್ಮಾಣವನ್ನು ಹೊಂದಬಹುದು ಎಂಬುದನ್ನು ಖಚಿತಪಡಿಸಿಕೊಳ್ಳಲು ಯಾವುದೇ ವಿಧಾನವಿಲ್ಲ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಪಟ್ಟಣ ಯೋಜನಾ ಹೆಚ್ಚುವರಿ ನಿರ್ದೇಶಕ ಬಿಎನ್ ಗಿರೀಶ್ ಮಾತನಾಡಿ, ಪಾಲಿಕೆ ತನ್ನ ಮಿತಿಯಲ್ಲಿ ಕಟ್ಟಡಗಳ ಬಗ್ಗೆ ನಿಖರವಾದ ಸಂಖ್ಯೆ ಹೊಂದಿಲ್ಲ ಎಂದು ಹೇಳಿದರು. ಪಾಲಿಕೆಯು ಆಕ್ಯುಪೆನ್ಸಿ ಪ್ರಮಾಣಪತ್ರಗಳು ಮತ್ತು ಇತರ ಅನುಮತಿಗಳನ್ನು ನೀಡುವುದಕ್ಕೆ ಮಾತ್ರ ಸೀಮಿತವಾಗಿದೆ ಎಂದಿದ್ದಾರೆ.

ಬಿಬಿಎಂಪಿಯ ಕಂದಾಯ ಮತ್ತು ಐಟಿ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ಮಾತನಾಡಿ, ಬೆಂಗಳೂರಿನಲ್ಲಿ ಸುಮಾರು ಏಳು ಲಕ್ಷ ಬಹುಮಹಡಿ ಘಟಕಗಳಿವೆ ಎಂದು ಹೇಳಿದರು. ಆದರೆ ನಗರದಲ್ಲಿ ಎತ್ತರದ ಕಟ್ಟಡಗಳ ಸಂಖ್ಯೆ ತಿಳಿದಿಲ್ಲ. ಏತನ್ಮಧ್ಯೆ, ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ (ಕೆ-ರೇರಾ) ಅಧ್ಯಕ್ಷ ರಾಕೇಶ್ ಸಿಂಗ್ ಮಾತನಾಡಿ 2017 ರಿಂದ, ಎತ್ತರವಾದ ಕಟ್ಟಡ ರಚನೆಗಳಿಗೆ 4,000 ಕ್ಕೂ ಹೆಚ್ಚು ಅನುಮೋದನೆಗಳನ್ನು ನೀಡಲಾಗಿದೆ ಎಂದು ಹೇಳಿದರು. ಶೇ. 75 ರಷ್ಟು ರಚನೆಗಳ ಕೆಲಸ ಪೂರ್ಣಗೊಂಡಿದೆ. ಈ ರಚನೆಗಳಲ್ಲಿ ಸುಮಾರು ಶೇ. 95 ವಸತಿ ಕಟ್ಟಡಗಳಾಗಿವೆ ಎಂದು ಮಾಹಿತಿ ನೀಡಿದ್ದಾರೆ.

ಸರ್ಕಾರ ಮತ್ತು ಬಿಲ್ಡರ್‌ಗಳು ಈಗ ಆಳವಾದ ಗುಂಡಿಗಳನ್ನು ರಚಿಸಲು ಮತ್ತು ಮಳೆನೀರು ಕೊಯ್ಲು ನಿಯಮಗಳನ್ನು ಕಡ್ಡಾಯವಾಗಿ ಜಾರಿಗೆ ತರುವಂತೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿವೃತ್ತ ಅಧಿಕಾರಿಯೂ, ಈಗ ಕೇಂದ್ರ ಅಂತರ್ಜಲ ಮಂಡಳಿಯ ಸಲಹೆಗಾರರೂ ಆಗಿರುವ ಆರ್. ಬಾಬು, ಹೇಳಿದರು. ನಗರದ ಅನೇಕ ಪ್ರದೇಶಗಳನ್ನು 'ಜಲ ಶೂನ್ಯ ಪ್ರದೇಶಗಳು' ಎಂದು ಘೋಷಿಸಿರುವುದರಿಂದ ಈಗ ನೀರಿನ ಸಂಗ್ರಹಣೆಯತ್ತ ಗಮನ ಹರಿಸಬೇಕು ಎಂದು ಸಲಹೆ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com