'ಕಳ್ಳರಿಗೆ ದೇವರ ಅಭಯ, ಕದ್ದರೆ ದೇವಿ ಆಶೀರ್ವಾದ': ಗದಗದ ದಂಡಿನ ದುರ್ಗಮ್ಮನ ದೇವಸ್ಥಾನದಲ್ಲಿ ವಿಶೇಷ ಆಚರಣೆ

ಉತ್ತರ ಕರ್ನಾಟಕ ಮತ್ತು ನೆರೆಯ ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಿಂದ ಸಾವಿರಾರು ಭಕ್ತರು ವಾರಪೂರ್ತಿ ನಡೆಯುವ ದಂಡಿನ ದುರ್ಗಮ್ಮ ಜಾತ್ರೆಗೆ ಹಾಜರಾಗುತ್ತಾರೆ. ಇದು ಬುಡಕಟ್ಟು ಹಬ್ಬವಾಗಿದ್ದು, ದೇವಾಲಯದ ಆವರಣದಲ್ಲಿ ನಡೆಯುತ್ತದೆ.
Devotees prostrate at the Dandina Durgamma fair
ದಂಡಿನ ದುರ್ಗಮ್ಮ ಜಾತ್ರೆಯಲ್ಲಿ ಭಕ್ತರು
Updated on

ಗದಗ: ಕದಿಯುವುದು ತಪ್ಪು, ಆದರೆ ಇಲ್ಲಿ ಕಳ್ಳತನ ಮಾಡಿದರೆ ದೇವಿ ಒಲಿಯುತ್ತಾಳೆ, ಗೊಂದಲ ಎನಿಸುತ್ತಿಯೇ, ಹೌದು ಇದು ಸತ್ಯ, ಗದಗ ಪಟ್ಟಣದಿಂದ ಬಾಗಲಕೋಟೆಗೆ ಹೋಗುವ ದಾರಿಯಲ್ಲಿ 10 ಕಿ.ಮೀ ದೂರದಲ್ಲಿ ದಂಡಿನ ದುರ್ಗಮ್ಮನ ದೇವಸ್ಥಾನ ಸಿಗುತ್ತದೆ, ಅಲ್ಲಿ ನೀವು ಕಳ್ಳತನ ಮಾಡಿದ್ದಕ್ಕೆ ಕ್ಷಮೆ ಪಡೆಯುವುದಲ್ಲದೆ, ಮಾಡಿದ ಪವಿತ್ರ ಕಾರ್ಯಕ್ಕೆ ಆಶೀರ್ವಾದ ಪಡೆಯುತ್ತೀರಿ.

ಉತ್ತರ ಕರ್ನಾಟಕ ಮತ್ತು ನೆರೆಯ ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಿಂದ ಸಾವಿರಾರು ಭಕ್ತರು ವಾರಪೂರ್ತಿ ನಡೆಯುವ ದಂಡಿನ ದುರ್ಗಮ್ಮ ಜಾತ್ರೆಗೆ ಹಾಜರಾಗುತ್ತಾರೆ, ಇದು ಬುಡಕಟ್ಟು ಹಬ್ಬವಾಗಿದ್ದು, ದೇವಿಯ ಆಶೀರ್ವಾದವನ್ನು ಪಡೆಯಲು ದೇವಾಲಯದ ಆವರಣದಲ್ಲಿ ನಡೆಯುತ್ತದೆ.

ಹಬ್ಬವು ಮಂಗಳವಾರ ಪ್ರಾರಂಭವಾಗಿದ್ದು ಒಂದು ವಾರ ಕಾಲ ನಡೆಯುುತ್ತದೆ. ಈ ವೇಳೆ ನಿಮ್ಮ ಮೊಬೈಲ್ ಫೋನ್‌ಗಳು, ಪರ್ಸ್‌ಗಳು ಮತ್ತು ಆಭರಣಗಳನ್ನು ಜೋಪಾನವಾಗಿರಿಸಿಕೊಳ್ಳಲು ಪ್ರಯತ್ನಿಸಬೇಕು. ಏಕೆಂದರೆ ಇವು ಜಾತ್ರೆಯಲ್ಲಿ ಕಳ್ಳರ ನೆಚ್ಚಿನ ವಸ್ತುಗಳಾಗಿರುತ್ತವೆ.

