ಬಿಜೆಪಿ ಮಾಡೆಲ್‌ನಲ್ಲಿ ಹಣ ಆಯ್ದ ವ್ಯಕ್ತಿಗಳ ಕೈಯಲ್ಲಿರುತ್ತದೆ, ಆದರೆ ಕಾಂಗ್ರೆಸ್ ಬಡವರಿಗೆ ನೀಡುತ್ತದೆ: ರಾಹುಲ್ ಗಾಂಧಿ

ಕಾಂಗ್ರೆಸ್ ಸರ್ಕಾರ ಎರಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ನಡೆಸುತ್ತಿರುವ ಸಾಧನಾ ಸಮಾವೇಶದಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಅರ್ಹ ಫಲಾನುಭವಿಗಳಿಗೆ ಹಕ್ಕು ಪತ್ರಗಳನ್ನು ವಿತರಿಸಲಾಯಿತು.
ರಾಹುಲ್ ಗಾಂಧಿ - ಸಿದ್ದರಾಮಯ್ಯ
ರಾಹುಲ್ ಗಾಂಧಿ - ಸಿದ್ದರಾಮಯ್ಯ
Updated on

ಹೊಸಪೇಟೆ: ಬಿಜೆಪಿಯು ಆಯ್ದ ಶ್ರೀಮಂತರು ಸಂಪೂರ್ಣ ಹಣ ಮತ್ತು ಸಂಪನ್ಮೂಲಗಳನ್ನು ಪಡೆಯುವ ಮಾಡೆಲ್ ಅನ್ನು ಅನುಸರಿಸುತ್ತದೆ. ಆದರೆ, ಕಾಂಗ್ರೆಸ್ ಮಾಡೆಲ್‌ನಲ್ಲಿ ಹಣವನ್ನು ಬಡವರ ಬ್ಯಾಂಕ್ ಖಾತೆಗಳಿಗೆ ಮತ್ತು ಜೇಬಿಗೆ ಹಾಕಲಾಗುತ್ತದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮಂಗಳವಾರ ಹೇಳಿದ್ದಾರೆ.

ಕಾಂಗ್ರೆಸ್ ಸರ್ಕಾರ ಎರಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ನಡೆಸುತ್ತಿರುವ ಸಾಧನಾ ಸಮಾವೇಶದಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಅರ್ಹ ಫಲಾನುಭವಿಗಳಿಗೆ ಹಕ್ಕು ಪತ್ರಗಳನ್ನು ವಿತರಿಸಲಾಯಿತು. ಅವರ ದಾಖಲೆರಹಿತ ವಾಸಸ್ಥಳಗಳನ್ನು ಕಂದಾಯ ಗ್ರಾಮಗಳೆಂದು ಘೋಷಿಸಲಾಗಿದೆ.

'ಕಾಂಗ್ರೆಸ್ ಪಕ್ಷದ ಸರ್ಕಾರ ಎರಡು ವರ್ಷಗಳನ್ನು ಪೂರೈಸಿದೆ. ಚುನಾವಣೆಯ ಸಮಯದಲ್ಲಿ ನಾವು ನಿಮಗೆ ಐದು ಭರವಸೆಗಳನ್ನು ನೀಡಿದ್ದೆವು. ಕಾಂಗ್ರೆಸ್ ಪಕ್ಷ ಅವುಗಳನ್ನು ಪೂರೈಸುವುದಿಲ್ಲ ಎಂದು ಬಿಜೆಪಿಯವರು ಹೇಳಿದರು. ಇದನ್ನು ಮಾಡಲು ಸಾಧ್ಯವಿಲ್ಲ ಎಂದು ಪ್ರಧಾನಿ ಹೇಳಿದರು. ಆದರೆ, ನಾವು ನೀಡಿದ ಭರವಸೆಗಳನ್ನು ಪೂರೈಸಿದ್ದೇವೆ' ಎಂದು ಹೇಳಿದರು.

ಸರ್ಕಾರ ಜಾರಿಗೆ ತಂದಿರುವ ಐದು ಖಾತರಿ ಯೋಜನೆಗಳನ್ನು ಪಟ್ಟಿ ಮಾಡಿದ ಅವರು, 'ಕರ್ನಾಟಕದ ಬಡವರ ಬ್ಯಾಂಕ್ ಖಾತೆಗೆ ಹಣವನ್ನು ಹಾಕುವುದಾಗಿ ನಾವು ನಿಮಗೆ ಹೇಳಿದ್ದೇವೆ. ಇಂದು, ಸಾವಿರಾರು ಕೋಟಿ ರೂಪಾಯಿಗಳನ್ನು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಹಾಕಲಾಗುತ್ತಿದೆ. ಈ ಹಣವನ್ನು ನೀವು ನಿಮ್ಮ ಮಕ್ಕಳ ಶಿಕ್ಷಣಕ್ಕಾಗಿ, ನಿಮ್ಮ ಆರೋಗ್ಯಕ್ಕಾಗಿ ಬಳಸುತ್ತೀರಿ. ಇದನ್ನೇ ನಾವು ಬಯಸಿದ್ದೆವು. ನಿಮ್ಮ ಹಣವು ನಿಮ್ಮ ಜೇಬಿಗೆ ಹಿಂತಿರುಗುತ್ತಿದೆ' ಎಂದರು.

