ಆಮದು ಮಾಡಿಕೊಂಡ ಚಾಕೊಲೇಟ್‌ಗಳಲ್ಲಿ ಆಲ್ಕೋಹಾಲ್ ಅಂಶ; ಮಾದರಿಗಳ ಸಂಗ್ರಹಕ್ಕೆ FDA ಮುಂದು

ಈ ಚಾಕೊಲೇಟ್‌ಗಳನ್ನು ವ್ಯಾಪಕವಾಗಿ ಸೇವಿಸಲಾಗುತ್ತಿದ್ದು, ಇವುಗಳ ಲೇಬಲ್‌ಗಳಲ್ಲಿ ಗ್ರಾಹಕರಿಗೆ, ವಿಶೇಷವಾಗಿ ಮಕ್ಕಳಿಗೆ, ಚಾಕೊಲೇಟ್‌ಗಳಲ್ಲಿರುವ ಆಲ್ಕೋಹಾಲ್ ಅಂಶದ ಬಗ್ಗೆ ಎಚ್ಚರಿಕೆ ನೀಡಿಲ್ಲ ಎಂದು ಎಫ್‌ಡಿಎಯ ಹಿರಿಯ ಅಧಿಕಾರಿಯೊಬ್ಬರು ಟಿಎನ್‌ಐಇಗೆ ತಿಳಿಸಿದ್ದಾರೆ.
ಆಮದು ಮಾಡಿಕೊಂಡ ಚಾಕೊಲೇಟ್‌
ಆಮದು ಮಾಡಿಕೊಂಡ ಚಾಕೊಲೇಟ್‌
Updated on

ಬೆಂಗಳೂರು: ಆಮದು ಮಾಡಿಕೊಂಡ ಚಾಕೊಲೇಟ್‌ಗಳಲ್ಲಿ ಆಲ್ಕೋಹಾಲ್ ಅಂಶ ಇರುವ ಬಗ್ಗೆ ಕಳವಳ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ (ಎಫ್‌ಡಿಎ) ರಾಜ್ಯದಾದ್ಯಂತ ಆಮದು ಮಾಡಿಕೊಂಡ ಚಾಕೊಲೇಟ್‌ಗಳ ಮಾದರಿಗಳನ್ನು ಸಂಗ್ರಹಿಸಲು ಪ್ರಾರಂಭಿಸಿದೆ.

ಈ ಚಾಕೊಲೇಟ್‌ಗಳನ್ನು ವ್ಯಾಪಕವಾಗಿ ಸೇವಿಸಲಾಗುತ್ತಿದ್ದು, ಇವುಗಳ ಲೇಬಲ್‌ಗಳಲ್ಲಿ ಗ್ರಾಹಕರಿಗೆ, ವಿಶೇಷವಾಗಿ ಮಕ್ಕಳಿಗೆ, ಚಾಕೊಲೇಟ್‌ಗಳಲ್ಲಿರುವ ಆಲ್ಕೋಹಾಲ್ ಅಂಶದ ಬಗ್ಗೆ ಎಚ್ಚರಿಕೆ ನೀಡಿಲ್ಲ ಎಂದು ಎಫ್‌ಡಿಎಯ ಹಿರಿಯ ಅಧಿಕಾರಿಯೊಬ್ಬರು ಟಿಎನ್‌ಐಇಗೆ ತಿಳಿಸಿದ್ದಾರೆ.

ಇಲಾಖೆ ಈಗ ಲೇಬಲ್‌ಗಳ ಮೇಲೆ ಗಮನಹರಿಸುತ್ತಿದೆ. ವಿಶೇಷವಾಗಿ ಆಲ್ಕೋಹಾಲ್ ಅಂಶವಿರುವ ಬಗ್ಗೆ ಸ್ಪಷ್ಟ ಮಾಹಿತಿ ಬಹಿರಂಗಪಡಿಸದೆ ಮಾರಾಟವಾಗುವ ಉತ್ಪನ್ನಗಳಿಗೆ ಸಂಬಂಧಿಸಿದಂತೆ ನಿಗಾವಹಿಸಿದೆ. ರಾಷ್ಟ್ರೀಯ ವಾರ್ಷಿಕ ಕಣ್ಗಾವಲು ಯೋಜನೆಯ (NASP) ಭಾಗವಾಗಿ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ)ದ ನಿರ್ದೇಶನ ಪಡೆದ ನಂತರ ಇಲಾಖೆಯು ಈ ಅಭಿಯಾನವನ್ನು ಪ್ರಾರಂಭಿಸಿದೆ.

ನಿರ್ದೇಶನದ ಪ್ರಕಾರ, ಮಾಲಿನ್ಯ, ಕಲಬೆರಕೆ ಮತ್ತು ಲೇಬಲಿಂಗ್ ಮಾನದಂಡಗಳನ್ನು ಅನುಸರಿಸದಿರುವುದು ಸೇರಿದಂತೆ ಸಂಭಾವ್ಯ ಆಹಾರ ಸುರಕ್ಷತೆಯ ಅಪಾಯಗಳನ್ನು ಗುರುತಿಸಲು ಎಲ್ಲ ರಾಜ್ಯಗಳು ಮಾಸಿಕ ಉತ್ಪನ್ನ-ನಿರ್ದಿಷ್ಟ ಮಾದರಿ ಅಭಿಯಾನಗಳನ್ನು ನಡೆಸಬೇಕು. ಮೇ ತಿಂಗಳಿನಿಂದ, ದೇಶೀಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಯಾವುದೇ ಆಮದು ಮಾಡಿಕೊಂಡ ಆಹಾರದ ಐದು ಮಾದರಿಗಳನ್ನು ಸಂಗ್ರಹಿಸುವ ಕಾರ್ಯವನ್ನು ಆಹಾರ ಸುರಕ್ಷತಾ ಅಧಿಕಾರಿಗಳಿಗೆ ವಹಿಸಲಾಗಿದ್ದು, ಕರ್ನಾಟಕವು ಚಾಕೊಲೇಟ್ ಮಾದರಿಗಳನ್ನು ಸಂಗ್ರಹಿಸುವ ಮೂಲಕ ಈ ಅಭಿಯಾನವನ್ನು ಪ್ರಾರಂಭಿಸಿದೆ.

