ದಕ್ಷಿಣ ರಾಜ್ಯಗಳಲ್ಲಿ ಆನೆ ಗಣತಿ: ಮುಂಚೂಣಿಯಲ್ಲಿ ಕರ್ನಾಟಕ ಅರಣ್ಯ ಇಲಾಖೆ

ಕರ್ನಾಟಕದ ಕಾಫಿ ಎಸ್ಟೇಟ್‌ಗಳಾದ ಹಾಸನ ಮತ್ತು ಚಿಕ್ಕಮಗಳೂರಿನಲ್ಲಿ ವಾಸಿಸುವ ಆನೆಗಳನ್ನು ಸಹ ಗಣತಿ ಕಾರ್ಯದಲ್ಲಿ ಪರಿಗಣಿಸಲಾಗುತ್ತಿದೆ.
File image
ಸಂಗ್ರಹ ಚಿತ್ರ
Updated on

ಬೆಂಗಳೂರು: ದಕ್ಷಿಣದ ಮೂರು ರಾಜ್ಯಗಳಲ್ಲಿ ಮೇ 23 ರಿಂದ 25 ರವರೆಗೆ ವಾರ್ಷಿಕ ಆನೆ ಗಣತಿ ಕಾರ್ಯವನ್ನು ಸಂಘಟಿಸುವ ಮತ್ತು ನಡೆಸುವ ಕಾರ್ಯದಲ್ಲಿ ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯು ಸತತ ಎರಡನೇ ವರ್ಷವೂ ಮುಂಚೂಣಿಯಲ್ಲಿದೆ.

ಹಿಂದಿನ ವರ್ಷದಂತೆ, ಈ ವರ್ಷವೂ ಮೈಸೂರು ಆನೆ ಮೀಸಲು ಪ್ರದೇಶದ ಜೊತೆಗೆ, 10 ಗಡಿ ಅರಣ್ಯ ವಿಭಾಗಗಳಲ್ಲಿ ಮೌಲ್ಯಮಾಪನ ನಡೆಯುತ್ತಿದ್ದು, ಕರ್ನಾಟಕದ ಕಾಫಿ ಎಸ್ಟೇಟ್‌ಗಳಾದ ಹಾಸನ ಮತ್ತು ಚಿಕ್ಕಮಗಳೂರಿನಲ್ಲಿ ವಾಸಿಸುವ ಆನೆಗಳನ್ನು ಸಹ ಗಣತಿ ಕಾರ್ಯದಲ್ಲಿ ಪರಿಗಣಿಸಲಾಗುತ್ತಿದೆ. ಕೇರಳ ಮತ್ತು ತಮಿಳುನಾಡಿನಲ್ಲಿಯೂ ಗಣತಿ ನಡೆಯಲಿದೆ. ಅಖಿಲ ಭಾರತ ಆನೆ ಗಣತಿಯನ್ನು ಐದು ವರ್ಷಗಳಿಗೊಮ್ಮೆ ಮಾಡಲಾಗುತ್ತದೆ, ಆದರೆ ಕರ್ನಾಟಕದಲ್ಲಿ, ಹುಲಿ ಗಣತಿಯಂತೆಯೇ, ಮಾನವ ಮತ್ತು ಪ್ರಾಣಿ ಸಂಘರ್ಷವನ್ನು ತಗ್ಗಿಸಲು ವಾರ್ಷಿಕವಾಗಿ ಆನೆ ಗಣತಿಯನ್ನು ಸಹ ಮಾಡಲಾಗುತ್ತಿದೆ.

2024 ರಲ್ಲಿ ಬಂಡೀಪುರ ಹುಲಿ ಮೀಸಲು ಪ್ರದೇಶದಲ್ಲಿ ನಡೆದ ಸಭೆಯಲ್ಲಿ ದಕ್ಷಿಣ ಆನೆ ರಾಜ್ಯಗಳನ್ನು ಈ ಕಾರ್ಯಕ್ರಮದಲ್ಲಿ ಒಳಗೊಳ್ಳುವ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು. ಅದರ ನಂತರ, 2024 ರಲ್ಲಿ ಮೊದಲ ಸಂಯೋಜಿತ ಅಂದಾಜು ಗಣತಿ ಮಾಡಲಾಯಿತು. ಇದಕ್ಕೆ ಕರ್ನಾಟಕವು ಮುಂದಾಳತ್ವ ವಹಿಸಿತು. ಮೇ 20 ರಂದು, ಅರಣ್ಯಾಧಿಕಾರಿಗಳಿಗೆ ವಿಧಾನದ ಕುರಿತು ತರಬೇತಿ ನೀಡಲಾಗುವುದು" ಎಂದು ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ವನ್ಯಜೀವಿ ಶ್ರೀನಿವಾಸುಲು ತಿಳಿಸಿದ್ದಾರೆ.

