ಭಾರತ-ಪಾಕಿಸ್ತಾನ ಉದ್ವಿಗ್ನತೆ: ಸಹಜ ಸ್ಥಿತಿ ಮರಳುವವರೆಗೆ ಪೊಲೀಸರಿಗೆ ರಜೆ ನೀಡಲ್ಲ- ಜಿ ಪರಮೇಶ್ವರ

ಕರಾವಳಿ ಪ್ರದೇಶದಲ್ಲಿ ಪೊಲೀಸ್, ಬಂದರುಗಳಿಂದ ನಿಯೋಜಿಸಲಾಗಿರುವ ಭದ್ರತೆ ಮತ್ತು ಭಾರತೀಯ ನೌಕಾಪಡೆ ಸೇರಿದಂತೆ ಮೂರು ಹಂತದ ಭದ್ರತೆಯನ್ನು ಒದಗಿಸಲಾಗಿದೆ. ಯಾವುದೇ ಪರಿಸ್ಥಿತಿಯನ್ನು ಎದುರಿಸಲು ರಾಜ್ಯ ಸರ್ಕಾರ ಕೈಗೊಂಡಿರುವ ಸಿದ್ಧತೆಯನ್ನು ಪರಿಶೀಲಿಸಲು ಸಿದ್ದರಾಮಯ್ಯ ಅವರು ಸಭೆ ನಡೆಸಲಿದ್ದಾರೆ.
ಗೃಹ ಸಚಿವ ಜಿ ಪರಮೇಶ್ವರ
ಗೃಹ ಸಚಿವ ಜಿ ಪರಮೇಶ್ವರ
Updated on

ಬೆಂಗಳೂರು: ಭಾರತ ಮತ್ತು ಪಾಕಿಸ್ತಾನ ಉದ್ವಿಗ್ನತೆ ಹೆಚ್ಚಳವಾಗಿದ್ದು, ದೇಶದಲ್ಲಿನ ಸದ್ಯದ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುವವರೆಗೆ ಪೊಲೀಸರಿಗೆ ರಜೆ ನೀಡುವುದಿಲ್ಲ ಎಂದು ಗೃಹ ಸಚಿವ ಜಿ ಪರಮೇಶ್ವರ ಶನಿವಾರ ತಿಳಿಸಿದ್ದಾರೆ.

'ಸಿದ್ಧತೆಯನ್ನು ಪರಿಶೀಲಿಸಲು ಮುಖ್ಯಮಂತ್ರಿ ಇಂದು ಸಂಜೆ ವಿಶೇಷ ಸಭೆ ನಡೆಸಲಿದ್ದಾರೆ. ಈ ಸಮಯದಲ್ಲಿ ಪೊಲೀಸರ ಯಾವುದೇ ರಜೆಯನ್ನು ನಾವು ಅನುಮೋದಿಸುವುದಿಲ್ಲ. ಏಕೆಂದರೆ, ಸಾಮಾನ್ಯ ಸ್ಥಿತಿ ಯಾವಾಗ ಮರಳುತ್ತದೆ ಎಂಬುದು ನಮಗೆ ತಿಳಿದಿಲ್ಲ. ಸಾಮಾನ್ಯ ಸ್ಥಿತಿ ಯಾವಾಗ ಮರಳುತ್ತದೆ ಎಂದು ಕೇಂದ್ರವು ನಮಗೆ ತಿಳಿಸುತ್ತದೆ. ಅಲ್ಲಿಯವರೆಗೆ ನಾವು ಜಾಗರೂಕರಾಗಿರಬೇಕು' ಎಂದು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ರಾಜ್ಯ ಸರ್ಕಾರವು ಎಲ್ಲೆಡೆ, ವಿಶೇಷವಾಗಿ ಕರಾವಳಿ ಪ್ರದೇಶದಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕಿದೆ. ಯುದ್ಧದ ಸಮಯದಲ್ಲಿ ನಮ್ಮ ಹಿಂದಿನ ಅನುಭವದಿಂದ ಕಲಿತಿದ್ದೇವೆ. ಹೀಗಾಗಿ, ಕರಾವಳಿ ಪ್ರದೇಶಗಳಲ್ಲಿ ಭದ್ರತೆ ಬಲವಾಗಿರಬೇಕು. ಉತ್ತರ ಕನ್ನಡದಿಂದ ದಕ್ಷಿಣ ಕನ್ನಡದವರೆಗೆ ನಾವು ಸಂಪೂರ್ಣ ಕರಾವಳಿ ರೇಖೆಯ ಉದ್ದಕ್ಕೂ ಜಾಗರೂಕರಾಗಿರಬೇಕು' ಎಂದು ಸಚಿವರು ವಿವರಿಸಿದರು.

