5 ಲಕ್ಷ ರೂ ಲಂಚ ಪಡೆಯುವಾಗ ​ಇಬ್ಬರು BBMP ಇಂಜಿನಿಯರ್​ಗಳು ಲೋಕಾಯುಕ್ತ ಬಲೆಗೆ

ಎನ್ಒಸಿ ನೀಡಲು ಸಂಜಯ್ ಎಂಬುವವರಿಗೆ 10 ಲಕ್ಷ ರೂಪಾಯಿ ಲಂಚ ನೀಡುವಂತೆ ಈ ಇಬ್ಬರು ಇಂಜಿನಿಯರ್​ಗಳು ಬೇಡಿಕೆ ಇಟ್ಟಿದ್ದರು.
BBMP
ಬಿಬಿಎಂಪಿ
Updated on

ಬೆಂಗಳೂರು: ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ(BBMP)ಯ ಇಬ್ಬರು ಇಂಜಿನಿಯರ್​ಗಳು ಬುಧವಾರ ಐದು ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ವ್ಯಕ್ತಿಯೊಬ್ಬರಿಂದ ಲಂಚ ಸ್ವೀಕರಿಸುತ್ತಿದ್ದ ಹೆಬ್ಬಾಳ ಉಪ ವಿಭಾಗದ ಎಇಇ ಮಹದೇವ ಮತ್ತು ಆರ್​ಎಂವಿ ಉಪ ವಿಭಾಗದ ಎಇ ಸುರೇಂದ್ರ ಅವರನ್ನು ಲೋಕಾಯುಕ್ತ ಅಧಿಕಾರಿಗಳ ಬಂಧಿಸಿ, ಹಣ ಜಪ್ತಿ ಮಾಡಿದ್ದಾರೆ.

ಎನ್ಒಸಿ ನೀಡಲು ಸಂಜಯ್ ಎಂಬುವವರಿಗೆ 10 ಲಕ್ಷ ರೂಪಾಯಿ ಲಂಚ ನೀಡುವಂತೆ ಈ ಇಬ್ಬರು ಇಂಜಿನಿಯರ್​ಗಳು ಬೇಡಿಕೆ ಇಟ್ಟಿದ್ದರು. ಅದರಂತೆ ಮುಂಗಡವಾಗಿ 5 ಲಕ್ಷ ರೂ. ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಅಧಿಕಾರಿಗಳು ರೆಡ್​ ಹ್ಯಾಂಡ್​ ಆಗಿ ಹಿಡಿದಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಲೋಕಾಯುಕ್ತ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com