ಭಾರತೀಯ ವನ್ಯಜೀವಿ ಸಂಸ್ಥೆ ಮತ್ತು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ನಿಗದಿಪಡಿಸಿದ ಸ್ವರೂಪವನ್ನು ಮೌಲ್ಯಮಾಪನಕ್ಕಾಗಿ ಬಳಸಲಾಗುತ್ತದೆ. ಗಣತಿಯಲ್ಲಿ ಎರಡು ವಿಧಾನ. ಒಂದು ನೇರ ಎಣಿಕೆ, ಸಗಣಿ ವಿಶ್ಲೇಷಣೆ ಮತ್ತು ಆನೆ ಪ್ರೊಫೈಲಿಂಗ್ ಪರೋಕ್ಷ ವಿಧಾನವಾಗಿದೆ. ಐಐಎಸ್‌ಸಿಯ ಜೊತೆಗೆ ಆನೆ ತಜ್ಞರು ಸಹ ಈ ಕೆಲಸದಲ್ಲಿ ಭಾಗವಾಗಲಿದ್ದಾರೆ.

File image
ಗಜ ಗಣತಿ ಮಾಡಲು ಆನೆ ಲದ್ದಿ ಸಂಗ್ರಹ ಅತ್ಯಗತ್ಯ: ತಜ್ಞರು

2024 ರಲ್ಲಿ, ಕರ್ನಾಟಕವು ನೆರೆಯ ರಾಜ್ಯಗಳ ಗಡಿಯಲ್ಲಿರುವ 10 ವಿಭಾಗಗಳಲ್ಲಿ 4,126 ಆನೆಗಳನ್ನು ದಾಖಲಿಸಿದೆ. ಬಂಡೀಪುರ ಹುಲಿ ಮೀಸಲು ಪ್ರದೇಶದಲ್ಲಿ ಅತಿ ಹೆಚ್ಚು ಆನೆಗಳು - 1,042 ಮತ್ತು ವಿರಾಜಪೇಟೆಯಲ್ಲಿ ಕಡಿಮೆ ಅಂದರೆ 23 ಆನೆಗಳಿವೆ ಎಂದು ವರದಿಗಳು ತೋರಿಸಿವೆ. 2023 ರಲ್ಲಿ, ಅರಣ್ಯಾಧಿಕಾರಿಗಳು ಕರ್ನಾಟಕದಾದ್ಯಂತ 6,395 ಆನೆಗಳನ್ನು ಎಣಿಸಿದ್ದಾರೆ. ಇದು ಭಾರತದ ಆನೆಗಳ ಜನಸಂಖ್ಯೆಯ ಶೇ. 25 ರಷ್ಟು ಆಗಿದೆ.

ಮೈಸೂರು ಆನೆ ಮೀಸಲು ಪ್ರದೇಶ ಮತ್ತು ಸಮೀಕ್ಷೆ ನಡೆಸಲಾಗುತ್ತಿರುವ ವಿಭಾಗಗಳನ್ನು ಹೊರತುಪಡಿಸಿ, ರಾಜ್ಯದ ಉಳಿದ ಭಾಗಗಳಲ್ಲಿ ಸುಮಾರು 100-200 ಆನೆಗಳು ಇರುತ್ತವೆ ಎಂದು ಆನೆ ತಜ್ಞ ಆರ್ ಸುಕುಮಾರ್ ಹೇಳಿದ್ದಾರೆ.

ಮೈಸೂರು ಆನೆ ಮೀಸಲು ಪ್ರದೇಶವು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ, ಕಾವೇರಿ ವನ್ಯಜೀವಿ ಅಭಯಾರಣ್ಯ, ಎಂಎಂ ಹಿಲ್ಸ್ ವನ್ಯಜೀವಿ ಅಭಯಾರಣ್ಯ, ಕೊಳ್ಳೇಗಾಲ, ಬಿಆರ್‌ಟಿ ಹುಲಿ ಮೀಸಲು ಪ್ರದೇಶ, ಬಂಡೀಪುರ ಹುಲಿ ಮೀಸಲು ಪ್ರದೇಶ, ಪುಷ್ಪಗಿರಿ ವನ್ಯಜೀವಿ ಅಭಯಾರಣ್ಯ, ಬ್ರಹ್ಮಗಿರಿ ವನ್ಯಜೀವಿ ಅಭಯಾರಣ್ಯ ಮತ್ತು ಭದ್ರ ಹುಲಿ ಮೀಸಲು ಪ್ರದೇಶಗಳನ್ನು ಒಳಗೊಂಡಿದೆ.

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ, ಕಾವೇರಿ ವನ್ಯಜೀವಿ ಅಭಯಾರಣ್ಯ, ಎಂಎಂ ಹಿಲ್ಸ್ ವನ್ಯಜೀವಿ ಅಭಯಾರಣ್ಯ, ಬಿಆರ್‌ಟಿ ಹುಲಿ ಮೀಸಲು ಪ್ರದೇಶ, ಬಂಡೀಪುರ ಹುಲಿ ಮೀಸಲು ಪ್ರದೇಶ, ಭದ್ರ ಹುಲಿ ಮೀಸಲು ಪ್ರದೇಶ, ವಿರಾಜಪೇಟೆ, ಮಡಿಕೇರಿ- ವನ್ಯಜೀವಿ ಮತ್ತು ಪ್ರಾದೇಶಿಕ ಮತ್ತು ಕೋಲಾರವ ಹತ್ತು ಅರಣ್ಯ ವಿಭಾಗಗಳಾಗಿವೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com