ಕರಾವಳಿ ಪ್ರದೇಶದಲ್ಲಿ ಪೊಲೀಸ್, ಬಂದರುಗಳಿಂದ ನಿಯೋಜಿಸಲಾಗಿರುವ ಭದ್ರತೆ ಮತ್ತು ಭಾರತೀಯ ನೌಕಾಪಡೆ ಸೇರಿದಂತೆ ಮೂರು ಹಂತದ ಭದ್ರತೆಯನ್ನು ಒದಗಿಸಲಾಗಿದೆ. ಯಾವುದೇ ಪರಿಸ್ಥಿತಿಯನ್ನು ಎದುರಿಸಲು ರಾಜ್ಯ ಸರ್ಕಾರ ಕೈಗೊಂಡಿರುವ ಸಿದ್ಧತೆಯನ್ನು ಪರಿಶೀಲಿಸಲು ಸಿದ್ದರಾಮಯ್ಯ ಅವರು ಗೃಹ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ ಎಂದು ಅವರು ಹೇಳಿದರು.

ಗೃಹ ಸಚಿವ ಜಿ ಪರಮೇಶ್ವರ
Watch | ಪಾಕಿಸ್ತಾನ ನಿರಂತರ ಶೆಲ್ ದಾಳಿ: ಜಮ್ಮು ನಾಗರಿಕ ಪ್ರದೇಶಗಳು ಹಾನಿ

ದೇಶದಲ್ಲಿ ಯುದ್ಧದಂತಹ ಪರಿಸ್ಥಿತಿ ಉಂಟಾದಾಗ ಉಂಟಾಗಬಹುದಾದ ಯಾವುದೇ ಬಿಕ್ಕಟ್ಟನ್ನು ಎದುರಿಸಲು ಅಗತ್ಯ ವಸ್ತುಗಳು ಮತ್ತು ಇತರ ಎಲ್ಲ ಸಲಕರಣೆಗಳ ಲಭ್ಯತೆಯನ್ನು ಮುಖ್ಯಮಂತ್ರಿ ಪರಿಶೀಲಿಸಲಿದ್ದಾರೆ. ಆಹಾರ ಧಾನ್ಯಗಳು, ಅಗತ್ಯ ವಸ್ತುಗಳು, ನೀರು, ಆಸ್ಪತ್ರೆಗಳು ಮತ್ತು ಔಷಧಿಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವಂತಹ ಎಲ್ಲ ಅಗತ್ಯ ವ್ಯವಸ್ಥೆಗಳನ್ನು ಮಾಡಬೇಕಾಗಿದೆ. ಇದು ಕೇವಲ ಸಿದ್ಧತೆಯಾಗಿದೆ ಎಂದು ಪರಮೇಶ್ವರ ಹೇಳಿದರು.

ಸಭೆಯಲ್ಲಿ ಮುಖ್ಯಮಂತ್ರಿಗಳು ಹಿಂದಿನ ದಿನ ಕೇಂದ್ರ ಸರ್ಕಾರದಿಂದ ಬಂದಿರಬಹುದಾದ ಯಾವುದೇ ಇತ್ತೀಚಿನ ಸಲಹೆಯ ಬಗ್ಗೆಯೂ ಚರ್ಚಿಸುತ್ತಾರೆ. ಕೇಂದ್ರವು ಎಲ್ಲ ರಾಜ್ಯ ಸರ್ಕಾರಗಳಿಗೆ ಮಾರ್ಗಸೂಚಿಗಳನ್ನು ನೀಡಿದೆ. ಅದರಂತೆ ಕರ್ನಾಟಕ ಸರ್ಕಾರ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಅವರು ಹೇಳಿದರು.

'ಸೂಕ್ಷ್ಮ ಸ್ಥಳಗಳಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಿದ್ದೇವೆ. ಅನುಮಾನಾಸ್ಪದ ಚಟುವಟಿಕೆಗಳು ನಡೆಯಬಹುದಾದ ಕೆಲವು ಸ್ಥಳಗಳನ್ನು ಸಹ ನಾವು ಗುರುತಿಸಿದ್ದೇವೆ. ರಾಜ್ಯದ ಎಲ್ಲ ಸ್ಥಳಗಳಲ್ಲು ನಾವು ತೀವ್ರ ಕಟ್ಟೆಚ್ಚರ ವಹಿಸಿದ್ದೇವೆ' ಎಂದು ಪರಮೇಶ್ವರ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com