ರಾಹುಲ್ ಗಾಂಧಿ - ಸಿದ್ದರಾಮಯ್ಯ
ಚುನಾವಣಾ ರಾಜಕೀಯಕ್ಕೆ ಸಹಕಾರ ಸಚಿವ ಕೆಎನ್‌ ರಾಜಣ್ಣ ನಿವೃತ್ತಿ ಘೋಷಣೆ

'ಭಾರತದ ಸಂಪೂರ್ಣ ಹಣವು ಆಯ್ದ ಜನರಿಗೆ ಮಾತ್ರ ಸಿಗಲಿ ಎಂದು ಬಿಜೆಪಿ ಬಯಸುತ್ತದೆ. ಆದರೆ, ಈ ಹಣವು ಬಡವರು, ಹಿಂದುಳಿದವರು, ದಲಿತರು, ಆದಿವಾಸಿಗಳ ಜೇಬಿಗೆ ನೇರವಾಗಿ ಹೋಗಬೇಕೆಂದು ನಾವು ಬಯಸುತ್ತೇವೆ. ನಾವು ನಿಮ್ಮ ಜೇಬಿಗೆ ಹಣವನ್ನು ಹಾಕಿದಾಗ, ಆ ಹಣ ಮಾರುಕಟ್ಟೆಗೆ ಹೋಗುತ್ತದೆ ಮತ್ತು ಇದರಿಂದಾಗಿ ಉತ್ಪಾದನೆ ಹೆಚ್ಚಾಗುತ್ತದೆ ಮತ್ತು ನೀವು ಈ ಹಣವನ್ನು ನಿಮ್ಮ ಹಳ್ಳಿಗಳಲ್ಲಿ ಅಥವಾ ನಗರಗಳಲ್ಲಿ ಖರ್ಚು ಮಾಡುವುದರಿಂದ ಆ ಹಣವು ಹಳ್ಳಿಗಳಿಗೆ ಸೇರುತ್ತದೆ ಮತ್ತು ಕರ್ನಾಟಕದ ಆರ್ಥಿಕತೆಯು ಅದರಿಂದ ಪ್ರಯೋಜನ ಪಡೆಯುತ್ತದೆ' ಎಂದು ಅವರು ಹೇಳಿದರು.

ಬಿಜೆಪಿಯ ಮಾದರಿಯಲ್ಲಿ, ಸಂಪೂರ್ಣ ಹಣವನ್ನು ಎರಡು-ಮೂರು ಬಿಲಿಯನೇರ್‌ಗಳಿಗೆ ನೀಡಲಾಗುತ್ತದೆ. ಈ ಬಿಲಿಯನೇರ್‌ಗಳು ಹಳ್ಳಿಗಳಲ್ಲಿ ಅಥವಾ ಪಟ್ಟಣಗಳಲ್ಲಿ ಹಣವನ್ನು ಖರ್ಚು ಮಾಡುವುದಿಲ್ಲ. ಅವರು ಲಂಡನ್, ನ್ಯೂಯಾರ್ಕ್ ಮತ್ತು ಇತರ ಸ್ಥಳಗಳಲ್ಲಿ ಆಸ್ತಿಗಳನ್ನು ಖರೀದಿಸುತ್ತಾರೆ ಎಂದು ರಾಹುಲ್ ಗಾಂಧಿ ದೂರಿದರು.

'ಬಿಜೆಪಿ ಮಾದರಿಯಲ್ಲಿ ನಿಮ್ಮ ಹಣವು ಆಯ್ದ ಕೆಲವರ ಕೈಗೆ ಹೋಗುತ್ತದೆ. ಅವರ ಮಾದರಿಯಲ್ಲಿ ಉದ್ಯೋಗ ಕೊರತೆ ಉಂಟಾಗುತ್ತದೆ. ಆದರೆ, ನಮ್ಮ ಮಾದರಿಯಲ್ಲಿ ಉದ್ಯೋಗ ಸೃಷ್ಟಿಯಾಗುತ್ತದೆ. ಅವರ ಮಾದರಿಯಲ್ಲಿ, ನೀವು ಅನಾರೋಗ್ಯದಿಂದ ಬಳಲುತ್ತೀರಿ, ಅದರಿಂದ ನೀವು ಸಾಲ ಮಾಡಿಕೊಳ್ಳುವಿರಿ. ನಮ್ಮ ಮಾದರಿಯಲ್ಲಿ, ನಿಮ್ಮ ಜೇಬಿನಲ್ಲಿ ಹಣವಿರುತ್ತದೆ ಮತ್ತು ನಿಮಗೆ ಚಿಕಿತ್ಸೆ ನೀಡಲಾಗುತ್ತದೆ. ಅವರ ಮಾದರಿಯಲ್ಲಿ ನೀವು ಶಿಕ್ಷಣಕ್ಕಾಗಿ ಖಾಸಗಿ ಶಾಲೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಿಗೆ ಲಕ್ಷಾಂತರ ಹಣವನ್ನು ನೀಡುತ್ತೀರಿ ಮತ್ತು ಸಾಲವನ್ನು ಎದುರಿಸುತ್ತೀರಿ. ಆದರೆ, ನಮ್ಮ ಮಾದರಿಯಲ್ಲಿ ನಾವು ನಿಮಗೆ ಹಣವನ್ನು ನೀಡುತ್ತೇವೆ' ಎಂದು ಅವರು ಹೇಳಿದರು.

ಈ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಪಕ್ಷದ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ, ಪಕ್ಷದ ಮುಖಂಡರು ಮತ್ತು ಸಚಿವರು ಉಪಸ್ಥಿತರಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com