ಜ್ಞಾನಭಾರತಿ ಕ್ಯಾಂಪಸ್‌ಗೆ ಶೀಘ್ರದಲ್ಲೇ 'ಪಾರಂಪರಿಕ ತಾಣ' ಸ್ಥಾನಮಾನ!

ಜ್ಞಾನಭಾರತಿ ಅವರಣದಲ್ಲಿ ಲಕ್ಷಾಂತರ ಬೃಹತ್‌ ಮರಗಳಿದ್ದು, ಇಲ್ಲಿನ ಜೀವವೈವಿಧ್ಯತೆಯನ್ನು ಮುಂದಿನ ಪೀಳಿಗೆಗೆ ಕಾಪಾಡುವ ಮತ್ತು ಬೆಂಗಳೂರು ಮಹಾನಗರದ ಹಸಿರು ವಲಯ ರಕ್ಷಿಸುವ ಹೊಣೆ ಇಲಾಖೆ ಮೇಲಿದೆ.
ಜ್ಞಾನಭಾರತಿ ಕ್ಯಾಂಪಸ್
ಜ್ಞಾನಭಾರತಿ ಕ್ಯಾಂಪಸ್
Updated on

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್‌ಗೆ ಶೀಘ್ರದಲ್ಲೇ ಪಾರಂಪರಿಕ ಸ್ಥಾನಮಾನ ಸಿಗಲಿದ್ದು, ಇದರೊಂದಿಗೆ ಕ್ಯಾಂಪಸ್‌ನಲ್ಲಿ ಸ್ಕೈಡೆಕ್ ನಿರ್ಮಿಸುವ ಉಪಮುಖ್ಯಮಂತ್ರಿ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಯೋಜನೆಗೆ ಹಿನ್ನೆಡೆಯಾಗುವ ಸಾಧ್ಯತೆಗಳಿವೆ.

ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿರುವ ಹಸಿರು ಪರಿಸರವನ್ನು ಕಾಪಾಡುವ ಉದ್ದೇಶದಿಂದ ಜೀವ ವೈವಿಧ್ಯ ಕಾಯ್ದೆ 2002 ರ ಅಡಿ ‘ಪಾರಂಪರಿಕ ತಾಣ’ ಎಂದು ಘೋಷಿಸಲು ಪ್ರಸ್ತಾವನೆ ಸಲ್ಲಿಸುವಂತೆ ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ಅವರು ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿಗೆ ಸೂಚಿಸಿದ್ದಾರೆ.

ಜ್ಞಾನಭಾರತಿ ಅವರಣದಲ್ಲಿ ಲಕ್ಷಾಂತರ ಬೃಹತ್‌ ಮರಗಳಿದ್ದು, ಇಲ್ಲಿನ ಜೀವವೈವಿಧ್ಯತೆಯನ್ನು ಮುಂದಿನ ಪೀಳಿಗೆಗೆ ಕಾಪಾಡುವ ಮತ್ತು ಬೆಂಗಳೂರು ಮಹಾನಗರದ ಹಸಿರು ವಲಯ ರಕ್ಷಿಸುವ ಹೊಣೆ ಇಲಾಖೆ ಮೇಲಿದೆ.

ಆದರೆ, ಜ್ಞಾನಭಾರತಿ ಪ್ರದೇಶದಲ್ಲಿ ಮರಗಳನ್ನು ಕಡಿದು ವಿವಿಧ ನಿರ್ಮಾಣ ಕಾರ್ಯಕೈಗೊಳ್ಳಲು ಪ್ರಯತ್ನಗಳು ನಡೆಯುತ್ತಿದ್ದು, ಇದನ್ನು ತಡೆದು ಜೀವ ವೈವಿಧ್ಯ ರಕ್ಷಿಸುವಂತೆ ಪರಿಸರ ಪ್ರೇಮಿಗಳು ಮನವಿ ಮಾಡಿದ್ದಾರೆ.

ಜೀವ ವೈವಿದ್ಯ ಕಾಯಿದೆ 2022ರ ಅಡಿಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಈ ಹಸಿರು ಆವರಣವನ್ನು ಪಾರಂಪರಿಕ ತಾ ಎಂದು ಘೋಷಿಸಲು ಸಾಧ್ಯವಿದ್ದಲ್ಲಿ, ಪ್ರಸ್ತಾವನೆಯನ್ನು ಕಡತದಲ್ಲಿ ಸಲ್ಲಿಸುವಂತೆ ಸೂಚಿಸಿದ್ದಾರೆ.