ಆಮದು ಮಾಡಿಕೊಂಡ ಚಾಕೊಲೇಟ್‌
ಇಡ್ಲಿ ಬೇಯಿಸಲು ಪ್ಲಾಸ್ಟಿಕ್ ಹಾಳೆಗಳ ಬಳಕೆ: ವರದಿ ಕೇಳಿದ FSSAI, ತನಿಖೆಗೆ ಸೂಚನೆ

ಈ ಮಾದರಿಗಳನ್ನು ಗುಣಮಟ್ಟ, ಸುರಕ್ಷತೆ ಮತ್ತು ಲೇಬಲಿಂಗ್ ಮತ್ತು ಜಾಹೀರಾತು ನಿಯಮಗಳ ಕುರಿತು ಪರೀಕ್ಷಿಸಲಾಗುತ್ತದೆ. ಸಂಗ್ರಹಿಸಿದ ಡೇಟಾವನ್ನು ಕೇಂದ್ರ ಆಹಾರ ಸುರಕ್ಷತಾ ಅನುಸರಣಾ ವ್ಯವಸ್ಥೆಗೆ (FoSCoS) ಅಪ್‌ಲೋಡ್ ಮಾಡಲಾಗುತ್ತದೆ. ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಬಳಸಿಕೊಳ್ಳಲಾಗುತ್ತದೆ ಎಂದು ತಿಳಿಸಲಾಗಿದೆ. ಇಲಾಖೆ ಇಲ್ಲಿಯವರೆಗೆ 23 ಮಾದರಿಗಳನ್ನು ಸಂಗ್ರಹಿಸಿದೆ.

ಚಾಕೊಲೇಟ್‌ಗಳಲ್ಲಿ ಆಲ್ಕೋಹಾಲ್ ಕಡ್ಡಾಯ ಘಟಕಾಂಶವಲ್ಲ. ಆದರೆ, ಕೆಲವು ವಿದೇಶಿ ಬ್ರ್ಯಾಂಡ್‌ಗಳು ಇದನ್ನು ರುಚಿಯನ್ನು ಹೆಚ್ಚಿಸಲು ಬಳಸುತ್ತವೆ. ವಿಶೇಷವಾಗಿ 'liqueur-filled ಅಥವಾ truffle varieties'ನಂತಹ ಚಾಕೊಲೇಟ್‌ಗಳಲ್ಲಿ ಬಳಸಲಾಗುತ್ತದೆ. ಅಂತಹ ಚಾಕೊಲೇಟ್‌ಗಳಲ್ಲಿ ಆಲ್ಕೋಹಾಲ್ ಅಂಶವು ಶೇ 1 ರಿಂದ 5 ರವರೆಗೆ ಇರುತ್ತದೆ. ಆಹಾರ ಸುರಕ್ಷತಾ ನಿಯಮಗಳ ಪ್ರಕಾರ, ಉತ್ಪನ್ನದ ಲೇಬಲ್‌ಗಳಲ್ಲಿ ಆಲ್ಕೋಹಾಲ್ ಅಂಶ ಇರುವಿಕೆಯನ್ನು ನಮೂದಿಸಬೇಕು. ಏಕೆಂದರೆ, ಮಕ್ಕಳು ಮತ್ತು ಕೆಲವು ಗುಂಪುಗಳು ಆಲ್ಕೋಹಾಲ್ ಸೇವಿಸುವುದನ್ನು ನಿಷೇಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

'ಅತಿಯಾದ ಅಥವಾ ಬಹಿರಂಗಪಡಿಸದ ಆಲ್ಕೋಹಾಲ್ ಅಂಶ ಸೇವನೆಯು ಆರೋಗ್ಯದ ಕೆಟ್ಟ ಪರಿಣಾಮವನ್ನುಂಟುಮಾಡುತ್ತದೆ ಮತ್ತು ಲೇಬಲಿಂಗ್ ಕಾನೂನುಗಳನ್ನು ಉಲ್ಲಂಘಿಸುತ್ತದೆ. ಎಲ್ಲ ಆಮದು ಮಾಡಿಕೊಂಡ ಚಾಕೊಲೇಟ್‌ಗಳು ಗ್ರಾಹಕರನ್ನು ರಕ್ಷಿಸಲು ಸುರಕ್ಷತೆ ಮತ್ತು ಲೇಬಲಿಂಗ್ ಮಾನದಂಡಗಳನ್ನು ಪೂರೈಸುತ್ತಿವೆಯೇ ಎಂದು ಖಚಿತಪಡಿಸಿಕೊಳ್ಳುವ ಗುರಿಯನ್ನು ಈ ಪರೀಕ್ಷೆಗಳು ಹೊಂದಿವೆ' ಎಂದು ಅಧಿಕಾರಿ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com