ಇಷ್ಟೆಲ್ಲಾ ಇದ್ದರೂ, ಜಾತ್ರೆಯ ಸಮಯದಲ್ಲಿ ಕಳ್ಳತನದ ಬಗ್ಗೆ ಕೆಲವೇ ದೂರುಗಳು ಬಂದಿವೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ಆದಾಗ್ಯೂ, ದೇವಸ್ಥಾನಕ್ಕೆ ಭೇಟಿ ನೀಡುವ ಸಮಯದಲ್ಲಿ ಭಕ್ತರು ತಮ್ಮ ವಸ್ತುಗಳನ್ನು ಸುರಕ್ಷಿತವಾಗಿರಿಸಿಕೊಳ್ಳುವಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಕಿಡಿಗೇಡಿಗಳನ್ನು ತಡೆಯಲು ಮುನ್ನೆಚ್ಚರಿಕೆಯಾಗಿ ದೇವಾಲಯದ ಆವರಣದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವಂತೆ ಪೊಲೀಸರು ದೇವಾಲಯದ ಆಡಳಿತ ಮಂಡಳಿ ಮತ್ತು ಜಾತ್ರೆಯ ಸಂಘಟಕರನ್ನು ಕೇಳಿದ್ದರು. ಆದರೆ ಆಯೋಜಕರು ಸಿಸಿಟಿವಿ ಅಳವಡಿಸಲು ಹಿಂಜರಿಯುತ್ತಿರುವಂತೆ ತೋರುತ್ತಿದೆ.

ಜಾತ್ರೆಯು ಹಲವು ದಶಕಗಳಿಂದ ಆಚರಿಸಲ್ಪಡುತ್ತಿದೆ ಆದರೆ ಅದು ಯಾವಾಗ ಪ್ರಾರಂಭವಾಯಿತು ಎಂದು ಯಾರಿಗೂ ತಿಳಿದಿಲ್ಲ. ಮೊದಲು ಇದು ಒಂದು ಸಣ್ಣ ದೇವಾಲಯವಾಗಿತ್ತು, ಈಗ ಅದನ್ನು ನವೀಕರಿಸಲಾಗಿದೆ. ಭಕ್ತರು ಇನ್ನೂ ಕಳ್ಳತನದ ಆಚರಣೆಯನ್ನು ಆಚರಿಸುತ್ತಾರೆ. ಏನನ್ನಾದರೂ ಕದ್ದರೆ, ದೇವತೆ ಅವರನ್ನು ಆಶೀರ್ವದಿಸುತ್ತಾಳೆ ಎಂದು ಹಲವರು ಭಾವಿಸುತ್ತಾರೆ. ಕೆಲವರು ಪೊಲೀಸರಿಗೆ ದೂರು ನೀಡುತ್ತಾರೆ, ಮತ್ತು ಕೆಲವರು ದೂರು ನೀಡುವುದಿಲ್ಲ. ಕೆಲವು ತಾಂತ್ರಿಕ ಸಮಸ್ಯೆಯಿಂದಾಗಿ ಅದು ವಿಳಂಬವಾದ ಕಾರಣ ಇಂದಿನಿಂದ ನಾವು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುತ್ತೇವೆ ಎಂದು ಭಕ್ತೆ ಮತ್ತು ದೇವಾಲಯದ ಆಡಳಿತ ಸಮಿತಿಯ ಸದಸ್ಯೆ ದುರವ್ವ ದಂಡಿನ್ (68) ತಿಳಿಸಿದ್ದಾರೆ.

ಸ್ಥಳೀಯ ದಂತಕಥೆಯ ಪರಿಚಯವಿರುವ ವ್ಯಕ್ತಿಯ ಪ್ರಕಾರ, ಹಿಂದೆ, ಕಳ್ಳರು ತಮ್ಮ ವ್ಯವಹಾರದ ನಂತರ ಪಟ್ಟಣದಿಂದ ಹೊರಗೆ ಹೋಗಿ ದಂಡಿನ ದುರ್ಗಮ್ಮನನ್ನು ಪ್ರಾರ್ಥಿಸಲು ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದರು. ಕ್ರಮೇಣ, ಇದು ವಾರ್ಷಿಕ ಜಾತ್ರೆಯ ಸಮಯದಲ್ಲಿ ಒಂದು ಅಭ್ಯಾಸವಾಗಿ ಮಾರ್ಪಟ್ಟಿತು, ಅದರಲ್ಲಿ ಭಾಗವಹಿಸಿದ ಅನೇಕರು ಕಳ್ಳತನದಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿತರಾದರು, ಇದು ದೇವತೆಯ ಆಶೀರ್ವಾದವನ್ನು ತರುತ್ತದೆ ಎಂದು ನಂಬಿದ್ದರು.