ಪ್ರಸ್ತಾವಿತ ಪ್ರದೇಶವನ್ನು 'ಜೀವವೈವಿಧ್ಯ ಪಾರಂಪರಿತ ತಾಣ' ಎಂದು ಘೋಷಿಸಿದರೆ, ಜೀವವೈವಿಧ್ಯ ಕಾಯ್ದೆ, 2002 ರ ಪ್ರಕಾರ ನಿರ್ಮಾಣದ ಮೇಲಿನ ಎಲ್ಲಾ ರಕ್ಷಣಾತ್ಮಕ ಕ್ರಮಗಳು ಮತ್ತು ನಿರ್ಬಂಧಗಳನ್ನು ವಿಧಿಸಲಾಗುವುದು ಎಂದು ಕೆಬಿಬಿಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಗೋವರ್ಧನ್ ಸಿಂಗ್ ಅವರು ಹೇಳಿದ್ದಾರೆ.

ಜ್ಞಾನಭಾರತಿ ಕ್ಯಾಂಪಸ್
ಪಾರಂಪರಿಕ ಇತಿಹಾಸ-ಹೆಗ್ಗುರುತುಗಳ ಅಳಿಸಿಹಾಕುವ ಯಾವುದೇ ನಿರ್ಣಯ ಮೈಸೂರಿನ ಸಾಂಸ್ಕೃತಿಕ ಪರಂಪರೆಯನ್ನು ಕೊಂದಂತಾಗುತ್ತದೆ: ಯದುವೀರ್ ಆಕ್ಷೇಪ

ಸ್ಥಳದಲ್ಲಿ ವಿವರವಾದ ಸಮೀಕ್ಷೆಯನ್ನು ಕೈಗೊಳ್ಳಲಾಗುವುದು. ಪರಂಪರೆಯ ತಾಣವನ್ನು ಘೋಷಿಸಲು, ಶ್ರೀಮಂತ ಮತ್ತು ವಿಶಿಷ್ಟ ಸಸ್ಯ ಪ್ರಭೇದಗಳು ಇರಬೇಕು. ಭೂಮಿಯ ಸ್ಥಿತಿಯೂ ನಿರ್ಣಾಯಕ ಪಾತ್ರ ವಹಿಸುತ್ತದೆ. ಒಂದು ವೇಳೆ ಈ ಸ್ಥಳವನ್ನು ಪಾರಂಪರಿಕ ತಾಣವೆಂದು ಘೋಷಿಸಿದ್ದೇ ಆದರೆ, ಸ್ಕೈಡೆಕ್ ನಿರ್ಮಿಸಲು ಸಾಧ್ಯವಾಗುವುದಿಲ್ಲ. ಪಾರಂಪರಿಕ ತಾಣವೆಂದು ಘೋಷಿಸಲಾದ ಪ್ರದೇಶದ ಮೇಲೆ ಯಾವುದೇ ಪರಿಣಾಮ ಬೀರದಂತೆ ನೋಡಿಕೊಳ್ಳಲಾಗುತ್ತದೆ. ಅಸ್ತಿತ್ವದಲ್ಲಿರುವ ರಚನೆಯ ವಿಸ್ತರಣೆಯ ಮೂಲಕ ಲಂಬವಾದ ನಿರ್ಮಾಣವನ್ನು ಮಾತ್ರ ಅನುಮತಿಸಲಾಗುತ್ತದೆ ಎಂದು ಅರಣ್ಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಬೆಂಗಳೂರು ಪಶ್ಚಿಮದಲ್ಲಿ ಉಳಿದಿರುವ ಕೊನೆಯ ದೊಡ್ಡ ಹಸಿರು ಪ್ರದೇಶ ಇದಾಗಿದ್ದು, ಅದನ್ನು ರಕ್ಷಿಸಬೇಕಾದ ಕಾರಣ ಇದನ್ನು ಪರಂಪರೆಯ ತಾಣವೆಂದು ಘೋಷಿಸುವ ಅಗತ್ಯವಿದೆ ಎಂದು ತಿಳಿಸಿದ್ದಾರೆ.

ಬೆಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಟಿಜೆ ರೇಣುಕಾ ಪ್ರಸಾದ್ ಅವರು ಮಾತನಾಡಿ, ಕ್ಯಾಂಪಸ್ 1,112 ಎಕರೆಗಳಲ್ಲಿದ್ದು, ಸುಮಾರು 660 ಎಕರೆ ಭೂಮಿ ಹಸಿರಿನಿಂದ ಕೂಡಿದೆ. ಸಾಕಷ್ಟು ಮರಗಳು ಕ್ಯಾಂಪಸ್ ನಲ್ಲಿದೆ. ಒಂದು ಲಕ್ಷಕ್ಕೂ ಹೆಚ್ಚು ಮರಗಳಿವೆ, 1,300 ಅಪರೂಪದ ಮರಗಳಿವೆ. 150 ಪಕ್ಷಿಗಳು, 160 ಚಿಟ್ಟೆಗಳು ಮತ್ತು 50 ಜಾತಿಗಳ ಸರೀಸೃಪ ಹಾಗೂ ಅನೇಕ ಅಪರೂಪದ ಔಷಧೀಯ ಸಸ್ಯಗಳೂ ಇವೆ ಎಂದ ಮಾಹಿತಿ ನೀಡಿದ್ದಾರೆ.

ಕ್ಯಾಂಪಸ್ ನಲ್ಲಿ 395 ಎಕರೆಗಳನ್ನು ಎನ್‌ಎಲ್‌ಎಸ್‌ಐಯು, ಕಲಾಗ್ರಾಮ, ಬಿ.ಆರ್. ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಇತರ ಸಂಸ್ಥೆಗಳಿಗೆ ಗುತ್ತಿಗೆ ನೀಡಲಾಗಿದೆ. ಅಲ್ಲದೆ, 150 ಎಕರೆಗಳನ್ನು ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿ ಬಳಸಿಕೊಂಡಿದೆ. ಈ ಪ್ರದೇಶವನ್ನು ಜೀವವೈವಿಧ್ಯ ಪಾರಂಪರಿಕ ತಾಣವೆಂದು ಘೋಷಿಸಲು ಸುಮಾರು ನಾಲ್ಕು ತಿಂಗಳ ಹಿಂದೆ ಸಚಿವ ಈಶ್ವರ್ ಖಂಡ್ರೆಯವರಿಗೆ ಪ್ರಸ್ತಾವನೆಯನ್ನು ಕಳುಹಿಸಲಾಗಿತ್ತು. ಮುಖ್ಯಮಂತ್ರಿ, ರಾಜ್ಯಪಾಲರು ಮತ್ತು ಪ್ರಧಾನಿಮಂತ್ರಿಗಳಿಗು ಮನವಿ ಸಲ್ಲಿಸಲಾಗಿಗಿತ್ತು. ಜ್ಞಾನಭಾರತಿ ಕ್ಯಾಂಪಸ್ ಅಷ್ಟೇ ಅಲ್ಲದೆ, ನಂದಿ ಬೆಟ್ಟವನ್ನೂ ಜೀವವೈವಿಧ್ಯ ಪಾರಂಪರಿಕ ತಾಣವೆಂದು ಘೋಷಿಸುವಂತೆ ಮನವಿ ಮಾಡಿದ್ದೇವೆಂದು ತಿಳಿಸಿದ್ದಾರೆ.

ಪರಿಸರವಾದಿ ಡಾ. ಎ.ಎನ್. ಯಲ್ಲಪ್ಪ ರೆಡ್ಡಿ ಅವರು ಮಾತನಾಡಿ, ಕ್ಯಾಂಪಸ್ ನಲ್ಲಿ ವಿಶಿಷ್ಟ ಉದ್ಯಾನಗಳನ್ನು ರಚಿಸಲಾಗಿದ್ದು, ಇದರಲ್ಲಿ ಪಶ್ಚಿಮ ಘಟ್ಟಗಳಿಗೆ ಸ್ಥಳೀಯವಾಗಿರುವ ಅಪರೂಪದ ಸಸ್ಯ ಪ್ರಭೇದಗಳು ಸಹ್ಯಾದ್ರಿ ವನ, ತಪೋವನ ಮತ್ತು ಚರಕವನ ಸೇರಿವೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com