ಆರಂಭದಲ್ಲಿ, ಭಕ್ತರು ಹೆಚ್ಚಾಗಿ ಹರಿಂಶಿಕರಿ ಬುಡಕಟ್ಟು ಸಮುದಾಯದವರಾಗಿದ್ದರು. ನಂತರದ ವರ್ಷಗಳಲ್ಲಿ, ಇತರ ಸಮುದಾಯಗಳ ಸದಸ್ಯರು ಸಹ ದೇವಾಲಯಕ್ಕೆ ಭೇಟಿ ನೀಡಲು ಪ್ರಾರಂಭಿಸಿದರು. ಪ್ರತಿ ಮೇ ಅಂತ್ಯದಲ್ಲಿ, ಸುಮಾರು 10,000 ಭಕ್ತರು ವಾರ್ಷಿಕ ಜಾತ್ರೆಗೆ ಭೇಟಿ ನೀಡುತ್ತಾರೆ, ಅಲ್ಲಿ ಅವರು ದೇವಾಲಯದಲ್ಲಿ ಕುರಿ, ಕೋಳಿ ಮತ್ತು ಇತರ ಪ್ರಾಣಿಗಳನ್ನು ಬಲಿ ನೀಡುತ್ತಾರೆ. ಈ ಪದ್ಧತಿಯನ್ನು 'ಬ್ಯಾಟಿ' ಎಂದು ಕರೆಯಲಾಗುತ್ತದೆ.

ಅನೇಕ ಕಾರ್ಯಕರ್ತರು ಮತ್ತು ಪ್ರಾಣಿ ಪ್ರಿಯರು ಈ ಪದ್ಧತಿಯ ವಿರುದ್ಧ ಭಕ್ತರನ್ನು ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ, ಆದರೆ ವ್ಯರ್ಥವಾಗಿದೆ. ಭಕ್ತರು 'ಬಲಿ' ಅರ್ಪಿಸಿದರೆ, ದೇವಿಯು ಅವರ ಕುಟುಂಬಗಳಿಗೆ ಆರೋಗ್ಯ ಮತ್ತು ಸಂಪತ್ತನ್ನು ನೀಡುತ್ತಾಳೆ ಎಂದು ನಂಬುತ್ತಾರೆ.

Devotees prostrate at the Dandina Durgamma fair
'ಸಂಸ್ಕೃತ'ಕ್ಕೆ ಮನಸೋತ ಗದಗ ಗ್ರಾಮಸ್ಥರು: 'ದೇವಭಾಷೆ' ಕಲಿಕೆಗೆ ಅತೀವ ಆಸಕ್ತಿ!

ಪ್ರತಿ ವರ್ಷ, ಅನೇಕರು ವಾರ್ಷಿಕ ಜಾತ್ರೆಗಾಗಿ ದಂಡಿನ ದುರ್ಗಮ್ಮ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಇಲ್ಲಿ, ಅವರು ಏನನ್ನಾದರೂ ಕದ್ದರೆ, ದೇವತೆ ಅವರನ್ನು ಆಶೀರ್ವದಿಸುತ್ತಾಳೆ ಎಂಬ ನಂಬಿಕೆ ಇದೆ. ಆದ್ದರಿಂದ, ಅಂಗಡಿಯವರು ಮತ್ತು ಭಕ್ತರು ಜಾಗರೂಕರಾಗಿರಬೇಕು ಎಂದು ಗದಗದ ಭಕ್ತ ಸಂಜು ಹರಿಂಶಿಕರಿ ಹೇಳಿದ್ದಾರೆ.

ನಿಮ್ಮನ್ನು ಕ್ಷಮಿಸಲಾಗುವುದು, ಆದರೆ ವಿವೇಕಯುತವಾಗಿರುವುದು ಉತ್ತಮ. ಗದಗದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ. ದೇವಸ್ಥಾನದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಭಕ್ತರು ಚಿನ್ನಾಭರಣಗಳನ್ನು ಧರಿಸಬಾರದು ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಒಯ್ಯಬಾರದು ಎಂದು ನಾವು ತಿಳಿಸಿದ್ದೇವೆ. ಭಕ್ತರು ಜಾಗರೂಕರಾಗಿರಬೇಕು ಮತ್ತು ಏನಾದರೂ ಅಸಾಮಾನ್ಯ ಸಂಗತಿ ಕಂಡುಬಂದರೆ ಅಥವಾ ಯಾವುದೇ ಕಳ್ಳತನ ನಡೆದರೆ ಪೊಲೀಸರಿಗೆ ತಿಳಿಸಬೇಕು ಎಂದು ಗದಗದ ಭಕ್ತ ಸಂಜು ಹರಿಂಶಿಕರಿ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com